ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅಂಡ್ ಗ್ಯಾಂಗ್ ಗೆ ಕ್ಷಿಪ್ರ ಗತಿಯಲ್ಲಿ ಶಿಕ್ಷೆ ಕೊಡಿಸಲು ಕಾಮಾಕ್ಷಿಪಾಳ್ಯ ಪೊಲೀಸರು ಮುಂದಾಗಿದ್ದಾರೆ. 


COMMERCIAL BREAK
SCROLL TO CONTINUE READING

ಹೀಗಾಗಿ ನಟ ದರ್ಶನ್ ಮತ್ತು ಗ್ಯಾಂಗ್ ಮೇಲೆ ಹೊಸ ಅಸ್ತ್ರ ಪ್ರಯೋಗಕ್ಕೆ ಪೊಲೀಸರು ಸಜ್ಜಾಗಿದ್ದಾರೆ. ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಶಿಕ್ಷೆ ಕೊಡಿಸಲು ಪೊಲೀಸರು ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.


ಇದನ್ನೂ ಓದಿ: 16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !


ಹೀಗಾಗಿ ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅಂದರ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಪ್ರಕರಣದ ವಿಚಾರಣೆಗೆ ಪ್ರತ್ಯೇಕ ಕೋರ್ಟ್ ಗಾಗಿ ಬೇಡಿಕೆ ಇಟ್ಟಿದೆ. ಇದಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಅಥವಾ ಸ್ಪೆಷಲ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕೆಂದು ಕೋರಿ ಮನವಿ ಸಲ್ಲಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಇನ್ನೂ ಮುಗಿಯದ ಕಾರಣ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಕೋರ್ಟ್ ಸ್ಥಾಪನೆ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ.


ವಿಶೇಷ ಕೋರ್ಟ್ ಎಂದರೇನು?


ವಿಶೇಷ ಕೋರ್ಟ್ ಅಂದರೆ ಈ ಪ್ರಕರಣಕ್ಕಾಗಿ ಮಾತ್ರ ತೆರೆಯಲಾಗುವ ಕೋರ್ಟ್ ಆಗಿರುತ್ತದೆ. ಈ ವಿಶೇಷ ಕೋರ್ಟ್‌ನಲ್ಲಿ ಇದೊಂದೆ ಪ್ರಕರಣದ ವಿಚಾರಣೆ ನಡೆಯಲಿದ್ದು,‌ ತ್ವರಿತಗತಿಯಲ್ಲಿ ವಾದ ಪ್ರತಿವಾದ ಆಲಿಸಿ ಕೋರ್ಟ್ ತೀರ್ಪು ಪ್ರಕಟಿಸುತ್ತದೆ. 


ಇನ್ನೂ ಫಾಸ್ಟ್ ಟ್ರ್ಯಾಕ್ ಕೋರ್ಟ್ ಎಂದರೆ ಈಗಿರುವ ಕೋರ್ಟ್ ನಲ್ಲಿ ಇತರೆ ಪ್ರಕರಣಗಳಂತೆ ಕೇಸ್ ನ ವಿಚಾರಣೆ ನಡೆಸುವುದಿಲ್ಲ. ವಾರದಲ್ಲಿ 4 ರಿಂದ 5 ಬಾರಿ ವಾದ ಪ್ರತಿವಾದ ಆಲಿಸಿ ಒಂದು ವರ್ಷದ ಒಳಗೆ ತೀರ್ಪು ಪ್ರಕಟಿಸಲಾಗುತ್ತೆ.


ಈ ತಿಂಗಳ ಅಂತ್ಯದೊಳಗೆ ಚಾರ್ಜ್ ಶೀಟ್?


ಈ ತಿಂಗಳ ಅಂತ್ಯದೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದು, ಈ ವಾರಾಂತ್ಯದಲ್ಲಿ ಎಫ್ಎಎಸ್ಎಲ್ ವರದಿ ಪೊಲೀಸರ ಕೈ ಸೇರುವ ಸಾಧ್ಯತೆಯಿದೆ. ತನಿಖೆ ವೇಳೆ ಸೀಜ್ ಮಾಡಲಾಗಿದ್ದ ವಸ್ತುಗಳನ್ನು ಪೊಲೀಸರು ಎಫ್ಎಸ್ಎಲ್ ಗೆ ಕಳುಹಿಸಿದ್ದರು.


ಆರೋಪಿಗಳ ಮೊಬೈಲ್, ಸಿಸಿಟಿವಿ ಡಿವಿಆರ್, ಬಟ್ಟೆ, ಶೂ, ಹಲ್ಲೆಗೆ ಬಳಸಿದ್ದ ಬೆಲ್ಟ್ ಸೇರಿ ಕೆಲವು ವಸ್ತುಗಳನ್ನು ಸಿಐಡಿ ಟೆಕ್ನಿಕಲ್ ಸೆಂಟರ್ ಹಾಗೂ ಹೈದರಾಬಾದ್ ಗೆ ಕಳುಹಿಸಿದ್ದಾರೆ‌.
ಸದ್ಯ ವರದಿ ಬಂದ ಮೇಲೆ ಅದಲ್ಲಿರುವ ಅಂಶಗಳನ್ನು ಸಾಕ್ಷ್ಯಗಳಾಗಿ ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದಾರೆ.


ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಈ ಖ್ಯಾತ ವಿಲನ್‌ ನೆನಪುಂಟೆ? ಇವರ ಮೊದಲ ಪತ್ನಿ ಆ ಸ್ಟಾರ್ ಹೀರೋಯಿನ್... ಯಾರು ಗೊತ್ತೇ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.