ಕೊಪ್ಪಳ: ಆಸ್ತಿ ವಿವಾದ ವಿಚಾರವಾಗಿ ಅಣ್ಣನೇ ತಮ್ಮನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಭೀಕರ ಘಟನೆ ಕೊಪ್ಪಳದ ಕವಲೂರು ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಕವಲೂರಿನ ನಿವಾಸಿ ವಿನಾಯಕ ದೇಸಾಯಿ (38) ಗುಂಡೇಟಿಗೆ ಬಲಿಯಾದ ವ್ಯಕ್ತಿ. ಆಸ್ತಿ ಕಲಹ ವಿಚಾರವಾಗಿ ಇವರ ಸಹೋದರ ರಾಘವೇಂದ್ರ ದೇಸಾಯಿ ತನ್ನ ಬಂದೂಕಿನಿಂದ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಯೋಗೇಶ್ ದೇಸಾಯಿ ಎಂಬಾತನಿಗೆ ಗಂಭೀರ ಗಾಯವಾಗಿದೆ.


ಇದನ್ನೂ ಓದಿ: ನನಗೆ ಈ ಶಿಕ್ಷೆ ಕಡಿಮೆ ಇನ್ನೂ ಶಿಕ್ಷೆ ಆಗ್ಬೇಕು: ಯುವತಿ ಒಪ್ಪಿದ್ರೆ ಮದುವೆ ಆಗ್ತಾನಂತೆ ಆ್ಯಸಿಡ್ ನಾಗ


ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಬಹುದಿನಗಳಿಂದ ಜಗಳವಿತ್ತು. ವಿವಾದ ಇರುವಾಗಲೇ ರಾಘವೇಂದ್ರ ದೇಸಾಯಿ ಹೊಲದಲ್ಲಿ ಬಿತ್ತನೆ ಮಾಡಿದ್ದ. ಇದನ್ನು ತೆರವುಗೊಳಿಸಲು ವಿನಾಯಕ‌ ದೇಸಾಯಿ ತೆರಳಿದಾಗ ಪರಸ್ಪರ ಜಗಳವಾಗಿದೆ. ಇದರಿಂದ ಕೋಪಗೊಂಡ ರಾಘವೇಂದ್ರ ದೇಸಾಯಿ ಪರವಾನಗಿ ಹೊಂದಿದ್ದ ತನ್ನ ಬಂದೂಕಿನಿಂದ ವಿನಾಯಕನಿಗೆ ಗುಂಡು ಹೊಡೆದು ಎಸ್ಕೇಪ್ ಆಗಿದ್ದ. ಗುಂಡೇಟಿನಿಂದ ತೀವ್ರ ರಕ್ತಸ್ರಾವವಾಗಿ ವಿನಾಯಕ ಪ್ರಾಣ ಬಿಟ್ಟಿದ್ದಾನೆ.  


ವಿಷಯ ತಿಳಿದು ಸ್ಥಳಕ್ಕೆ ಅಳವಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಪ್ಪಳ ಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ತಮ್ಮನನ್ನು ಹತ್ಯೆ ಮಾಡಿ ಮನೆಯಲ್ಲಿ ಅವಿತುಕುಳಿತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಸಿದ್ದರಾಮಯ್ಯಗೆ ಟಿಪ್ಪು ಮಾತ್ರವಲ್ಲ, ಮತಾಂಧರೆಲ್ಲರೂ ಆಪ್ತರೇ!: ಬಿಜೆಪಿ ಟೀಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.