ಬೆಂಗಳೂರು : ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್​ ಇಡಲಾಗಿದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸೈಯ್ಯದ್​ ಮಹಮ್ಮದ್ ಅನ್ವರ್​ (37) ನನ್ನು ಶಿವಾಜಿನಗರ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬಿಎಸ್​ಸಿ ಪದವಿ ಮುಗಿಸಿ ಕೆಲಸ ಇರದೇ ನಿರುದ್ಯೋಗಿಯಾಗಿದ್ದ ಸೈಯ್ಯದ್​ ಮಹಮ್ಮದ್ ಅನ್ವರ್ ಊರೂರು ಸುತ್ತಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದ. ಜುಲೈ 4ರಂದು ಬೆಂಗಳೂರಿಗೆ ಬಂದಿದ್ದ. ಆರೋಪಿ ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂಭಾಗದಲ್ಲಿರುವ ಆಜಾಂ ಮಸೀದಿ ಬಳಿ ಬದು ಚಂದಾ ಪಡೆದಿದ್ದ. ಬಳಿಕ ರಾತ್ರಿ ಮಸೀದಿಯಲ್ಲಿ ತಂಗಲು ಅವಕಾಶ ಕೇಳಿದ್ದ. ಇದಕ್ಕೆ ಮಸೀದಿ ಸಿಬ್ಬಂದಿ ಇಲ್ಲಿ ತಂಗಲು ಅವಕಾಶವಿಲ್ಲ ಎಂದಿದ್ದರು. ಇದರಿಂದ ಮಸೀದಿ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ ಆರೋಪಿ ಮೆಜೆಸ್ಟಿಕ್​ಗೆ ತೆರಳಿ ಕರ್ನೂಲ್​ ಬಸ್​ ಹತ್ತಿದ್ದ. 


ಇದನ್ನೂ ಓದಿ- ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಅವಳಲ್ಲ ಅವನ ಪ್ರಯಾಣ, ಮುಂದೆ...


ಬಸ್​​ ಬೆಂಗಳೂರು ಹೊರವಲಯದ ದೇವನಹಳ್ಳಿ ದಾಟುತ್ತಿದ್ದಂತೆ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದ್ದ ಆಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಹೇಳಿದ್ದ.‌ ಇದರಿಂದ ಎಚ್ಚೆತ್ತ  ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಇಂಚಿಂಚೂ ಪರಿಶೀಲಿಸಿದಾಗ ಯಾವುದೇ ಬಾಂಬ್ ಇಲ್ಲ, ಇದೊಂದು ಹುಸಿ ಬಾಂಬ್​ ಕರೆಯೆಂದು ಗೊತ್ತಾಗಿತ್ತು.‌ 


ಇದನ್ನೂ ಓದಿ- ಟೊಮ್ಯಾಟೊಗೆ ಬಂಗಾರದ ಬೆಲೆ: ಕಳ್ಳರಿಂದ ಟೊಮ್ಯಾಟೊ ತುಂಬಿದ ವಾಹನ ಹೈಜಾಕ್..!


ಈ ಸಂಬಂಧ ಸ್ವಯಂ ದೂರು ದಾಖಲಿಸಿಕೊಂಡಿದ್ದ ಪೊಲೀಸರು   ಆರೋಪಿಗಾಗಿ ಬಲೆ ಬೀಸಿದ್ದರು. ಕರೆ ಮಾಡಲಾದ ನಂಬರ್ ಲೊಕೇಷನ್ ಆಧರಿಸಿ ಆಂಧ್ರಕ್ಕೆ ತೆರಳಿದ್ದ ಶಿವಾಜಿನಗರ  ಪೊಲೀಸರು ಬಳಿಕ ಕರ್ನೂಲ್​ನಿಂದ ತೆಲಂಗಾಣದ ಮೆಹಬೂಬ್​ನಗರಕ್ಕೆ ತೆರಳಿದ್ದ ಆರೋಪಿ ಸೈಯ್ಯದ್​ನನ್ನ ಬಂಧಿಸಿ ಸದ್ಯ ಜೈಲಿಗಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.