Groom Escape, Bride Protest: ಮದುವೆ ಹಿಂದಿನ ದಿನ ವರನೋರ್ವ ಕೈಕೊಟ್ಟು ಪರಾರಿಯಾದ ಹಿನ್ನೆಲೆ ಮದುವೆಗಾಗಿ ತಿಂಗಳುಗಟ್ಟಲೇ ಕಾದು ಬೇಸತ್ತ ಯುವತಿ ಹುಡುಗನ ಮನೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಕೊಳ್ಳೇಗಾಲದ ಶಂಕನಪುರ ಬಡಾವಣೆಯ ನಿವಾಸಿ ದಿವ್ಯಶ್ರೀ ಪ್ರತಿಭಟನೆ ಮಾಡಿದ ಯುವತಿಯಾಗಿದ್ದು ಕುಂತೂರು ಗ್ರಾಮದ ಮಹೇಶ್ ಎಂಬಾತ ಮದುವೆ ಹಿಂದಿನ ದಿನ ಪರಾರಿಯಾದ ವರನಾಗಿದ್ದಾನೆ.


ಬೆಂಗಳೂರಲ್ಲಿ ಪ್ರೇಮ್ ಕಹಾನಿ!
ಬೆಂಗಳೂರಿನಲ್ಲಿ ದಿವ್ಯಶ್ರೀ ಹಾಗೂ ಮಹೇಶ್ ನಡುವೆ  ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ನಂತರ ಇವರಿಬ್ಬರು  ಕಳೆದ ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಒಟ್ಟಾಗಿ ಇದ್ದರು.


ಇದನ್ನೂ ಓದಿ- ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ದುರ್ಮರಣ..!


ಕೆಲ ತಿಂಗಳ ಹಿಂದಷ್ಟೆ ಯುವತಿ ನನ್ನನ್ನು ಮದುವೆ ಆಗು ಎಂದು ಹೇಳಿದ್ದಕ್ಕೆ ಇನ್ನು ಮೂರು ತಿಂಗಳು ಇಬ್ಬರು ಮದುವೆ ಆಗೋಣ ಎಂಬ ಭರವಸೆಯನ್ನು ಮಹೇಶ್ ನೀಡಿದ್ದ. ಆದರೆ ಮಾತಿಗೆ ನಡೆದುಕೊಳ್ಳದ ಕಾರಣ ತನ್ನ ಪಾಲಕರ ಬಳಿ ಯುವತಿ ಅಳಲು ತೋಡಿಕೊಂಡಿದ್ದಳು. ಅದರಂತೆ ಇತ್ತೀಚೆಗಷ್ಟೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಮತ್ತು ಯುವತಿ ಪಾಲಕರು ಎರಡು ಊರಿನ ಯಜಮಾನರು ಒಂದೆಡೆ ಸೇರಿ ಪಂಚಾಯಿತಿ ಮಾಡುವ ಮೂಲಕ ಇವರಿಬ್ಬರಿಗು ಚಿಲಕವಾಡಿ ದೇವಾಲಯದಲ್ಲಿ ಮದುವೆ ನಿಶ್ಚಯಮಾಡಿದ್ದರು.


ಮದುವೆ ಹಿಂದಿನ ದಿನ ನಾಪತ್ತೆ! 
ಅದರಂತೆ, ಎರಡು ಮನೆಯವರು ಒಪ್ಪಿ  ಕಳೆದ ನ.27 ರಂದು   ಚಿಲಕವಾಡಿ ಬೆಟ್ಟದಲ್ಲಿ ಮದುವೆ ನಿಶ್ಚಯ ಮಾಡಲಾಗಿತ್ತು. ವಧುವಿಗೆ ತಾಳಿ, ಸೀರೆ, ಕಾಲುಂಗುರ ತೆಗೆದು ಸಂಭ್ರಮದಲ್ಲಿದ್ದಾಗಲೇ ನ.26 ರಂದು ಮಹೇಶ್ ತನ್ನ ಫೋನ್ ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.


ಇದನ್ನೂ ಓದಿ- Chitradurga: ಇಬ್ಬರು ಮಕ್ಕಳನ್ನು ತೊಟ್ಟಿಯಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆ..!


ಈ ಸಂಬಂಧ ಮಾಂಬಳ್ಳಿ ಠಾಣೆಗೆ ದಿವ್ಯಶ್ರೀ ದೂರು ಕೂಡ ಕೊಟ್ಟಿದ್ದಳು. ಆದರೆ, ತಿಂಗಳು ಕಳೆದರೂ ವರನ ಸುಳಿವಿಲ್ಲದಿದ್ದರಿಂದ ಬೇಸತ್ತು ಆತನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.


ಸದ್ಯ, ಪೊಲೀಸರು ಮಹೇಶ್ ನನ್ನು ಹುಡುಕಿ ಕೊಡಲಾಗುವುದು ಎಂದು ಸಮಾಧಾನ ಪಡಿಸಿ ಆಕೆಯನ್ನು ಶಂಕನಪುರ ಗ್ರಾಮಕ್ಕೆ ಕಳುಹಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.