ಟೆಕ್ಕಿಯಿಂದ ರ್ಯಾಪಿಡೋ ಬೈಕ್ ಬುಕ್: ಆಟೋ ಹತ್ತಲಿಲ್ಲ ಎಂದು ಮೈಮೇಲೆ ರೀಕ್ಷಾ ನುಗ್ಗಿಸಿದ ಚಾಲಕ
ಬೆಳಗಿನ ಜಾವ 3.30ರ ಸುಮಾರಿಗೆ ಟೆಕ್ಕಿಯೊಬ್ಬ ರ್ಯಾಪಿಡೋ ದ್ವಿಚಕ್ರ ವಾಹನಕ್ಕಾಗಿ ಕಾಯುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ಆಟೋ ಚಾಲಕ, ಎಲ್ಲಿಗೆ ಹೋಗಬೇಕು. ಆಟೋ ಹತ್ತಿ, ನಾನೇ ಅಲ್ಲಿಗೆ ಬಿಡುತ್ತೇನೆ ಎಂದಿದ್ದಾನೆ. ಆದರೆ ಟೆಕ್ಕಿ ರ್ಯಾಪಿಡೋ ಬುಕ್ ಮಾಡಿದ್ದೇನೆ ಎಂದು ಉತ್ತರಿಸಿದ್ದ. ಇದರಿಂದ ಕೋಪಗೊಂಡ ಆಟೋ ಚಾಲಕ ಮಾಡಿದ್ದೇನು...
ಬೆಂಗಳೂರು : ಬೆಂಗಳೂರಿನಲ್ಲಿ ಕೆಲ ಆಟೋ ಚಾಲಕರ ದುರ್ವರ್ತನೆ ಮಿತಿ ಮೀರಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೆಲ ಆಟೋ ಚಾಲಕರು ಪ್ರಯಾಣಿಕರು ಕೇಳಿದ ಕಡೆ ಬರಲು ಹಿಂದೇಟು ಹಾಕಿ ಮೀಟರ್ ಹಾಕಲ್ಲ ಎಂದು ಮನಸೋ ಇಚ್ಚೆ ಹಣ ಕೇಳುವುದು ಸಾಮಾನ್ಯವಾಗಿದೆ. ಇದ್ಯಾವುದೂ ಬೇಡ ಅಂತಾ ಪ್ರಯಾಣಿಕರು ಪರ್ಯಾಯ ಆಯ್ಕೆ ಆಯ್ದುಕೊಂಡರೆ ಮಾತ್ರ ಆಟೋ ಚಾಲಕರಿಗೆ ಕೋಪ ಬರುತ್ತೆ.
ರ್ಯಾಪಿಡೋ ದ್ವಿಚಕ್ರ ವಾಹನ ಬುಕ್ ಮಾಡಿ ಕಾಯುತ್ತಿದ್ದ ಟೆಕ್ಕಿ ಆಟೋ ಹತ್ತಲಿಲ್ಲ ಎಂದು ಆತನ ಮೈಮೇಲೆ ಹಲ್ಲೆ ಮಾಡಿ ಆಟೋ ಹತ್ತಿಸಲು ಯತ್ನಿಸಿರುವ ಘಟನೆ ಇಂದು ಬೆಳಗಿನ ಜಾವ ಹೆಚ್ಎಸ್ಆರ್ ಲೇಔಟಿನ ಸೆಕ್ಟರ್ 1ರಲ್ಲಿ ನಡೆದಿದೆ.
ಇದನ್ನೂ ಓದಿ- ಆಸ್ತಿಗಾಗಿ ವೃದ್ಧೆ ಜೀವಂತ ಇದ್ದಾಗಲೇ ಮರಣ ಪತ್ರ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬೆಳಗಿನ ಜಾವ 3.30ರ ಸುಮಾರಿಗೆ ಟೆಕ್ಕಿಯೊಬ್ಬ ರ್ಯಾಪಿಡೋ ದ್ವಿಚಕ್ರ ವಾಹನಕ್ಕಾಗಿ ಕಾಯುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ಆಟೋ ಚಾಲಕ, ಎಲ್ಲಿಗೆ ಹೋಗಬೇಕು. ಆಟೋ ಹತ್ತಿ, ನಾನೇ ಅಲ್ಲಿಗೆ ಬಿಡುತ್ತೇನೆ ಎಂದಿದ್ದಾನೆ. ಆದರೆ ಟೆಕ್ಕಿ ರ್ಯಾಪಿಡೋ ಬುಕ್ ಮಾಡಿದ್ದೇನೆ ಎಂದು ಉತ್ತರಿಸಿದ್ದ. ಇದರಿಂದ ಕೋಪಗೊಂಡ ಆಟೋ ಚಾಲಕ ಏಕಾಏಕಿ ಟೆಕ್ಕಿಯ ಮೇಲೆ ಆಟೋ ನುಗ್ಗಿಸಿದ್ದಾನೆ.
ಇದನ್ನೂ ಓದಿ- ಪಿಎಸ್‌ಐ, ಬಿಟ್ ಕಾಯಿನ್, ಟೆಂಡರ್ ಹಗರಣಗಳಿಗೆ ಮರುಜೀವ
ಆಟೋ ಡಿಕ್ಕಿಯಾದ ರಭಸಕ್ಕೆ ಟೆಕ್ಕಿ ರಸ್ತೆ ಬದಿಯಲ್ಲಿ ಬಿದ್ದು ಗಾಯಗೊಂಡಿದ್ದಾನೆ. ಆಟೋ ಚಾಲಕನ ಗೂಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೀಗೆ ಕೆಲ ತಿಂಗಳ ಹಿಂದೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ರ್ಯಾಪಿಡೋ ಕ್ಯಾಪ್ಟನ್ ಅನ್ನು ತಡೆದಿದ್ದ ಆಟೋ ಚಾಲಕ ಹೆಲ್ಮೆಟ್ ಒಡೆದು, ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಆಟೋ ನಿಲ್ದಾಣದ ಬಳಿ ಗ್ರಾಹಕರನ್ನ ತನ್ನ ಸ್ಕೂಟರಿಗೆ ಹತ್ತಿಸಿಕೊಂಡ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಆಟೋ ಚಾಲಕ ಪುಡಿ ರೌಡಿಯಂತೆ ತನ್ನ ಪುಂಡಾಟಿಕೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.