ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ವರದಿಯು 2021 ರಲ್ಲಿ 1,49,404 ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತೋರಿಸುತ್ತದೆ ಅದರಲ್ಲಿ ಶೇ 36.05 ರಷ್ಟು (53,874) ಪ್ರಕರಣಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ವ್ಯಾಪ್ತಿಯಲ್ಲಿ ಬರುತ್ತವೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

2020 ರಲ್ಲಿ ಮಕ್ಕಳ ವಿರುದ್ಧದ 1,28,531 ಅಪರಾಧ ಪ್ರಕರಣಗಳಲ್ಲಿ 47,221 ಪೊಕ್ಸೋ ಪ್ರಕರಣಗಳು (ಶೇ. 36.73) ಮತ್ತು 2019 ರಲ್ಲಿ 1,48,185 ಪ್ರಕರಣಗಳಲ್ಲಿ 47,335 (ಶೇ.31.94).ದಾಖಲಾಗಿವೆ. ಪೋಕ್ಸೊ ಅಡಿಯಲ್ಲಿ ದಾಖಲಾದ ಪ್ರಕರಣಗಳ ಎನ್‌ಸಿಆರ್‌ಬಿ ಡೇಟಾವು ದರದಲ್ಲಿ ಸ್ಥಿರವಾದ ಹೆಚ್ಚಳವನ್ನು ತೋರಿಸುತ್ತದೆ (ಪ್ರತಿ 1 ಲಕ್ಷ ಮಕ್ಕಳಿಗೆ ಘಟನೆಗಳು): 2021 ರಲ್ಲಿ 12.1 (53,276 ಹುಡುಗಿಯರು, 1,083 ಹುಡುಗರು); 2020 ಮತ್ತು 2019 ಎರಡರಲ್ಲೂ 10.6. ಎಂದು ವರದಿ ಉಲ್ಲೇಖಿಸಿದೆ.


ಸಿಕ್ಕಿಂನಲ್ಲಿ 48.6 ಮಕ್ಕಳ ವಿರುದ್ಧ ಅತಿ ಹೆಚ್ಚು ಲೈಂಗಿಕ ಅಪರಾಧಗಳಿವೆ, ನಂತರ ಕೇರಳ (28.1), ಮೇಘಾಲಯ (27.8), ಹರಿಯಾಣ (24.7) ಮತ್ತು ಮಿಜೋರಾಂ (24.6).


ಇದನ್ನೂ ಓದಿ : ತೆರೆಗೆ ಬರಲಿದೆ ಶಿವಣ್ಣ - ಪ್ರಭುದೇವ ಅಭಿನಯದ ಚಿತ್ರ , ಭಟ್ರ ನಿರ್ದೇಶನದಲ್ಲಿ ಭರದಿಂದ ಸಾಗಿದೆ ಚಿತ್ರೀಕರಣ


2021 ರಲ್ಲಿ ಪೋಕ್ಸೊ ಅಡಿಯಲ್ಲಿ ದಾಖಲಾದ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಯುಪಿ (7,129) ನಂತರ ಮಹಾರಾಷ್ಟ್ರ (6,200), ಮಧ್ಯಪ್ರದೇಶ (6,070), ತಮಿಳುನಾಡು (4,465) ಮತ್ತು ಕರ್ನಾಟಕ (2,813) ರಾಜ್ಯಗಳಲ್ಲಿ ವರದಿಯಾಗಿವೆ.


ಶೇಕಡಾವಾರು ಪ್ರಮಾಣದಲ್ಲಿ 2021 ರಲ್ಲಿ ಮಕ್ಕಳ ವಿರುದ್ಧದ ಅಪರಾಧದ ಅಡಿಯಲ್ಲಿ ಪ್ರಮುಖ ವರ್ಗಗಳೆಂದರೆ ಅಪಹರಣ (ಶೇ.45) ಇದರ ನಂತರ ಪೋಕ್ಸೊ ಪ್ರಕರಣಗಳು ಬರುತ್ತವೆ.ಒಟ್ಟಾರೆಯಾಗಿ, 2021 ರಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳಲ್ಲಿ ಹಿಂದಿನ ವರ್ಷಕ್ಕಿಂತ 16.2 ಶೇಕಡಾ ಏರಿಕೆಯಾಗಿದೆ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ. "ಪ್ರತಿ ಲಕ್ಷ ಮಕ್ಕಳ ಜನಸಂಖ್ಯೆಗೆ ದಾಖಲಾದ ಅಪರಾಧದ ಪ್ರಮಾಣವು 2020 ರಲ್ಲಿ 28.9 ಕ್ಕೆ ಹೋಲಿಸಿದರೆ 2021 ರಲ್ಲಿ 33.6 ಆಗಿದೆ," ಎಂದು ವರದಿ ಹೇಳುತ್ತದೆ.


ಸಿಕ್ಕಿಂ ರಾಜ್ಯಗಳ ಪೈಕಿ ಮಕ್ಕಳ ವಿರುದ್ಧದ ಅಪರಾಧಗಳ ಪ್ರಮಾಣವು 72.4 ರಷ್ಟಿದೆ, ನಂತರ ಮಧ್ಯಪ್ರದೇಶವು 66.7 ರಷ್ಟಿದೆ.ಮಧ್ಯಪ್ರದೇಶದಲ್ಲಿ 9,173 (2021) ಅತಿ ಹೆಚ್ಚು ನೈಜ ಪ್ರಕರಣಗಳು ದಾಖಲಾಗಿವೆ. 2020 ರಲ್ಲಿ ಅದು 17,000 ಕ್ಕೂ ಹೆಚ್ಚು ಪ್ರಕರಣಗಳೊಂದಿಗೆ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ, ನಂತರ ಯುಪಿ ಮತ್ತು ಮಹಾರಾಷ್ಟ್ರ. 2019 ರಲ್ಲಿ, ಮಹಾರಾಷ್ಟ್ರವು 19,592 ಪ್ರಕರಣಗಳನ್ನು ಹೊಂದಿದ್ದು, ಮಧ್ಯಪ್ರದೇಶ ಮತ್ತು ಯುಪಿ ನಂತರದ ಸ್ಥಾನದಲ್ಲಿದೆ.


ಹರಿಯಾಣ, ಛತ್ತೀಸ್‌ಗಢ, ತೆಲಂಗಾಣ, ಒಡಿಶಾ ಮತ್ತು ಅಸ್ಸಾಂ 2021 ರಲ್ಲಿ ಮಕ್ಕಳ ವಿರುದ್ಧದ ಹೆಚ್ಚಿನ ಅಪರಾಧಗಳನ್ನು ಹೊಂದಿರುವ ಇತರ ರಾಜ್ಯಗಳಾಗಿವೆ. ನಾಗಾಲ್ಯಾಂಡ್‌ನಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ ಪ್ರಮಾಣವು 6.2 ರಷ್ಟು ಕಡಿಮೆಯಾಗಿದೆ ಮತ್ತು 2021 ರಲ್ಲಿ 51 ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ ಅಲ್ಲಿ 59 ಮತ್ತು 2020 ರಲ್ಲಿ 31 ಪ್ರಕರಣಗಳು ದಾಖಲಾಗಿವೆ.


ಕೇಂದ್ರಾಡಳಿತ ಪ್ರದೇಶಗಳಲ್ಲಿ, ದೆಹಲಿಯು 2021 ರಲ್ಲಿ 7,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಿಸುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಅಪರಾಧ ಪ್ರಕರಣಗಳು ಹೊಂದಿದೆ ಕೇಂದ್ರಾಡಳಿತ ಪ್ರದೇಶ ಎನ್ನುವ ಕುಖ್ಯಾತಿಗೆ ಹೆಸರು ವಾಸಿಯಾಗಿದೆ.


2021 ರಲ್ಲಿ 140 ಮಕ್ಕಳನ್ನು ಅತ್ಯಾಚಾರ ಮತ್ತು ಹತ್ಯೆ ಮಾಡಲಾಗಿದ್ದು, ಇನ್ನೂ 1,402 ಮಕ್ಕಳನ್ನು ಕೊಲ್ಲಲಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿ-ಅಂಶಗಳು ತೋರಿಸುತ್ತದೆ.ಮಕ್ಕಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ 359 ಪ್ರಕರಣಗಳು ದಾಖಲಾಗಿವೆ.ಯುಪಿಯಲ್ಲಿ ಅತಿ ಹೆಚ್ಚು ಅತ್ಯಾಚಾರ ಮತ್ತು ಕೊಲೆಗಳು ಮತ್ತು ಮಕ್ಕಳ ಹತ್ಯೆಗಳು ನಡೆದಿವೆ.


ವರದಿಯ ಪ್ರಕಾರ, ಕಳೆದ ವರ್ಷ 121 ಭ್ರೂಣಹತ್ಯೆಯ ಪ್ರಕರಣಗಳು ದಾಖಲಾಗಿದ್ದು, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ (ತಲಾ 23) ನಂತರದ ಸ್ಥಾನದಲ್ಲಿ ಛತ್ತೀಸ್‌ಗಢ (21) ಮತ್ತು ರಾಜಸ್ಥಾನ (13) ದಾಖಲಾಗಿವೆ.2020 ರಲ್ಲಿ 112 ಭ್ರೂಣಹತ್ಯೆ ಪ್ರಕರಣಗಳು ನಡೆದಿದ್ದು, ಆ ವರ್ಷದಲ್ಲಿ ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಮೊದಲ ಸ್ಥಾನದಲ್ಲಿವೆ.


ಮಹಾರಾಷ್ಟ್ರ (9,415), ಮಧ್ಯಪ್ರದೇಶ (8,224), ಒಡಿಶಾ (5,135) ಮತ್ತು ಪಶ್ಚಿಮ ಬಂಗಾಳ (4,026) ನಲ್ಲಿ ಕಳೆದ ವರ್ಷ 49,535 ಮಕ್ಕಳನ್ನು ಅಪಹರಿಸಲಾಗಿತ್ತು. 2021ರಲ್ಲಿ ದೆಹಲಿಯಲ್ಲಿ 5,345 ಮಕ್ಕಳನ್ನು ಅಪಹರಿಸಲಾಗಿತ್ತು.


ಇದನ್ನೂ ಓದಿ : ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣ: ಮಠದ ಆವರಣ ಪರಿಶೀಲಿಸಿದ ಪೊಲೀಸರು!


 29,364 ಮಕ್ಕಳನ್ನು ಕಾಣೆಯಾಗಿವೆ ಮತ್ತು ಅಪಹರಣ ಮಾಡಲಾಗಿದೆ ಎಂದು ಎನ್‌ಸಿಆರ್‌ಬಿ ವರದಿಯು ಪರಿಗಣಿಸಿದೆ. ಈ ಸಂಖ್ಯೆಯು 12,347 ಅಪ್ರಾಪ್ತ ಬಾಲಕಿಯರನ್ನು "ವಿವಾಹಕ್ಕೆ ಬಲವಂತಪಡಿಸುವ" ಉದ್ದೇಶಕ್ಕಾಗಿ ಒಳಗೊಂಡಿದೆ ಎಂದು ವರದಿಯು ತಿಳಿಸಿದೆ. ಕಳೆದ ವರ್ಷ 1,046 ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ದೆಹಲಿ, ಬಿಹಾರ ಮತ್ತು ಅಸ್ಸಾಂ ಅಗ್ರಸ್ಥಾನದಲ್ಲಿದೆ.


ಕಳೆದ ವರ್ಷ ಬಾಲಕಾರ್ಮಿಕ ಕಾಯ್ದೆಯಡಿ 982 ಪ್ರಕರಣಗಳು ದಾಖಲಾಗಿದ್ದು, ತೆಲಂಗಾಣದಲ್ಲಿ ಅತಿ ಹೆಚ್ಚು ಪ್ರಕರಣಗಳು (305) ದಾಖಲಾಗಿದ್ದು, ಅಸ್ಸಾಂ ನಂತರದ ಸ್ಥಾನದಲ್ಲಿದೆ.


ಕರ್ನಾಟಕ, ತಮಿಳುನಾಡು ಮತ್ತು ಅಸ್ಸಾಂ ಸೇರಿದಂತೆ ಪ್ರಮುಖ ಮೂರು ರಾಜ್ಯಗಳೊಂದಿಗೆ ಕಳೆದ ವರ್ಷ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 1,062 ಪ್ರಕರಣಗಳು ದಾಖಲಾಗಿವೆ ಎಂದು ವರದಿ ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.