Bengaluru rowdy sheeter arrest details: ಪೊಲೀಸರು ಬಂಧಿಸಲು ಹೋದಾಗ ಕಳ್ಳರು, ರೌಡಿಗಳು ಎಸ್ಕೇಪ್ ಆಗುವುದಕ್ಕೆ ಬೇರೆ ಬೇರೆ ಪ್ಲಾನ್ ಮಾಡಿಕೊಳ್ಳುತ್ತಾರೆ.  ಕೆಲವು ಬಾರಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗುತ್ತಾರೆ. 


COMMERCIAL BREAK
SCROLL TO CONTINUE READING

ಕೆಲ ಖತರ್ನಾಕ್ ಗಳು ಶೌಚಾಲಯದ ನೆಪದಲ್ಲೂ ಪರಾರಿಯಾಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾರೆ. ಆದರೆ ಇಲ್ಲೊಬ್ಬ ರೌಡಿ ಶೀಟರ್   ಬಂಧಿಸಲು ಹೋದ ಪೊಲೀಸರ ಮೇಲೆ ಮಲ ಎಸೆದು ಎಸ್ಕೇಪ್ ಆಗಿರುವ ಪ್ರಸಂಗ ಬೆಳಕಿಗೆ ಬಂದಿದೆ. ಹೀಗೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ ನಟೋರಿಯಸ್ ರೌಡಿ ಶೀಟರ್ ಸದ್ದಾಮ್ ಅಫ್ಜಲ್ ಎಂಬಾತನನ್ನು ಜಯನಗರ ‌ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ- Tumakuru: ಅಳಿಯ-ಮಗಳ ಜಗಳದಲ್ಲಿ ಹತ್ಯೆಯಾದ ಅತ್ತೆ..!


ಜಯನಗರ ‌ಹಾಗೂ ಕೋಣನಕುಂಟೆ ಠಾಣೆಯ ರೌಡಿ ಶೀಟರ್ ಆಗಿರುವ  ಸದ್ದಾಮ್ ಕೊಲೆ ಯತ್ನ,‌ ರಾಬರಿ , ಕಳ್ಳತನ ಪ್ರಕರಣಗಳಲ್ಲಿ ‌ಮೋಸ್ಟ್ ವಾಂಟೆಡ್‌ ಆಗಿದ್ದ. 2023  ಅಕ್ಟೋಬರ್ ನಲ್ಲಿ‌ ಕೊಲೆ ಯತ್ನ ಪ್ರಕರಣದಲ್ಲಿ ಎ1 ಆರೋಪಿಯಾಗಿ ಅರೆಸ್ಟ್ ಆಗಿ ಜೈಲಿ ಸೇರಿದ್ದ. ನಂತರ ಜಾಮೀನಿನ ಮೇಲೆ‌ ಹೊರಗೆ ಬಂದು ಪೊಲೀಸರ ಸಂಪರ್ಕಕ್ಕೂ ಸಿಗದೆ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.


ಇದನ್ನೂ ಓದಿ- ಕುತ್ತಿಗೆಗೆ ಚಾಕು ಇರಿದು ಮಹಿಳೆಯ ಕೊಲೆ: ಆರೋಪಿ ಪರಾರಿ, ಪೊಲೀಸರಿಂದ ಪ್ರಕರಣ ದಾಖಲು


ಸದ್ದಾಮ್ ಗೆ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಸಹ ಜಾರಿಯಾಗಿತ್ತು. ಕಳೆದ 1 ತಿಂಗಳ ‌ಹಿಂದೆ ಸದ್ದಾಮ್ ‌ನನ್ನು ಅರೆಸ್ಟ್ ‌ಮಾಡಲು ತೆರಳಿದ್ದ‌ ಪೊಲೀಸರ ಮೇಲೆ  ಮಲ ಎಸೆದು ಎಸ್ಕೇಪ್ ಆಗಿದ್ದ. ಹೀಗಾಗಿ ಪೊಲೀಸರಿಗೂ ಈತ ದೊಡ್ಡ ತಲೆನೋವಾಗಿದ್ದ. ಸದ್ಯ ಜಯನಗರ ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.