ಕಲಬುರಗಿ : ಮಾರಕಾಸ್ತ್ರ ಹಿಡಿದು ಜನರಿಗೆ ಹೆದರಿಸುತ್ತಿದ್ದ ವ್ಯಕ್ತಿಯ ಮೇಲೆ‌ ಪೊಲೀಸರಿಂದ ಫೈರಿಂಗ್ ಮಾಡಲಾಗಿದೆ. ಕಲಬುರಗಿಯ ಸೂಪರ್‌ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಒಂದು ಗಂಟೆ ಕಾಲ ತಲವಾರ್ ಹಿಡಿದು ಅವಾಜ್ ಹಾಕುತ್ತಿದ್ದ ಅಬ್ದುಲ್ ಜಾಫರ್ ಸಾಬ್ ಎಂಬ ವ್ಯಕ್ತಿ ಮೇಲೆ ಪೊಲೀಸರು ಫೈರಿಂಗ್‌ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : “ಮುಸ್ಲಿಂ ಸಮುದಾಯಕ್ಕೆ ಜಮೀರ್ ಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ”- ಎಚ್.ಡಿ.ಕುಮಾರಸ್ವಾಮಿ


ಸೂಪರ್‌ ಮಾರುಕಟ್ಟೆ ಪ್ರದೇಶದಲ್ಲಿ ಅಬ್ದುಲ್ ಜಾಫರ್ ಸಾಬ್ ಎಂಬ ವ್ಯಕ್ತಿ ಮಾರಕಾಸ್ತ್ರ ಹಿಡಿದು ಜನರಿಗೆ ಹೆದರಿಸುತ್ತಿದ್ದ. ಈ ವೇಳೆ ಶರಣಾಗಲು ಪೊಲೀಸರು ತಿಳಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ಅಬ್ದುಲ್ ಜಾಫರ್ ಸಾಬ್ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಮೂರು ಗುಂಡು ಹಾರಿಸಿದ್ದಾರೆ.


 



 


ಪಿಎಸ್ ಐ ವಾಹಿದ್ ಕೋತ್ವಾಲ್ ರಿಂದ ಆರೋಪಿಯ ಕಾಲಿಗೆ ಫರಿಂಗ್‌ ಮಾಡಲಾಗಿದೆ. ಪೊಲೀಸರು ಆರೋಪಿಯ ಕಾಲಿಗೆ ಫೈರ್ ಮಾಡುವ ದೃಶ್ಯ ವೈರಲ್ ಆಗುತ್ತಿದೆ. ಈ ಘಟನೆ ಹಿನ್ನೆಲೆ ಕಲಬುರಗಿ ಸೂಪರ್‌ ಮಾರುಕಟ್ಟೆ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 


ಇದನ್ನೂ ಓದಿ : ಉಂಡ ಮನೆಯ ಗಳ ಇರಿಯುವ ಜಮೀರ್ ಅಹ್ಮದ್: ಜೆಡಿಎಸ್ ಆಕ್ರೋಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.