ಗಾಂಜಾ ಮತ್ತಲ್ಲಿ ಪುಂಡರ ಕಿರಿಕ್: ಗಲಾಟೆ ಯಾಕ್ ಮಾಡ್ತೀರಾ ಅಂತಾ ಪ್ರಶ್ನಿಸಿದ್ದಕ್ಕೆ ಹಲ್ಲೆ!
ಇದೇ ರೀತಿ ಸೆಪ್ಟೆಂಬರ್ 20ರಂದು ಗಲಾಟೆ ಶುರು ಮಾಡಿದ್ದಾರೆ. ಪಕ್ಕದಲ್ಲೇ ಇದ್ದ ಮನೆ ಕಾಂಪೌಡ್ ಒಳಗೆ ಓಡಾಡಿದ್ದಾರೆ. ಇದಕ್ಕೆ ಮನೆ ಮಾಲೀಕರು ಇಲ್ಲಿ ಯಾಕೆ ಓಡಾಡುತ್ತಿರಾ? ಯಾಕೆ ಗಲಾಟೆ ಮಾಡ್ತಿರಾ? ಗಾಂಜಾ ವಾಸನೆ ಬರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ಗಾಂಜಾ ಮತ್ತಲ್ಲಿ ಗಲಾಟೆ ಮಾಡುತ್ತಿದ್ದವರನ್ನ ಪ್ರಶ್ನಿಸಿದ ಮನೆಯವರ ಮೇಲೆ ಕಿಡಿಗೇಡಿ ಹುಡುಗರು ಹಲ್ಲೆ ನಡೆಸಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರು ವಾಶ್ ಮಾಡುವ ಯುವಕರಿಂದ ಗಲಾಟೆ ನಡೆದಿದ್ದು, ರಾತ್ರಿಯಾದ್ರೆ ಸಾಕು ಗಾಂಜಾ ಹೊಡೆದು ಕಿರಿಕ್ ಮಾಡುತ್ತಾರಂತೆ.
ಇದನ್ನೂ ಓದಿ: ಎಂಥಾ ಅನಾಚಾರವಿದು…ದುರ್ಗೆ ವಿಗ್ರಹ ಧ್ವಂಸ ಮಾಡಿದ ಮುಸ್ಲಿಂ ಮಹಿಳೆಯರು!
ಇದೇ ರೀತಿ ಸೆಪ್ಟೆಂಬರ್ 20ರಂದು ಗಲಾಟೆ ಶುರು ಮಾಡಿದ್ದಾರೆ. ಪಕ್ಕದಲ್ಲೇ ಇದ್ದ ಮನೆ ಕಾಂಪೌಡ್ ಒಳಗೆ ಓಡಾಡಿದ್ದಾರೆ. ಇದಕ್ಕೆ ಮನೆ ಮಾಲೀಕರು ಇಲ್ಲಿ ಯಾಕೆ ಓಡಾಡುತ್ತಿರಾ? ಯಾಕೆ ಗಲಾಟೆ ಮಾಡ್ತಿರಾ? ಗಾಂಜಾ ವಾಸನೆ ಬರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮತಾಂತರಗೊಂಡಿದ್ದ ಮಹಿಳೆ ಬುರ್ಖಾ ಧರಿಸಿಲ್ಲ ಅಂತ ಚಾಕುವಿನಿಂದ ಚುಚ್ಚಿ ಕೊಲೆಗೈದ ಪತಿ!
ಇದರಿಂದ ರೊಚ್ಚಿಗೆದ್ದ ಪುಂಡರು ನಮ್ಮನ್ನೆ ಪ್ರಶ್ನೆ ಮಾಡ್ತೀರಾ ಅಂತಾ ಗಲಾಟೆ ಮಾಡಿ ಕೈಗೆ ಸಿಕ್ಕ ವಸ್ತುಗಳಿಂದ ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗದವರು ಪೊಲೀಸರಿಗೆ ದೂರು ನೀಡಿದರೂ ಸಹ ಪ್ರಕರಣ ದಾಖಲಿಸದೇ ರಾಜಿ ಸಂಧಾನ ಮಾಡಿರುವ ಆರೋಪ ಕೇಳಿ ಬಂದಿದೆ. ಇನ್ನೂ ಪುಂಡರ ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.