Pencil Peel: ಸಣ್ಣ ಮಕ್ಕಳು ಕೆಲವೊಮ್ಮೆ ಆಟವಾಡಲು ಹೋಗಿ ಅಪಾಯಕ್ಕೆ ಸಿಲುಕುತ್ತಾರೆ. ಈ ಕೃತ್ಯಗಳನ್ನು ಅಜಾಗರೂಕೆಯಿಂದ ಮಾಡುತ್ತಾರೆ. ಮಕ್ಕಳಿಗೆ ಅವುಗಳ ಪರಿಣಾಮ ತಿಳಿದಿರುವುದಿಲ್ಲ. ಆದರೆ ಅವುಗಳ ಪರಿಣಾಮಗಳು ಗಂಭೀರವಾಗುತ್ತವೆ. ಇಂತಹದೊಂದು ಅತ್ಯಂತ ದುರದೃಷ್ಟಕರ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ಪೆನ್ಸಿಲ್ ಸಿಪ್ಪೆಯಿಂದ ಹೆಣ್ಣು ಮಗು ಸಾವನ್ನಪ್ಪಿದೆ.


COMMERCIAL BREAK
SCROLL TO CONTINUE READING

ಈ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಹುಡುಗಿ ತನ್ನ ಬಾಯಿಯಲ್ಲಿ ಇಟ್ಟುಕೊಂಡು ಪೆನ್ಸಿಲ್ ಸಿಪ್ಪೆ ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಬಾಲಕಿಗೆ ಆರು ವರ್ಷ ವಯಸ್ಸಾಗಿದ್ದು, ಮನೆಯ ಟೆರೇಸ್ ಮೇಲೆ ತನ್ನ ಸಹೋದರನೊಂದಿಗೆ ಓದುತ್ತಿದ್ದಳು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅವಳು ತನ್ನ ಪೆನ್ಸಿಲ್ ಅನ್ನು ಸಿಪ್ಪೆ ತೆಗೆಯಲು ಪ್ರಾರಂಭಿಸಿದಳು.


ಇದನ್ನೂ ಓದಿ : CM Bommai on COVID-19 Precautions: ಸರ್ಕಾರದ ಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ: ಸಿಎಂ ಬೊಮ್ಮಾಯಿ


ಸಿಪ್ಪೆಯು ಹೆಣ್ಣು ಮಗುವಿನ ಗಂಟಲಿಗೆ ಸಿಲುಕಿಕೊಂಡಿತು. ಈ ಬಾಲಕಿ ಬಾಯಿಗೆ ಕಟ್ಟರ್ ಅಂಟಿಸಿ ಪೆನ್ಸಿಲ್ ಸುಲಿಯುತ್ತಿದ್ದಳು ಆದರೆ ದುರಾದೃಷ್ಟವಶಾತ್ ಆ ಸಿಪ್ಪೆಯು ಬಾಲಕಿಯ ಗಂಟಲಿಗೆ ಸಿಲುಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸಿಪ್ಪೆ ಅಂಟಿಕೊಂಡಾಗ ಉಸಿರುಗಟ್ಟಿಸಲಾರಂಭಿಸಿದೆ. ಈ ವೇಳೆ ಮನೆಯವರು ನೋಡಿ, ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಹುಡುಗಿ ಮೃತಪಟ್ಟಿದ್ದಳು. ಪೆನ್ಸಿಲ್ ಸಿಪ್ಪೆಯು ಬಾಲಕಿಯ ಶ್ವಾಸನಾಳದಲ್ಲಿ ಸಿಲುಕಿಕೊಂಡು, ಸಾವನ್ನಪ್ಪಿದ್ದಾಳೆ. 


ವರದಿಗಳ ಪ್ರಕಾರ, ಇದು ಹಮೀರ್‌ಪುರದ ಕೊತ್ವಾಲಿಯಲ್ಲಿರುವ ಹಳ್ಳಿಯಲ್ಲಿ ನಡೆದಿದೆ. ಇಲ್ಲಿ ವಾಸವಾಗಿರುವ ನಂದಕಿಶೋರ್ ಎಂಬವರ ಪುತ್ರ ಹಾಗೂ ಇಬ್ಬರು ಪುತ್ರಿಯರು ತಾರಸಿಯ ಮೇಲೆ ಓದುತ್ತಿದ್ದು, ಈ ವೇಳೆ ಆರು ವರ್ಷದ ಬಾಲಕಿ ಈ ಅಪಘಾತಕ್ಕೆ ಬಲಿಯಾಗಿದ್ದಾಳೆ.


ಇದನ್ನೂ ಓದಿ : CCB Raid: ಶ್ಯಾಮನೂರು ಶಿವಶಂಕರಪ್ಪ ಪುತ್ರ SS ಮಲ್ಲಿಕಾರ್ಜುನ್ ಫಾರ್ಮ್‌ನಲ್ಲಿ ವನ್ಯಜೀವಿಗಳು ಪತ್ತೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.