ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಪುತ್ರಿ ನೇಹಾ  ಹಿರೇಮಠ ಹತ್ಯೆ ಪ್ರಕರಣ ಸಂಬಂಧಿಸಿದಂತೆ ನೇಹಾ ತಂದೆ ತಾಯಿಗಳಿಗೆ ಗದಗ ಜಿಲ್ಲೆಯ ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಭಾವುಕರಾದರು. 


COMMERCIAL BREAK
SCROLL TO CONTINUE READING

ನಿನ್ನೆ ಕೊಲೆಯಾದ ನೇಹಾ  ಹಿರೇಮಠ ಅವರ ಅಂತಿಮ ದರ್ಶನ ಪಡೆದು ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ  ದಿಂಗಾಲೇಶ್ವರ ಸ್ವಾಮೀಜಿ,  ಈಗಾಗಲೇ ತಂದೆ ನಿರಂಜನಗೆ ತಾಯಿಗೆ ಸಾಂತ್ವನ ಹೇಳಲಾಗಿದೆ ಎನ್ನುತ್ತಾ ಭಾವುಕರಾಗಿ ಗಳಗಳನೆ ಅತ್ತರು. 


ಇದನ್ನೂ ಓದಿ- ಪ್ರೇಮ ನಿರಾಕರಣೆ ಶಂಕೆ: ಕಾರ್ಪೋರೇಟರ್ ಮಗಳಿಗೆ 9 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಪಾಗಲ್ ಪ್ರೇಮಿ!


ಈ ಸಂದರ್ಭದಲ್ಲಿ ನೇಹಾ  ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಇಡೀ ಮಾನವ ಕುಲ ತೆಲೆ ತೆಗ್ಗಿಸುವ ಪರಿಸ್ಥಿತಿ ಬಂದಿದ್ದು, ರಾಷ್ಟ್ರದ ಉದ್ದಕ್ಕೂ ಇಂತಹ ಘಟನೆಗಳು  ನಡೆಯುತ್ತಿವೆ. ಇಂತಹ ಹೀನ ಕೃತ್ಯ ಎಸಗುವ ಪಾಪಿಗಳಿಗೆ ಕೂಡಲೇ ಶಿಕ್ಷೆ ಆಗಬೇಕು. ಯಾವುದೇ ಕಾರಣಕ್ಕೂ ಇಂತಹ ಹೇಯ ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡುವಲ್ಲಿ ತಡವಾಗಬಾರದು. ಭವಿಷ್ಯದಲ್ಲಿ ಯಾಗೂ ಇಂತಹ ಕೃತಯ್ಕ್ಕೆ ಕೃತ್ಯ ಆಗಬಾರದು. ಈ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಯಾಗಬೇಕು ಎಂದು ನುಡಿದರು. 


ಇದನ್ನೂ ಓದಿ- ಪ್ರೀತಿ ಹೆಸರಲ್ಲಿ ಓರ್ವ, ಬ್ಲಾಕ್ ಮೇಲ್ ಮಾಡಿ ಮತ್ತೋರ್ವನಿಂದ ಬಾಲಕಿಯ ಅತ್ಯಾಚಾರ: ಕೀಚಕರಿಗೆ 20 ವರ್ಷ ಜೈಲು


ಇದೇ ವೇಳೆ ಮೃತ ನೇಹಾ  ಹಿರೇಮಠ ಅವರ ಬಗ್ಗೆ ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಸ್ವಾಮೀಜಿ, ಪ್ರತಿ ಅಮಾವಾಸ್ಯೆಯಂದು ನೇಹಾ ತಮ್ಮ ತಂದೆ-ತಾಯಿಯೊಂದಿಗೆ ನಮ್ಮ ಮಠಕ್ಕೆ ಬರುತ್ತಿದ್ದರು. ಆಕೆ ತುಂಬಾ ಪ್ರತಿಭಾವಂತೆ ಆಗಿದ್ದು ನೀನು ಐಎಎಸ್ ಮಾಡಬೇಕು ಎಂದು ನಾನು ಆಕೆಗೆ ಹೇಳುತ್ತಾ ಇದ್ದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿನಿ ಹತ್ಯೆ ಆಗಿದೆ ಎಂದು ಸ್ವಾಮೀಜಿ ಗಳಗಳನೆ ಅತ್ತರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.