ನೈಟ್ ಔಟ್ ಹೋಗೋಣ ಬಾ.. ಬಾ..!! ಅಶೋಕ್ ಹಾಗೂ ಗಣೇಶನ ಕಾಟಕ್ಕೆ ಗೃಹಿಣಿ ಆತ್ಮಹತ್ಯೆ
ಅಶೋಕ್ ಹಾಗೂ ಗಣೇಶ್ ಬರುಬರುತ್ತಾ ಮಮತಾಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿ ನೀನು ನಮ್ಮ ದೈಹಿಕವಾಗಿ ಸಹಕರಿಸು ಎಂದು ಪೀಡಿಸತೊಡಗಿದ್ದರು. ಇದೇ ವಿಷಯಕ್ಕೆ ಮಮತಾ ಪತಿ ಸಹ ಹೆಂಡತಿಗೆ ಅವರ ಜೊತೆ ಸಂಪರ್ಕ ಬಿಟ್ಟುಬೀಡು ಎಂದು ಹೇಳಿ ಜಗಳವಾಡಿದ್ದ.. ಆದರೆ ಮಮತಾ.. ಸಂಪೂರ್ಣ ಸುದ್ದಿ ಇಲ್ಲಿದೆ ನೋಡಿ..
ಬೆಂಗಳೂರು : ಜೊತೆಯಲ್ಲಿ ಓದಿದ್ದ ಗೆಳಯರ ಕಾಟ ತಾಳಲಾರದೇ ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಮತಾ(31) ಮೃತ ದುರ್ದವೈವಿಯಾಗಿದ್ದಾಳೆ.
ಆಗಿದ್ದಿಷ್ಟು ಅಶೋಕ್ ಹಾಗೂ ಗಣೇಶ್ ಎಂಬುವವರು ಮೃತ ಮಮತಾಗೆ ಒಂದನೇ ತರಗತಿಯಿಂದ ಪಿಯುಸಿವರೆಗೆ ಕ್ಲಾಸ್ ಮೇಟ್ ಗಳಾಗಿದ್ರು. ಮಮತಾಳ ಮದುವೆಯಾದ ಮೇಲೂ ಸಹ ನಿರಂತರ ಸಂಪರ್ಕದಲ್ಲಿದ್ದು. ಸ್ನೇಹಿತರು ಎಂಬ ಕಾರಣಕ್ಕೆ ಮಮತಾ ಇಬ್ಬರ ಜೊತೆಗೂ ಕಾಲ್, ಮೇಸೆಜಲ್ಲಿ ಸಂಪರ್ಕದಲ್ಲಿದ್ದಳು.
ಇದನ್ನೂ ಓದಿ: ಶೋಕಾಸ್ ನೋಟಿಸ್: ಗವರ್ನರ್ ವಿರುದ್ಧ ಹೈಕೋರ್ಟ್, ಸುಪ್ರೀಂ ಮೆಟ್ಟಿಲೇರಲು ತೀರ್ಮಾನ
ಈ ನಡುವೆ ಅಶೋಕ್ ಹಾಗೂ ಗಣೇಶ್ ಬರುಬರುತ್ತಾ ಮಮತಾಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿ ನೀನು ನಮ್ಮ ದೈಹಿಕವಾಗಿ ಸಹಕರಿಸು ಎಂದು ಪೀಡಿಸತೊಡಗಿದ್ದರು. ಇದೇ ವಿಷಯಕ್ಕೆ ಮಮತಾ ಪತಿ ಸಹ ಹೆಂಡತಿಗೆ ಅವರ ಜೊತೆ ಸಂಪರ್ಕ ಬಿಟ್ಟುಬೀಡು ಎಂದು ಹೇಳಿ ಜಗಳವಾಡಿದ್ದ. ಇದರಿಂದ ಮಮತಾ ಸಹ ಅವರೊಂದಿಗೆ ಸಂಪರ್ಕ ಬಿಟ್ಟಿದ್ಲು.
ಆದರೆ ಅಶೋಕ್ ಹಾಗೂ ಗಣೇಶ್ ಬೇರೆ ಬೇರೆ ನಂಬರ್ ನಿಂದ ಮೆಸೇಜ್, ಕರೆ ಮಾಡಿ ನೀನು ನಮ್ಮ ಜೊತೆ ಸಹಕರಿಸಿದಿದ್ದರೆ ನಿನ್ನ ಸಂಸಾರ ಹಾಳು ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಇದರಿಂದ ಮಮತಾ ಸಾಕಷ್ಟು ಮನ ನೊಂದಿದ್ದಳು. ಮಮತಾ ಗಂಡ ಕೆಲಸಕ್ಕೆ ಹೋದರೆ ಸಂಜೆಯೇ ಮನೆಗೆ ಬರುತ್ತಿದ್ದ.
ಇದನ್ನೂ ಓದಿ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ಮೊನ್ನೆ ಇದೆ ಸಮಯಕ್ಕೆ ಕಾದು ಕೂತಿದ್ದ ಮಮತಾ ಡೆತ್ ನೋಟ್ ಬರೆದಿಟ್ಟು ಮನೆಯ ಕಿಟಕಿಗೆ ನೇಣಿಗೆ ಶರಣಾಗಿದ್ದಾಳೆ. ನಿನ್ನೆ ಸಂಜೆ ಮನೆಗೆ ಬಂದ ಪತಿ ಬಾಗಿಲು ಬಡಿದರೂ ಹೆಂಡತಿ ಬಂದು ಬಾಗಿಲು ತೆರೆಯಲಿಲ್ಲ. ನಂತರ, ತನ್ನ ಬಳಿ ಇದ್ದ ಮತ್ತೊಂದು ಕೀ ಮೂಲಕ ಬಾಗಿಲು ತೆಗೆದು ಒಳಗೆ ಹೋಗಿ ನೋಡಿದರೆ ಅಲ್ಲಿ ಹೆಂಡತಿ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಪರಿಶೀಲನೆ ನಡೆಸಿ ಪ್ರಾಥಮಿಕ ಸಾಕ್ಷ್ಯಗಳನ್ನು ಹಾಗೂ ಮಾಹಿತಿಗಳನ್ನು ಕಲೆ ಹಾಕಿದ್ದಾತೆ. ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹವನ್ನು ಪೊಲೀಸರು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನು ಮಮತಾ ಬರೆದಿರುವ ಡೆತ್ ನೋಟ್ ಆಧಾರದ ಮೇಲೆ ಇಬ್ಬರು ಯುವಕರ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.