ಬಾಲಕಿಯರ ಮೇಲೆ ದೌರ್ಜನ್ಯ ಆರೋಪ.. ಮುರುಘಾ ಶ್ರೀಗಳು ಪೊಲೀಸ್ ವಶಕ್ಕೆ!?
ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾವೇರಿ : ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾವೇರಿ ಜಿಲ್ಲೆಯ ಬಂಕಾಪುರ ಹೆದ್ದಾರಿಯ ಟೋಲ್ ಬಳಿ ಮುರುಘಾ ಶ್ರೀಗಳನ್ನು ಖಾಕಿ ವಶಕ್ಕೆ ಪಡೆದಿದ್ದಾರೆ. ಹಾವೇರಿಯಿಂದ ಚಿತ್ರದುರ್ಗದತ್ತ ಮುರುಘಾ ಶ್ರೀಗಳು ಬರುತ್ತಿದ್ದ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಅವರನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಬರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಚಾಮರಾಜನಗರದ ಹಲವೆಡೆ ಮಳೆ ಅವಾಂತರ: ಕೋಡಿ ಬಿದ್ದಿವೆ ಹಲವು ಕೆರೆ
ಹಾವೇರಿ ಬಳಿಯ ಬಂಕಾಪುರ ಬಳಿಯ ಹೆದ್ದಾರಿಯಲ್ಲಿ ಮುರುಘಾ ಶರಣರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿರಂತರ ಶ್ರೀಗಳ ಫೋನ್ ಟ್ರೇಸ್ ಮಾಡುತ್ತಿದ್ದ ಪೊಲೀಸರು, ಚಿತ್ರದುರ್ಗದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಮುರುಘಾ ಶರಣರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ ಹಾಗೂ ಹಾವೇರಿ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಮುರುಘಾ ಶರಣರ ಕಾರು ಸಮೇತ ಅವರನ್ನು ವಶಕ್ಕೆ ಪಡೆಯಲಾಗಿದೆ. ಮುರುಘಾ ಶರಣರ ಕಾರಿನ ಸಮೇತ ಚಿತ್ರದುರ್ಗಕ್ಕೆ ಕರೆತರುತ್ತಿದ್ದಾರೆ. ಅಲ್ಲದೇ ಪೊಲೀಸರು ವಶಕ್ಕೆ ಪಡೆಯುವಾಗ ಶ್ರೀಗಳು ಕಾವಿ ಬಟೆಯಲ್ಲಿರಲಿಲ್ಲ, ಬದಲಾಗಿ ಬೇರೆ ಬಟ್ಟೆ ತೊಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗದ ಮುರುಘಾ ಮಠದ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ದೂರು ದಾಖಲಾಗಿದ್ದು, ಈ ಬಗ್ಗೆ ಈಗಾಗಲೇ ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿದೆ. ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆ ಮೈಸೂರಿನಿಂದ ಚಿತ್ರದುರ್ಗದ ಬಾಲಮಂದಿರಕ್ಕೆ ಸಂತ್ರಸ್ತ ವಿದ್ಯಾರ್ಥಿನಿಯರನ್ನು ಶಿಫ್ಟ್ ಮಾಡಲಾಗಿದೆ. ಭಾನುವಾರ(ಆ.28) ಬೆಳಗಿನ ಜಾವ 3.30ಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಕಚೇರಿ ಬಳಿಯ ಬಾಲಮಂದಿರಕ್ಕೆ ವಿದ್ಯಾರ್ಥಿನಿಯರು ಆಗಮಿಸಿದ್ದಾರೆ.
ಇದನ್ನೂ ಓದಿ: Talikoti : ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದ ಭೂಮಿಪೂಜಾದಲ್ಲಿ ಸಾವರ್ಕರ್ ಪೋಟೋ!
ಸಿಡಬ್ಲುಸಿ ಮುಂದೆ ಈ ವಿದ್ಯಾರ್ಥಿನಿಯರು ಹಾಜಾರಾಗಿದ್ದು, ಅವರಿಗೆ ಮೆಡಿಕಲ್ ಟೆಸ್ಟ್ ನಡೆಸಲಾಗಿದೆ. ಅಲ್ಲದೇ, ಮಕ್ಕಳ ಹೇಳಿಕೆ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೈಸೂರಿನಲ್ಲಿ ಹಾಗೂ ಚಿತ್ರದುರ್ಗದಲ್ಲಿನ ಹೇಳಿಕೆ ಒಂದೇ ಆದಲ್ಲಿ ಶ್ರೀಗಳನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಇದರ ನಂತರ ಮುರುಘಾ ಶ್ರೀಗಳನ್ನು ಮೆಡಿಕಲ್ ಟೆಸ್ಟ್ ಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ತಮ್ಮ ವಿರುದ್ಧದ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದ ಶ್ರೀಗಳು, ‘ನಾವು ಸಂಧಾನಕ್ಕೂ ಸಿದ್ಧ ಸಮರಕ್ಕೂ ಬದ್ಧರಿದ್ದೇವೆ. ಸಂಧಾನ ಮತ್ತೆ ಸಮರ ಎರಡೂ ಆಯ್ಕೆಗಳು ಇವೆ. ಸಂಧಾನ ನೀವು ಮಾಡಿ, ಒಂದು ವೇಳೆ ಅದು ಫೇಲ್ ಆದರೆ ಸಮರ ಇದ್ದೇ ಇದೆ. ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಈ ರೀತಿ ಪಿತೂರಿ, ಒಳಸಂಚು ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.