ವ್ಹೀಲಿಂಗ್ ಪುಂಡರ ಬೈಕ್ ಪೀಸ್- ಪೀಸ್ ಮಾಡಿದ್ರು ಜನ..! ಹೊಡಿರಿ ಚಪ್ಪಾಳೆ.. ಇಂತ ಜನ ಎಲ್ಲಿ ಸಿಗ್ತಾರೆ
ವ್ಹೀಲಿಂಗ್ ಮಾಡುವ ಪುಂಡರ ವರ್ತನೆಯಿಂದ ರೊಚ್ಚಿಗೆದ್ದ ಜನ ಪುಂಡರ ಎರಡು ಸ್ಕೂಟರ್ಗಳನ್ನು ಫ್ಲೈಓವರ್ನಿಂದ ಕೆಳಗೆ ಎಸೆದು ಪೀಸ್ ಪೀಸ್ ಮಾಡಿ ಬುದ್ದಿ ಕಲಿಸಿದ್ದಾರೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಬೆಂಗಳೂರು: ಪೊಲೀಸರು ಎಷ್ಟೇ ವಾರ್ನಿಂಗ್ ಮಾಡಿದ್ರು ಶೋಕಿಗೆ ಅಂತಾ ವ್ಹೀಲಿಂಗ್ ಮಾಡಿ ಸಾರ್ವಜನಿಕ ಕಿರಿಕಿರಿ ಉಂಟು ಮಾಡೋದಷ್ಟೇ ಅಲ್ಲದೇ ಹಲವರ ಪ್ರಾಣಕ್ಕೆ ಸಂಚಕರ ತರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಇಂತವರನ್ನು ಹಿಡಿದು ಜನರೇ ತಕ್ಕ ಶಾಸ್ತಿ ಮಾಡಿರುವ ಘಟನೆ ನಡೆದಿದೆ.
ಹೌದು.. ವ್ಹೀಲಿಂಗ್ ಮಾಡುವ ಪುಂಡರ ವರ್ತನೆಯಿಂದ ರೊಚ್ಚಿಗೆದ್ದ ಜನ ಪುಂಡರ ಎರಡು ಸ್ಕೂಟರ್ಗಳನ್ನು ಫ್ಲೈಓವರ್ನಿಂದ ಕೆಳಗೆ ಎಸೆದು ಪೀಸ್ ಪೀಸ್ ಮಾಡಿ ಬುದ್ದಿ ಕಲಿಸಿದ್ದಾರೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಅಡಕಮಾರನಹಳ್ಳಿಯ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದ ಕೆ.ಎಸ್.ಈಶ್ವರಪ್ಪ
ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಜನ ಆತ ಮತ್ತು ಆತನ ಸ್ನೇಹಿತನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ಮುಂದೆ ವ್ಹೀಲಿಂಗ್ ಮಾಡಬಾರದು ತಕ್ಕ ಶಾಸ್ತಿ ಮಾಡಬೇಕು ಎಂಬ ಕಾರಣಕ್ಕೆ ಸ್ಕೂಟರ್ಅನ್ನು ಫ್ಲೈಓವರ್ ನಿಂದ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ವ್ಹೀಲಿಂಗ್ ಮಾಡುವ ಕಿಡಿಗೇಡಿಗಳಿಗೆ ಇದೇ ರೀತಿ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ವ್ಹೀಲಿಂಗ್ ಮಾಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ಪುಂಡರಿಗೆ ಒಳ್ಳೆ ಪಾಠ ಕಲಿಸಿದ್ದಾರೆ ಜನ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ