ಬೆಂಗಳೂರು : ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರೌಡಿ ಶೀಟರ್ ಗಳು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಜೈಲಿಂದ ಹೊರಬರುತ್ತಿರುವ ಖತರ್ನಾಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ಹವಾ ಎಬ್ಬಿಸುತ್ತಿದ್ದಾರೆ. ಇವರ ಬೆಂಬಲಿಗರು ಅಷ್ಟೇ ಏನೋ ಸಾಧನೆ ಮಾಡಿ ಬಂದಿದ್ದಾರೆ ಅನ್ನೋ ರೇಂಜ್ ಗೆ ಬಿಲ್ಡಪ್ ಕೊಡುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಸಿಸಿಬಿ ಪೊಲೀಸರು ಫುಲ್ ಆ್ಯಕ್ಟೀವ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಯಾವುದೇ ಅಪರಾಧ ಕೃತ್ಯಗಳಲ್ಲಿ ರೌಡಿಗಳು ಭಾಗಿಯಾಗಬಾರದು ಎಂಬ ಉದ್ದೇಶದಿಂದ ರೌಡಿಶೀಟರ್ ಗಳ ಮನೆ ಮೇಲೆ ಮಧ್ಯರಾತ್ರಿ ದಿಢೀರ್‌ ದಾಳಿ ನಡೆಸಿದ್ದಾರೆ‌. ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಗಳಾದ ಮೈಕಲ್,ರಾಮ,ಕೋತಿರಾಮ, ಮಾರ್ಕೆಟ್ ವೇಡಿ ಸೇರಿ ಹಲವರಿಗೆ ಶಾಕ್ ನೀಡಿದ್ದಾರೆ‌.


ಇದನ್ನೂ ಓದಿ : ಕಳ್ಳತನದ ಹಾದಿ ಹಿಡಿದ ಗುರು: ತೊಗರಿ ಬೇಳೆ ಕದ್ದು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ


ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳಿವೆಯಾ ಎಂದು ಪರಿಶೀಲನೆ ನಡೆಸಿದ್ದಾರೆ. ರೌಡಿಗಳು ಪಾತಕಿ ಕೃತ್ಯವೆಸಗಲು ಸಂಚು ರೂಪಿಸಿದ್ದಾರಾ ಎಂಬ ಕುರಿತು ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನೂ ರೌಡಿಗಳಿಗೆ ತಮ್ಮದೇ ಸ್ಟೈಲ್ ನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನಿಂಗ್ ನೀಡಿದ್ದಾರೆ. ಇನ್ನೂ ಧಾರವಾಡ ಜೈಲಲ್ಲಿರುವ ಬಾಂಬೆ ಸಲೀಂನನ್ನು ವಿಚಾರಣೆ ನಡೆಸಿರುವ ಸಿಸಿಬಿ ಅವನ ಪಟಾಲಂ ಬಾಲ ಬಿಚ್ಚದಂತೆ ನೋಡಿಕೊಳ್ಳುವಂತೆ ವಾರ್ನ್ ಮಾಡಿದ್ದಾರೆ.


ಇದನ್ನೂ ಓದಿ : ಚಾಮರಾಜನಗರ: 8 ಕಿಮೀ ಡೋಲಿ ಹೊತ್ತು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಜನರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.