ಬೆಂಗಳೂರು: ರಾಜ್ಯದ್ಯಾಂತ ಪಿಎಫ್‌ಐ ಕಾರ್ಯಕರ್ತರ ಮೇಲಿನ ದಾಳಿಯಿಂದ  ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ‌.ಕೆಜಿ ಹಳ್ಳಿಯಲ್ಲಿ ಪಿಎಫ್ ಐ ಕಾರ್ಯಕರ್ತರ ಮೇಲೆ ದಾಖಲಿಸಿರುವ ಎಫ್ ಐ ಆರ್ ನಲ್ಲಿ ಪಿಎಫ್ಐ ಮುಖಂಡರು ಕಾರ್ಯಕರ್ತರಿಗೆ ಹರಿತವಾದ ಆಯುದಗಳನ್ನ ಹೇಗೆ ಬಳಸಬೇಕು ಎಂದು ತರಬೇತಿ ನೀಡುತ್ತಿದ್ದರು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ರಾಜ್ಯ ಪೊಲೀಸರ ಕಾರ್ಯಾಚರಣೆ: ಮತ್ತೆ 40 ಕ್ಕೂ ಹೆಚ್ಚು ಪಿಎಫ್ಐ ನಾಯಕರು ವಶಕ್ಕೆ


ವೇಣುಗೋಪಾಲ್ ನೀಡಿರುವ ದೂರಿನಲ್ಲಿ ಈ ಅಂಶವನ್ನ ಉಲ್ಲೇಖಿಸಲಾಗಿದ್ದು, ಈ ರೀತಿ ತರಬೇತಿ ಪಡೆದ ಯುವಕರಿಂದ ಧರ್ಮಾಧಾರಿತ ವ್ಯಕ್ತಿಗಳ ಹತ್ಯೆಗೆ ಪ್ಲಾನ್ ಮಾಡಲಾಗ್ತಿತ್ತು ಎಂದು ದೂರಿದ್ದಾರೆ.ಅಲ್ಲದೇ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಪಿತೂರಿ ಮಾಡುತ್ತಿರುವ ಆರೋಪ ಸಹ ಮಾಡಲಾಗಿದೆ.


ಹಿಂಸಾತ್ಮಕ ಸಿದ್ದಾಂತಗಳನ್ನ ಇಟ್ಟುಕೊಂಡು ಯುವಕರನ್ನ ಪಿಎಫ್ ಐ ಗೆ ಸೇರ್ಪಡೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಇತ್ತಿಚೇಗೆ  ದೇಶ ಮತ್ತು ರಾಜ್ಯದಲ್ಲಿ ಆದ ಬೆಳವಣಿಗೆ ಹಿನ್ನೆಲೆ ಈ ತರಬೇತಿ ನೀಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಅಲ್ಲದೆ ಕೆಲ‌ ಅನ್ಯಕೋಮಿನ ಕಾರ್ಯಕರ್ತರ ಹತ್ಯೆಗೂ ಸಂಚೂ ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಹರಿತವಾದ ಆಯುಧಗಳನ್ನು ಬಳಸಿ ನಡೆಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.


ಇದನ್ನೂ ಓದಿ : ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಪಿಎಫ್‌ಐ ನೆಲೆಗಳ ಮೇಲೆ ದಾಳಿ, ಹಲವರು ಅರೆಸ್ಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.