ಅಯ್ಯೋ ದೇವರೇ! ಮಲಗಿದ್ದ ಬೀದಿನಾಯಿ ಮೇಲೆ ಕಾರು ಹತ್ತಿಸಿ ಪ್ರಾಣ ತೆಗೆದ ಪಾಪಿ
Man Killed Street dog : ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ಬೀದಿನಾಯಿ ಮೇಲೆ ಚಾಲಕನೊಬ್ಬ ಕಾರು ಹತ್ತಿಸಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಮೂಕಪ್ರಾಣಿ ಮೇಲೆ ಕಾರು ಹತ್ತಿಸಿರುವ ಚಾಲಕನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ಬೀದಿನಾಯಿ ಮೇಲೆ ಚಾಲಕನೊಬ್ಬ ಕಾರು ಹತ್ತಿಸಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಮೂಕಪ್ರಾಣಿ ಮೇಲೆ ಕಾರು ಹತ್ತಿಸಿರುವ ಚಾಲಕನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ. 7 ರಂದು ಬೆಳಗ್ಗೆ ಮುತ್ತುರಾಯನಗರದ ಸಪ್ತಗಿರಿ ರೆಸಿಡೆನ್ಸಿ ಮುಂಭಾಗದ ರಸ್ತೆಯಲ್ಲಿ ಶ್ವಾನ ಮಲಗಿತ್ತು. ಕಾರು ಚಲಾಯಿಸಲು ಸಾಕಷ್ಟು ಜಾಗವಿದ್ದರೂ ಬೇಕಂತಲೇ ಕಾರು ಚಾಲಕ ಈ ರೀತಿ ವಿಕೃತಿ ಮೆರೆದಿದ್ದಾನೆ.
ಇದನ್ನೂ ಓದಿ : ‘ಫ್ರಿಯಾಗಿ ಬಜ್ಜಿ- ಬೋಂಡಾ ಕೊಡದಿದ್ರೆ ಎತ್ತಂಗಡಿ ಮಾಡಸ್ತೀನಿ!’: ನಕಲಿ ಪೊಲೀಸ್ ವಿರುದ್ಧ ಪ್ರಕರಣ ದಾಖಲು
ಮೈಮೇಲೆ ಕಾರು ಹತ್ತುತ್ತಿದ್ದಂತೆ ನಡು ರಸ್ತೆಯಲ್ಲೇ ನಾಯಿ ಅರಚುತ್ತ, ಕುಂಟುತ್ತ ಚಡಪಡಿಸಿ ಒದ್ದಾಡಿ ಪ್ರಾಣ ಬಿಟ್ಟಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. KA 05 MP 5836 ಎಂಬ ನಂಬರಿನ ಕಾರು ನಾಯಿ ಮೇಲೆ ಹತ್ತಿಸಿದ್ದ ಸಂಬಂಧ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಚಾಲಕನಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಇದೇ ರೀತಿ ಕಳೆದ ವರ್ಷ ಜ.26ರಂದು ಸಂಜೆ 6.15ರಲ್ಲಿ ಜಯನಗರ 1ನೇ ಬ್ಲಾಕ್ 10ನ ಮುಖ್ಯರಸ್ತೆಯ ಮನೆ ಎದುರಿನ ಪಾದಚಾರಿ ಮಾರ್ಗದ ಪಕ್ಕದಲ್ಲಿ ಬೀದಿ ನಾಯಿ ಲಾರಾ ಹೆಸರಿನ ಶ್ವಾನ ಮಲಗಿತ್ತು. ಈ ವೇಳೆ ಉದ್ಯಮಿ ಆದಿಕೇಶವುಲು ಮೊಮ್ಮಗ ಆದಿ ಬಿಳಿ ಬಣ್ಣದ ಆಡಿ ಕಾರನ್ನು ವೇಗವಾಗಿ ಚಾಲನೆ ಮಾಡಿ ಮಲಗಿದ್ದ ಬೀದಿ ನಾಯಿ ಮೇಲೆ ಹತ್ತಿಸಿ ಸಾಯಿಸಲು ಯತ್ನಿಸಿದ್ದ. ಈ ಸಂಬಂಧ ಉದ್ಯಮಿ ದಿ.ಆದಿಕೇಶವಲು ಮೊಮ್ಮಗ ಆದಿಯನ್ನು ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಸಿದ್ದಾಪುರ ಪೊಲೀಸರು ಬಿಟ್ಟುಕಳುಹಿಸಿದ್ದರು. ಗಂಭೀರ ಗಾಯಗೊಂಡಿದ್ದ ಲಾರಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿತ್ತು.
ಇದನ್ನೂ ಓದಿ :ಗೃಹ ಸಚಿವರ ಮನೆ ಅಥವಾ ಸಿಎಂ ಮನೆಯಲ್ಲಿ ಹುಡುಕಿದ್ರೆ ಸ್ಯಾಂಟ್ರೋ ರವಿ ಸಿಗಬಹುದು: ಕಾಂಗ್ರೆಸ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.