ಮಂಗಳೂರು: ಗೂಡ್ಸ್ ರೈಲಿನಡಿ ಬಿದ್ದು ಸುಮಾರು 20 ಕ್ಕಿಂತ ಎಮ್ಮೆಗಳು ಧಾರುಣವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.  ಕರಾವಳಿ ಭಾಗದ ಮಂಗಳೂರು ನಗರದ ಹೊರವಲಯದ ಬೈಕಂಪಾಡಿಯ ಅಂಗರಗುಂಡಿ ಬಳಿ ಈ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಿಸಿದ್ದು, ಸತತ ನಾಲ್ಕೈದು ಗಂಟೆಗಳಿಂದ ಎಮ್ಮೆಗಳ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 


ಇದನ್ನೂ ಓದಿ- ಹಳಿತಪ್ಪಿದ ಡಬಲ್‌ಡೆಕ್ಕರ್ ರೈಲು: ತಪ್ಪಿದ ಭಾರೀ ದುರಂತ


ಇನ್ನು ಈ ದುರ್ಘಟನೆಯಲ್ಲಿ ಕೆಲವು ಎಮ್ಮೆಗಳು ಸುಮಾರು 25 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿವೆ. ವೇಗ ನಿಯಂತ್ರಣ ಮಾಡಿದ ರೈಲು ಆಪರೇಟರ್ ರೈಲು ಪಲ್ಟಿ ಆಗುವ ಅಪಾಯವನ್ನು ತಪ್ಪಿಸಿದ್ದಾರೆ. 


ಇದನ್ನೂ ಓದಿ- ಮಲಗಿದ್ದ ಬಾಲಕಿ ಮೇಲೆ ಬಟ್ಟೆ ಹಾಕಿ ಅಪಹರಣ ಎಂದು ಪೋಷಕರು ದೂರು: ಹುಡುಕಾಡಿ ಪೊಲೀಸರು ಸುಸ್ತು..!


ಮಹಾ ನಗರಪಾಲಿಕೆ ಬೀಡಾಡಿ ದನಗಳನ್ನು ನಿಯಂತ್ರಣ ಮಾಡದಿದ್ದರೆ ಈ ರೀತಿಯ ಇನ್ನಷ್ಟು ದುರಂತಗಳು ಸಂಭವಿಸಬಹುದು ಎಂದು ಸಾರ್ವಜನಿಕಋ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ