ಬೆಂಗಳೂರು: ಕಳೆದ‌ ಏಪ್ರಿಲ್ ನಲ್ಲಿ ರಾಜಧಾನಿಯ 10ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಕರೆ‌ ಪ್ರಕರಣ ತಿರುವು ಪಡೆದಿದೆ. ಹುಸಿ ಬಾಂಬ್ ಇ-ಮೇಲ್ ಕಳಿಸುವುದಕ್ಕೆ ಮೂಲ‌‌ 17 ವರ್ಷದ ಬಾಲಕ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ತಮಿಳುನಾಡು ಮೂಲದ 17 ವರ್ಷದ ಬಾಲಕನೇ ಇ-ಮೇಲ್ ಗಳ ಮಾಸ್ಟರ್ ಮೈಂಡ್ ಆಗಿದ್ದಾನೆ ಎನ್ನಲಾಗಿದೆ. ಹುಸಿ ಬಾಂಬ್ ಕರೆಯ ಕೆಲ‌ದಿನಗಳ ಹಿಂದೆ ಭೋಪಾಲ್ ನ ಕೆಲ ಶಾಲೆಗಳಿಗೂ ದುಷ್ಕರ್ಮಿಗಳು ಇಮೇಲ್ ಮಾಡಿ ಬಾಂಬ್ ಇಟ್ಟಿರುವುದಾಗಿ ಹುಸಿ‌ ಸಂದೇಶ ಕಳುಹಿಸಿದ್ದ‌ರು. ಈ ಸಂಬಂಧ‌ ಅಲ್ಲಿನ ಪೊಲೀಸರು‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ನಡುವೆ ಬೆಂಗಳೂರಿನ ಕೆಲ ಶಾಲೆಗಳಿಗೂ ಥ್ರೆಟ್ ಕಾಲ್ ಬಂದಿತ್ತು‌‌.‌ ಈ‌ ಸಂಬಂಧ‌ ಮಾಹಿತಿ ಹಂಚಿಕೊಂಡ ಎರಡು ರಾಜ್ಯಗಳ‌ ಪೊಲೀಸರು ಬೆದರಿಕೆ ಬಂದಿದ್ದ ಎರಡು‌ ಇಮೇಲ್ ಗಳ ಐಪಿ ಅಡ್ರೆಸ್ ಬಂದಿರುವುದನ್ನು ಕಂಡುಕೊಂಡಿದ್ದಾರೆ.


ಇದನ್ನೂ ಓದಿ- ಕಣ್ಣಾಮುಚ್ಚಾಲೆ ಆಡೋಣ ಬಾ ಎಂದು ಬಾಲಕನಿಂದ ಚಿನ್ನ ಕದ್ದ ಖದೀಮರು


ಮೂಲತಃ ತಮಿಳುನಾಡಿನ ಮೂಲದವನಾಗಿರುವ 17 ವರ್ಷದ ಬಾಲಕ ಸಾಫ್ಟ್ ವೇರ್ ಕಂಪನಿ ಮಾಡುವ ಆಶಯ ಹೊಂದಿದ್ದನಂತೆ.  ಮಲ್ಟಿಪಲ್ ಮೇಲ್ ಕಳಿಸುವ ಬೋಟ್ ಸಾಫ್ಟ್ ವೇರ್ ಫ್ರೋಗಾಂ ಸಿದ್ದಪಡಿಸಿದ್ದ. ಬಳಿಕ ವಿದೇಶಿಯರಿಗೆ ಕಂಪ್ಯೂಟರ್ ಪ್ರೊಗ್ರಾಮ್ ಮಾರಾಟ ಮಾಡಿದ್ದನಂತೆ. 


ಇದನ್ನೂ ಓದಿ- ಡ್ಯಾಮ್‌ ಗೋಡೆ ಮೇಲೆ ಯುವಕನ ಚೆಲ್ಲಾಟ: ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬಿದ್ದ ದೃಶ್ಯ ನೋಡಿ!


ದುಷ್ಕರ್ಮಿಗಳು ಇದೇ ಸಾಫ್ಟ್ ವೇರ್ ನಿಂದ ಬೆಂಗಳೂರು ಹಾಗೂ ಭೋಪಾಲ್ ಶಾಲೆಗಳಿಗೆ  ಬೆದರಿಕೆ ಇಮೇಲ್ ಕಳುಹಿಸಿದ್ದರು. 17 ವರ್ಷದ ಬಾಲಕನ‌‌ ಮುಖಾಂತರ ಆರೋಪಿಗಳ ಪತ್ತೆಗೆ ನಗರ ಪೊಲೀಸರು ಮುಂದಾಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.