ಗುಜರಾತ್: ಇತ್ತೀಚೆಗೆ ಆನ್‌ಲೈನ್‌ ವಂಚನೆಗಳು ಹೆಚ್ಚಾಗಿವೆ. ಸೋಷಿಯಲ್‌ ಮೀಡಿಯಾ ಬಳಸಿಕೊಂಡು ಜನರಿಗೆ ಮೋಸ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಆಕರ್ಷಣೆಯ ಬಲೆಗೆ ಬೀಳುವ ಅನೇಕರು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಜಾಬ್‌ ಆಫರ್‌, ಲವ್‌ ಕೇಸ್‌ ಹೀಗೆ ವಿವಿಧ ರೀತಿಯಲ್ಲಿ ಅಮಾಯಕ ಜನರಿಗೆ ಟೋಪಿ ಹಾಕುವವರು ಹೆಚ್ಚಾಗಿದ್ದಾರೆ. ಇದಕ್ಕೆ ಕೆಲವು ಸಲ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎನಿಸಿಕೊಂಡವರು, ಉದ್ಯಮಿಗಳು ಬಲಿಯಾಗುತ್ತಾರೆ. 


COMMERCIAL BREAK
SCROLL TO CONTINUE READING

ಗುಜರಾತ್ ಮೂಲದ ಉದ್ಯಮಿಯೊಬ್ಬರು ಫೇಸ್‌ಬುಕ್‌ನಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ 95 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ. ವರದಿಯ ಪ್ರಕಾರ, ಅಲ್ಕಾಪುರಿ ನಿವಾಸಿ ದೇಸಾಯಿ ಅವರು ಫೇಸ್‌ಬುಕ್‌ನಲ್ಲಿ ಅಪರಿಚಿತ ಯುವತಿಯ ಫೋಟೋ ಹೊಂದಿರುವ ಖಾತೆಯಿಂದ Friend Request ಸ್ವೀಕರಿಸಿ ನಂತರ ಮೋಸದ ಜಾಲದಲ್ಲಿ ಸಿಲುಕಿಕೊಂಡು ಹಣ ಕಳೆದುಕೊಂಡಿದ್ದಾರೆ. 


ಇದನ್ನೂ ಓದಿ: ಲೋಕಸಭೆ ಚುನಾವಣೆ : ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ


ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೇಸಾಯಿಯವರಿಗೆ ಸ್ಟೆಫ್‌ಮಿಜ್ ಎಂಬ ಮಹಿಳೆಯಿಂದ Friend Request ಬಂದಿತ್ತು. ಕೆಲ ದಿನಗಳ ಕಾಲ ಇಬ್ಬರು ಸರ ಪರಸ್ಪರ ಸಂದೇಶ ವಿನಿಮಯ ಮಾಡಿಕೊಂಡಿದ್ದಾರೆ. ಈ ಸ್ನೇಹ ಪ್ರೀತಿಗೆ ತಿರುಗಿತ್ತು. ದೇಸಾಯಿ ಆ ಯುವತಿಯನ್ನು ಲವ್‌ ಮಾಡಲು ಶುರು ಮಾಡಿದ್ದರು. ಹೀಗೆ ದೇಸಾಯಿಗೆ ಪರಿಚಯವಾದ ಯುವತಿ ತನ್ನ ಕಂಪನಿಗೆ ಭಾರತದಿಂದ ಗಿಡಮೂಲಿಕೆ ಉತ್ಪನ್ನಗಳು ಬೇಕಾಗಿವೆ. ನೀವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ. ಈ ಉತ್ಪನ್ನಗಳನ್ನು ಪ್ರತಿ ಪ್ಯಾಕೆಟ್‌ಗೆ 1 ಲಕ್ಷ ರೂ.ಗೆ ಖರೀದಿಸಿ, ನಂತರ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಬಹುದು. ಈ ಮೂಲಕ ಕೋಟಿ ಕೋಟಿ ಹಣ ಗಳಿಸಬಹುದ ಎಂದು ಆ ಯುವತಿ ನಂಬಿಸಿದ್ದರಳು. 


ಹೆಚ್ಚು ಲಾಭ ಬರುತ್ತದೆ ಎಂದು ನಂಬಿದ ದೇಸಾಯಿ ಯುವತಿಯ ಹೇಳಿದಕ್ಕೆ ಓಕೆ ಅಂದಿದ್ದರು. ಆ ಯುವತಿ ಮತ್ತೊಬ್ಬ ವ್ಯಕ್ತಿಗೆ ಪರಿಚಯ ಮಾಡಿಸಿದ್ದಳು. ಅದರಂತೆ ದೇಸಾಯಿಯವರಿಗೆ ಉತ್ಪನ್ನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಆ ವ್ಯಕ್ತಿ ಬ್ಯುಸಿನೆಸ್‌ ಮಾಡೆಲ್‌ ಬಗ್ಗೆ ತಿಳಿಸಿದ್ದ. ಅವರ ಬಣ್ಣ ಬಣ್ಣದ ಮಾತುಗಳನ್ನು ನಂಬಿದ ದೇಸಾಯಿ ಸುಲಭವಾಗಿ ಕೋಟಿ ಕೋಟಿ ಗಳಿಸಬಹುದು ಎಂದು ನಂಬಿದ್ದರು.


ಇದನ್ನೂ ಓದಿ: Lok Sabha Election 2024: 4600 ಕೋಟಿಗೂ ಅಧಿಕ ದಾನ! ಇಲೆಕ್ಟೋರಲ್ ಬಾಂಡ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಚುನಾವಣಾ ಆಯೋಗ 


ಗಿಡಮೂಲಿಕೆ ಉತ್ಪನ್ನಕ್ಕಾಗಿ ಯುವತಿ ಪರಿಚಯಿಸಿದ ವ್ಯಕ್ತಿಯ ಖಾತೆಗೆ ಮೊದಲು 1 ಲಕ್ಷ ರೂ.ಗಳನ್ನು ಆನ್‌ಲೈನ್‌ ಮೂಲಕ ಕಳುಹಿಸಿದ್ದರು. ಬಳಿಕ ಮತ್ತೆ ಹಂತ ಹಂತವಾಗಿ ವಿವಿಧ ಖಾತೆಗಳಿಗೆ ಒಟ್ಟು 95 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ ವಂಚಕರಿಂದ ಯಾವುದೇ ರೀತಿಯ ಲಾಭ ದೊರೆಯದಿದ್ದಾಗ ತಾನು ಮೋಸ ಹೋಗಿರುವುದು ದೇಸಾಯಿಯವರಿಗೆ ಗೊತ್ತಾಗಿದೆ. ಕೂಡಲೇ ಅವರು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗುಜರಾತ್‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ