ಬೆಂಗಳೂರು: ಸಿನಿಮಾದಲ್ಲಿ ನಟಿಸಬೇಕು ಅಂತಾ ಅನೇಕರು ಕನಸು ಕಂಡಿರುತ್ತಾರೆ. ಯಾರಾದ್ರೂ ಚಾನ್ಸ್ ಕೊಟ್ರೆ ಸಾಕು‌ ತಮ್ಮ ಟ್ಯಾಲೆಂಟ್ ತೋರಿಸಿ ಫೇಮಸ್ ಆಗಬೇಕು ಎಂತಾ ಹಾತೋರೆಯುತ್ತಾರೆ. ಈಗಿನ ಅನೇಕ ಯುವಕ- ಯುವತಿಯರು ಅಷ್ಟೇ ಸಿನಿಮಾದಲ್ಲಿ ನಟಿಸಿ ಹೆಸರು ಮಾಡಬೇಕು ಎಂಬ ಹೆಬ್ಬಯಕೆ ಹೊಂದಿದವರಿದ್ದಾರೆ. ಇಂತವರನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ಲಕ್ಷ-ಲಕ್ಷ ಪೀಕಿ ಅನೇಕರನ್ನು ಮೋಸ ಮಾಡ್ತಾರೆ. ಇಂತಹದೇ ಒಂದು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಯುವತಿಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ.


COMMERCIAL BREAK
SCROLL TO CONTINUE READING

ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ರ 25ನೇ ಸಿನಿಮಾ ಹಂಟರ್ ನಲ್ಲಿ ಅವಕಾಶ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಲಾಗಿದೆ. ಮಾಡೆಲ್ ಆಗಿರುವ ಯುವತಿ ನಂದಿತಾ ಕೆ ಶೆಟ್ಟಿ ಎಂಬಾಕೆಗೆ 
ಇನ್ಸ್ ಟಾಗ್ರಾಂನಲ್ಲಿ ಮೂವಿ ಆ್ಯಡ್ ಲಿಂಕ್ ಮೂಲಕ ಸುರೇಶ್ ಕುಮಾರ್ ಎಂಬಾತನ ಪರಿಚಯವಾಗಿದೆ.


ಇದನ್ನೂ ಓದಿ:ಹಳ್ಳ ಹಿಡಿದ ಸಿಎಂ ಸಿದ್ದರಾಮಯ್ಯರ ಕನಸಿನ ಇಂದಿರಾ ಕ್ಯಾಂಟೀನ್‌ ಯೋಜನೆ!


ತಾನು ಹಂಟರ್ ಮೂವಿ ಕಾಸ್ಟಿಂಗ್ ಡೈರೆಕ್ಟರ್ ಅಂತಾ ಸುರೇಶ್ ಕುಮಾರ್ ಯುವತಿಗೆ ಪರಿಚಯ ಮಾಡಿಕೊಂಡಿದ್ದ. ನಿಮಗೆ ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಬಿಸಿ ಆರ್ಟಿಸ್ಟ್ ಕಾರ್ಡ್, ಅಗ್ರಿಮೆಂಟ್ ಸ್ಟಾಂಪ್ ಡ್ಯೂಟಿ, ವಿದೇಶದಲ್ಲಿ ಶೂಟಿಂಗ್ ಗಾಗಿ ಪಾಸ್ ಪೋರ್ಟ್, ಟಿಕೆಟ್  ಚಾರ್ಜ್ ಎಂದು ಹೇಳಿ ಹಂತ ಹಂತವಾಗಿ 1.71 ಲಕ್ಷ ಪಡೆದಿದ್ದಾನೆ. 


ಹಣ ತಲುಪಿದ ಮೇಲೆ ಈ ಆಸಾಮಿಯನ್ನು ಸಂಪರ್ಕಿಸಲು ನಂದಿತಾ ಟ್ರೈ ಮಾಡಿದರೂ ಸಾಧ್ಯವಾಗಿಲ್ಲ. ಹೀಗಾಗಿ ಅನುಮಾನ ಬಂದು ಕ್ರಾಸ್ ಚೆಕ್ ಮಾಡಿದಾಗ ತಾನು ಮೋಸ ಹೋಗಿದ್ದೇನೆ ಎಂಬ ಅಸಲಿ ವಿಷಯ ಯುವತಿಗೆ ಗೊತ್ತಾಗಿದೆ. ಹೀಗಾಗಿ ಹಣ ಕಳೆದುಕೊಂಡ ನಂದಿತಾ ಸದ್ಯ ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.