ಬೆಂಗಳೂರು: ಈ ಹಿಂದೆ ರೌಡಿ ಶೀಟರ್ ಆಟೋ ರಾಮ ಬೆತ್ತನಗೆರೆ ಶಂಕರನ ಆಪ್ತ ರೇಣುಕನ್ನ ಜೈಲಿನ ಮುಂದೆ ಮರ್ಡರ್ ಮಾಡಿಸಿದ್ದ.‌ ಈ ಕೇಸ್ ನಲ್ಲಿ ಬೆತ್ತನಗೆರೆ ಸೀನಾ ಕೂಡ ಅರೆಸ್ಟ್ ಆಗಿದ್ದ. ಇದಾದ ಮೇಲೆ ಅಂದಿನ ಹಿರಿಯ ಪೊಲೀಸ್ ಅಧಿಕಾರಿಗಳು ಜೈಲಿನ ಮುಂಭಾಗ ಭದ್ರತೆ ಹೆಚ್ಚಿಸಿ ಜೈಲಿನ ಮುಂದೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು. 


COMMERCIAL BREAK
SCROLL TO CONTINUE READING

ಜೊತೆಗೆ ಜೈಲಿನಿಂದ ರಿಲೀಸ್ ಆಗುವವರನ್ನು ಸಂಜೆ ಏಳು ಗಂಟೆಯೊಳಗೆ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದರು. ಇಷ್ಟಾದ್ರು ನಿನ್ನೆ ಜೈಲಿನಿಂದ ಮಹೇಶ ರಿಲೀಸ್ ಆಗುವ ಸುದ್ದಿ ನಾಗನ ಕಿವಿಗೆ  ಬಿದ್ದಿದೆ. ನಾಗನ ಮೇಲಿನ ಭಯಕ್ಕೆ ಮಹೇಶ ರಾತ್ರಿ 9ಗಂಟೆ ನಂತ ರೀಲಿಸ್ ಆಗಿದ್ದ. ಜೈಲು ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ರಾತ್ರಿ ಮಹೇಶನನ್ನ ರಿಲೀಸ್ ಮಾಡಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ.


ಇದನ್ನೂ ಓದಿ-ಕರ್ನಾಟಕ ವಿಪಕ್ಷ ನಾಯಕನ ಸ್ಥಾನಕ್ಕೆ ಪ್ರಧಾನಿ ಮೋದಿ ಟವಲ್ ಹಾಕಿದ್ದಾರಾ?: ಕಾಂಗ್ರೆಸ್ ಟೀಕೆ


 ಜೈಲಿನ ಮಾಹಿತಿ ನಾಗನ ಕೈಗೆ ಸಿಕ್ಕಿಲ್ಲ ಅಂದಿದ್ದರೆ ಮಹೇಶನ ಕೊಲೆ ಆಗುತ್ತಿರಲಿಲ್ಲ. ಇನ್ನೂ ನಾಗನಿಗೂ ಜೈಲು ಹೊಸದಲ್ಲ.  ಮಹೇಶನ ಪ್ರತಿ ಚಲನವಲನದ ಬಗ್ಗೆ ಜೈಲಿನಿಂದ ನಾಗ ಮಾಹಿತಿ ಪಡೆದಿದ್ದಾನೆ. ಜೈಲಿನಲ್ಲಿರುವ ಕೆಲ ಕಳ್ಳಗಣ್ಣುಗಳು ನಾಗನಿಗೆ ಮಹೇಶನ ಕುರಿತು ಹೇಳಿ ನಾಗನ ರೋಷ ಹೆಚ್ಚಿಸಿದ್ದಾರೆ‌.


ಮಹೇಶನಿಗೆ ಚಟ್ಟ ಕಟ್ಟಿದ ಹಂತಕರು ಒಂದು ಇನ್ನೋವಾ ಹಾಗೂ 8ಬೈಕ್ ನಲ್ಲಿ ಬಂದಿದ್ದಾರೆ. ಜೈಲ್ ಚೆಕ್ ಪೋಸ್ಟ್ ನಿಂದ ಮರ್ಡರ್ ಸ್ಪಾಟ್ ವರೆಗೂ ಅಲ್ಲಲ್ಲೆ ಬೈಕ್ ನಲ್ಲಿ ನಿಂತಿದ್ದ ಹುಡುಗರು ಕಾನ್ಪ್ರೆನ್ಸ್ ಕಾಲ್ ನಲ್ಲಿ ಮಹೇಶ ಮೂಮೆಂಟ್ ಇನ್ಫಾರ್ಮ್ ಮಾಡಿದ್ದಾರೆ. ಕೊನೆಗೆ ಹೈವೇಗೆ ಎಂಟ್ರಿ ಆಗುತ್ತಿದ್ದಂತೆ ಸಿಸಿಬಿ ಪೊಲೀಸರು ಎಂದು ಇನ್ನೋವಾ ಅಡ್ಡ ಹಾಕಿ ಮಹೇಶ ನ ಮಲೇ ಮಚ್ಚು ಬೀಸಿ ಎಸ್ಕೇಪ್ ಆಗಿದ್ದಾರೆ.


ಇನ್ನೂ ಹಂತಕರು ಟೂ ವೀಲರ್ಸ್ ಚೂಸ್ ಮಾಡುವುದಕ್ಕೂ ಕಾರಣ ಇದೆ.  ಯಾಕಂದರೆ ಕಾರುಗಳಲ್ಲಿ ಬಂದರೆ ಡೌಟು ಬರುತ್ತೆ. ಸಾಲದಕ್ಕೆ ಟ್ರಾಫಿಕ್ ಇರುವುದರಿಂದ ಟೂ ವೀಲರ್ ನಲ್ಲಿ ಇಸೀಯಾಗಿ ಎಸ್ಕೇಪ್ ಆಗಬಹುದು ಎನ್ನೋದು ಹಂತಕರ ಪ್ಲಾನ್ ಆಗಿತ್ತು. ಸದ್ಯ ಮಹೇಶ ಸತ್ತು ಹೆಣವಾಗಿದ್ದಾನೆ. ಪೊಲೀಸರು ಹಂತಕರ ಜಾಡು ಹಿಡಿದು ಹೊರಟಿದ್ದು, ಮರ್ಡರ್ ಬಗ್ಗೆ ಮತ್ತಷ್ಟು ವಿಷಯಗಳು ಗೊತ್ತಾಗಬೇಕಿದೆ.


ಇದನ್ನೂ ಓದಿ-1 ರೂ.ಗೆ ರಾಗಿ ಮುದ್ದೆ ನೀಡಿ ಹೋಟೇಲ್‌ ತಿಂಡಿಗಳ ಬೆಲೆ ಏರಿಕೆ ಖಂಡಿಸಿದ ವಾಟಾಳ್..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.