ಬೆಂಗಳೂರು: ಹಣಕ್ಕಾಗಿ ವೃದ್ದನನ್ನು ಭೀಕರವಾಗಿ ಹತ್ಯೆ ಸಿಲಿಕಾನ್ ಸಿಟಿಯಲ್ಲಿ ಶಾಸಕರ ಕಚೇರಿ ಬಳಿ ನಡೆದಿದೆ. ಜುಗ್ಗುರಾಜ್ ಜೈನ್ (77) ಕೊಲೆಯಾದ ವೃದ್ಧ ಎಂದು ತಿಳಿದುಬಂದಿದೆ. ಚಾಮರಾಜಪೇಟೆಯ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್ಮೆಂಟ್ ನಲ್ಲಿ ಭೀಕರ ಹತ್ಯೆ ನಡೆದಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ವಿಚಾರ ತಿಳಿದ ತಕ್ಷಣ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲಿಸಿದ್ದಾರೆ. ಬಳಿಕ ಹೇಳಿಕೆ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ಜಿಗ್ಗುರಾಜ್ ಜೈನ್ ಮನೆ ಕೆಲಸದವನಿಂದಲೇ ಕೊಲೆ ನಡೆದಿದೆ. ಬಿಜೋರಾಮ್ ಎಂಬಾತನಿಂದ ಕೊಲೆ ಮಾಡಲಾಗಿದೆ. ಕೈಕಾಲು ಕಟ್ಟಿ ಹಾಕಿ ಕತ್ತು ಹಿಸುಗಿ ಕೊಲೆ ಮಾಡಿರೋದಾಗಿ ಗೊತ್ತಾಗ್ತಿದೆ. ನಿನ್ನೆ ರಾತ್ರಿ ಕೊಲೆ‌ ಮಾಡಿ ಎಸ್ಕೇಪ್ ಆಗಿದ್ದಾನೆ. ಕಳೆದ ಎಂಟು ತಿಂಗಳಿಂದ ಜಿಗ್ಗುರಾಜ್ ಮನೇಲಿ ಆರೋಪಿ ಕೆಲಸ ಮಾಡ್ತಿದ್ದ. ನಿನ್ನೆ ರಾತ್ರಿ ಕೊಲೆ ಮಾಡಿ ಮನೆಯಲ್ಲಿರುವ ಚಿನ್ನಾಭರಣ, ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ ಎಂದಿದ್ದಾರೆ. 


ಇದನ್ನೂ ಓದಿ: ಮಳಲಿ ಮಸೀದಿ ಜಾಗದಲ್ಲಿ ಶಿವ ಸಾನಿಧ್ಯ ಗೋಚರ!


ಬೆಳಗ್ಗೆ ಅವರ ಮೊಮ್ಮಗ ಬಂದು ಮನೆ ಓಪನ್ ಮಾಡಿದಾಗ ವಿಚಾರ ಗೊತ್ತಾಗಿದೆ. ಸದ್ಯ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದೇವೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ. 


ನಿನ್ನೆ ರಾತ್ರಿ 10.30ರ ಸುಮಾರಿಗೆ ಈ ಕೊಲೆ ನಡೆದಿದೆ. ಕೊಲೆ ಮಾಡಿದ ಆರೋಪಿಯು ಯಾವಾಗಲೂ ಮೃತ ಜುಗುರಾಜ್ ಜೊತೆಯಲ್ಲಿಯೇ ಇರುತ್ತಿದ್ದ. ಮೃತ ಜುಗುರಾಜ್ ಗೆ ಪ್ರಕಾಶ್ ಮತ್ತು ಆನಂದ್ ಎಂಬ ಇಬ್ಬರು ಮಕ್ಕಳಿದ್ದು, ಬ್ಯುಸಿನೆಸ್ ಮಾಡುತ್ತಿದ್ದರು. ಎರಡನೇ ಮಗ ಆನಂದ್, ಆತನ ಪತ್ನಿ ಮತ್ತು ಜುಗುರಾಜ್ ಮೂರು ಜನ ಒಂದೇ ಅಪಾರ್ಟ್ಮೆಂಟ್‌ನಲ್ಲಿಯೇ ಇರುತ್ತಿದ್ದರು. ಬ್ಯುಸಿನೆಸ್ ನ ಎಲ್ಲಾ ವ್ಯವಹಾರಗಳನ್ನು ಮೃತ ಜುಗುರಾಜ್ ನೋಡಿಕೊಳ್ಳುತ್ತಿದ್ದರು. ಆತನ ಬಳಿಯೇ ಲಾಕರ್ ಕೀ ಗಳು ಇರುತ್ತಿದ್ದವು. 


ಬ್ಯುಸಿನೆಸ್ ನಿಮಿತ್ತ ಅವರ ಮಗ ಆನಂದ್ ಗೋವಾಗೆ ತೆರಳಿದ್ದರು. ತವರು ಮನೆಗೆ ಅಂತಾ ಆನಂದ್ ಪತ್ನಿ ಶಿಕಾರಿಪುರಕ್ಕೆ ಹೋಗಿದ್ದರು. ವೃದ್ದನನ್ನ ಪ್ರತಿ ದಿನ ಅಂಗಡಿಗೆ ಕರೆದುಕೊಂಡು ಹೋಗೋದು, ಬರೋದನ್ನು ಆರೋಪಿ ಬಿಜರಾಮ್ ಮಾಡುತ್ತಿದ್ದರು. ನಿನ್ನೆ ರಾತ್ರಿ 8.30ರ ಸುಮಾರಿಗೆ ಅಂಗಡಿಯಿಂದ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಬಂದಿದ್ದಾನೆ. ನಂತರ ಅಪಾರ್ಟ್ಮೆಂಟ್ ಗೆ ಬಿಡೋಕೆ ಹೋದಾಗ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.  


ಇದನ್ನೂ ಓದಿ: ಮಂಗಳೂರಿನ ಮಸೀದಿಯಲ್ಲಿ ದೇವಸ್ಥಾನದ ಕುರುಹು ಪತ್ತೆ: ತಾಂಬೂಲ ಪ್ರಶ್ನೆ ಮೂಲಕ ಸಿಗಲಿದೆ ಉತ್ತರ


ವೃದ್ದನ ಕೈ ಹಿಂದೆ ಕಟ್ಟಿ ಮುಖಕ್ಕೆ ಖಾರದ ಪುಡಿ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿರಬಹುದೆಂದು ಊಹಿಸಲಾಗಿದೆ. ನಂತರ ಮನೆಯಲ್ಲಿದ್ದ ಚಿನ್ನಾಭರಣಗಳನ್ನ ಕದ್ದು ಎಸ್ಕೇಪ್ ಆಗಿದ್ದಾನೆ. ನಾಲ್ಕು ಬ್ಯಾಗ್ ಗಳಲ್ಲಿ ಚಿನ್ನಾಭರಣಗಳನ್ನ ತುಂಬಿಕೊಂಡು ಹೋಗಿದ್ದು, 25kg ಬೆಳ್ಳಿಯನ್ನು ಅಪಾರ್ಟ್ಮೆಂಟ್ ನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. 


ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.