ಬೆಂಗಳೂರು: ಇದು ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಭೀಕರ ಕೊಲೆ. ರೌಡಿಶೀಟರ್ ಕಪಿಲ್ ನನ್ನ ರಸ್ತೆಯಲ್ಲೇ ಅಟ್ಟಾಡಿಸಿ ಕೊಂದಿದ್ರು. ಲಾಂಗು ಮಚ್ಚುಗಳಿಂದ ಮನಸೋ ಇಚ್ಛೆ ದಾಳಿ ಮಾಡಿ ಕಥೆ ಮುಗಿಸಿದ್ರು. ಅದೇ ಕೊಲೆಯ ಹಂತಕರು ಈಗ ಅಂದರ್ ಆಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯ ಬೆಚ್ಚಿ ಬೀಳುವಂತಿದೆ. 


COMMERCIAL BREAK
SCROLL TO CONTINUE READING

ಆವತ್ತು ರಸ್ತೆಯುದ್ದಕ್ಕೂ ಅಟ್ಟಾಡಿಸಿ ಅಟ್ಟಹಾಸ ಮೆರೆದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 11 ರ ಮಂಗಳವಾರ ಡಿಜೆ ಹಳ್ಳಿಯ ಕೆಹೆಚ್ ಬಿ ರಸ್ತೆಯಲ್ಲಿರುವ ಡಿ ಮಾರ್ಟ್ ಮುಂಭಾಗದ ರಸ್ತೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಟೀ ಕುಡಿಯಲು ಮಡಿವಾಳ ಪೊಲೀಸ್ ಠಾಣೆ ರೌಡಿ ಶೀಟರ್ ಕಪಿಲ್ ಬಂದಿದ್ದ. ಎರಡು ಬೈಕ್ ನಲ್ಲಿ ಬಂದಿದ್ದ 4 ಜನ ಆರೋಪಿಗಳು ಕಪಿಲ್‌ ನನ್ನ ಕೊಚ್ಚಿ ಕೊಲೆ ಮಾಡಿ ನಂತರ ಎಸ್ಕೇಪ್ ಆಗಿದ್ರು. ಪ್ರಕರಣ ದಾಖಲಿಸಿಕೊಂಡ ಡಿಜೆ ಹಳ್ಳಿ ಪೊಲೀಸರು ನವೀನ್,ರಾಹುಲ್,ಪುನೀತ್ ಕುಮಾರ್,ಪವನ್ ಕುಮಾರ್ ಮತ್ತು ಶಂಕರ್ ಸೇರಿ 5 ಜನರನ್ನು ಬಂಧಿಸಿದ್ದಾರೆ.


ಇದನ್ನೂ ಓದಿ- Raichur News: ಅನೈತಿಕ ಸಂಬಂಧ ಶಂಕೆ ಪತಿಯಿಂದ ಪತ್ನಿ‌ ಕೊಲೆ


ಆರೋಪಿಗಳ ವಿಚಾರಣೆ ವೇಳೆ ಭಯಾನಕ‌ ಸಂಗತಿಗಳೇ ಹೊರಬಿದ್ದಿದೆ. ವೈಯಕ್ತಿಕ ದ್ವೇಷದ ಜೊತೆಗೆ ಇದೊಂದು ಸುಪಾರಿ ಕೊಲೆ ಅನ್ನೋದು ಗೊತ್ತಾಗಿದೆ. ಕಪಿಲ್ ಏರಿಯಾದಲ್ಲಿದ್ದ ನವೀನ್ ಮತ್ತು ರಾಹುಲ್ ರಿಗೆ ಅವಮಾನಿಸಿದ್ನಂತೆ. ನವೀನ್ ತಲೆ ಬೋಳಿಸಿದ್ರೆ ರಾಹುಲ್ ಗೆ ಹೊಡೆದಿದ್ನಂತೆ.. ಈ ಕೋಪ ಇಬ್ಬರಲ್ಲಿ ಕೊತ ಕೊತ ಅಂತಾ ಕುದಿತಾ ಇತ್ತು.. ಇವರ ಕೋಪ ಎಂಬ ಬೆಂಕಿಗೆ ತುಪ್ಪ ಸುರಿದಿದ್ದೆ  ಪವನ್ ಮತ್ತು ಶಂಕರ್.  


ಇದನ್ನೂ ಓದಿ- ʼಜೋಡಿ ಕೊಲೆʼ ಮಾಡಿ ಎಸ್ಕೇಪ್ ಆದ ರೀಲ್ಸ್ ಸ್ಟಾರ್ ʼಜೋಕರ್ ಫಿಲಿಕ್ಸ್ʼ ..! ಬಂಧನಕ್ಕೆ ಬಲೆ ಬೀಸಿದ ಖಾಕಿ ಪಡೆ


ಪವನ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ಇದ್ರೆ ಶಂಕರ್ ಕೋರಮಂಗಲ ಬಬ್ಲಿ‌ ಕೇಸ್ ನಲ್ಲಿ ಜೈಲಿನಲ್ಲಿರುವ ಪಲ್ಲ ರವಿ ಶಿಷ್ಯ. ಹಾಗಾಗಿ ಏರಿಯಾದಲ್ಲಿ ಹಿಡಿತ ಸಾಧಿಸಲು ಪಲ್ಲಾ ರವಿ ಜೈಲಿನಲ್ಲೇ ಕುಳಿತು ಸ್ಕೆಚ್ ಹಾಕಿ ಸುಪಾರಿ ನೀಡಿದ್ದಾನೆ ಅನ್ನೋ ಅನುಮಾನ ಇದೆ. ಪವನ್ ಮತ್ತು ಶಂಕರ್ ಅವಮಾನಕ್ಕೊಳಗಾಗಿದ್ದ ಹುಡುಗರನ್ನ ಇಟ್ಟುಕೊಂಡು ಕಪಿಲ್ ಕಥೆ ಮುಗಿಸಿದ್ದಾರೆ‌.


ಇನ್ನೊಂದು ಇಂಟ್ರಸ್ಟಿಂಗ್ ಸಂಗತಿ ಎಂದರೆ ಪಲ್ಲ ರವಿ ಮತ್ತು ಮೃತ ಕಪಿಲ್ ಇಬ್ರು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಶಿಷ್ಯರಾಗಿದ್ದಾರೆ. ಹಾಗಿದ್ರು ಜೊತೆಲಿದ್ದವರ ಕೊಲೆಗೆ ಪಲ್ಲ ರವಿ ಸುಪಾರಿ ನೀಡಿದ್ಯಾಕೆ ಅನ್ನೋ ಅನುಮಾನ ಕೂಡ ಹುಟ್ಟಿಕೊಂಡಿದೆ. ಅದೇ ದಿಕ್ಕಿನಲ್ಲಿ ಡಿಜೆ ಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಜೊತೆಗೆ ಈ ಕೊಲೆ ಹಿಂದೆ ಮತ್ಯಾರ ಕೈವಾಡ ಇದೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.