ಬೆಂಗಳೂರು: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ  ಆರೋಪದ ಹಿನ್ನೆಲೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಸ್ವಾಮಿ  ಎಂಬಾತನನ್ನು ಅಮಾನತುಗೊಳಿಸಲಾಗಿದೆ. ಮಂಜುನಾಥ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 354 ಎ ಹಾಗೂ 354 ಬಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

COMMERCIAL BREAK
SCROLL TO CONTINUE READING

ಏಪ್ರಿಲ್ 10 ರಂದು ಪಿಎಸ್ಐ ಮಂಜುನಾಥ್ ಸ್ವಾಮಿ ತನ್ನೊಂದಿಗೆ ಮೈ-ಕೈ ಮುಟ್ಟಿ ಅನುಚಿತ ವರ್ತನೆ ತೋರಿರುವುದಾಗಿ ಸಂತ್ರಸ್ತ ಮಹಿಳೆ ಟ್ವೀಟ್ ಮಾಡಿ ಡಿಸಿಪಿಗೆ ಟ್ಯಾಗ್ ಮಾಡಿದ್ದರು. ಕೃತ್ಯ ಸಂಬಂಧ ಮಾಹಿತಿ ಪಡೆದುಕೊಂಡ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ನೊಂದ ಯುವತಿಯಿಂದ ಲಿಖಿತವಾಗಿ ದೂರು ಪಡೆದುಕೊಂಡಿದ್ದರು. 


ಇದನ್ನೂ ಓದಿ- Freedom App Fraud Case: ಇಂಡಿಯನ್ ಮನಿ ಫ್ರೀಡಂ ಆ್ಯಪ್ CEO ಸುಧೀರ್ ಅರೇಸ್ಟ್!


ಪಿಎಸ್ಐ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಎಫ್ಐಆರ್ ದಾಖಲಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಆರೋಪ ಸಾಬೀತು ಹಿನ್ನೆಲೆ ಅಮಾನತುಗೊಳಿಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.‌‌ 


ಇದನ್ನೂ ಓದಿ- Crime News: ಇಂಗ್ಲಿಷ್ ಡಿಕ್ಷನರಿಯಂತೆ ಕಂಡರೂ ಇದು ಡಿಕ್ಷನರಿಯಲ್ಲ.. ಇದರ ಅಸಲಿಯತ್ತು ಬೇರೆನೆ ಇತ್ತು!


ಸಂತ್ರಸ್ತೆ ಸಹೋದರನ ಸ್ನೇಹಿತನ ವರದಕ್ಷಣೆ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಹೇಳಿಕೆ ನೀಡಲು ಸುದ್ದುಗುಂಟೆ ಪೊಲೀಸ್ ಠಾಣೆಗೆ ಹೋಗಿದ್ದರು. ಹೇಳಿಕೆ ಪಡೆಯುವಾಗ ಉದ್ದೇಶಪೂರ್ವಕವಾಗಿ ಮೈ-ಕೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆ. ಮನೆಗೆ ಹೋದ ಮೇಲೆ ಪೋಟೊಗಳನ್ನ ಕಳುಹಿಸುವಂತೆ ಒತ್ತಾಯಿಸಿದ್ದಾರೆ. ವಾಟ್ಸಾಪ್ ಮೇಸೆಜ್ ಮೂಲಕ ಕಿರುಕುಳ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಿಎಸ್ಐ ವಿರುದ್ಧ ಕಿಡಿಕಾರಿ ಮಹಿಳೆ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ಯುವತಿಯನ್ನು ಕರೆಯಿಸಿಕೊಂಡು ಲಿಖಿತವಾಗಿ ದೂರು ಪಡೆದು ನಂತರ ಎಫ್ಐಆರ್ ದಾಖಲಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.