ಬೆಂಗಳೂರು: ಇಲಿಯ ಜಟಾಪಟಿಯೊಂದು ಇದೀಗ ಠಾಣಾ ಮೆಟ್ಟಿಲೇರಿದೆ. ಇಲಿ ಕಚ್ಚಿದಕ್ಕೆ ವ್ಯಕ್ತಿಯೋರ್ವ ಲಕ್ಷ-ಲಕ್ಷ ಪರಿಹಾರಕ್ಕೆ ಬೇಡಿಕೆಯಿಟ್ಟ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ. ಇಲಿ ವಿಚಾರಕ್ಕೆ ಅಪಾರ್ಟ್ಮೆಂಟ್ ನಿವಾಸಿಗಳು ಜಟಾಪಟಿಗಿಳಿದು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರಿನ ವೈರ್​ಗಳನ್ನು ಇಲಿ ಕಚ್ಚಿದ ಕಾರಣಕ್ಕೆ ವಾಃನ ಮಾಲೀಕ  5 ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟು ರಂಪಾಟ ನಡೆಸಿದ್ದಾನೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: WATCH: ಬೇಬಿಬೆಟ್ಟದಲ್ಲಿರುವ ಮಠಕ್ಕೆ ನುಗ್ಗಿ ಬೇಟೆಯಾಡಿದ ಚಿರತೆ!


ಪರಿಹಾರ ಕೊಡದಿದ್ದಕ್ಕೆ ಅಪಾರ್ಟ್ಮೆಂಟ್ ಅಸೋಸಿಯೇಷನ್‌ ಅಧ್ಯಕ್ಷರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಬೇಸತ್ತ ಅಪಾರ್ಟ್ಮೆಂಟ್‌ ನಿವಾಸಿಗಳು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.


ಗಂಗಾನಗರದ ಕಂಫರ್ಟ್‌ ಎನ್​ಕ್ಲೇವ್‌ ಅಪಾರ್ಟ್ಮೆಂಟ್‌ ಮುಂಭಾಗ ಕಸ ಸುರಿದ ಪರಿಣಾಮ ಕಾರಿನ ವೈರ್​ಅನ್ನು ಇಲಿ ಕಚ್ಚಿದೆ. ಇನೋವಾ ಕಾರಿನ ವೈಯರ್‌ ಅನ್ನು ಇಲಿ ಕಚ್ಚಿ ತುಂಡರಿಸಿತ್ತು. ಇದರಿಂದ ಕಾರ್ ವೈರಿಂಗ್ ಮಾಡಿಸಲು 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾರಿನ ಮಾಲೀಕ ಡಿಮ್ಯಾಂಡ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಅಪಾರ್ಟ್ಮೆಂಟ್ ನಿವಾಸಿಗಳು ಇಲಿ ವಿಚಾರಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.


ಇದನ್ನೂ ಓದಿ: ತೆರಿಗೆ ವಂಚನೆ ಆರೋಪ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ‌ ಮೇಲೆ ಐಟಿ ದಾಳಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.