ಹುಬ್ಬಳ್ಳಿ: ಹಳೆಯ ಚಿನ್ನಾಭರಣ ತೊಳೆದುಕೊಡುವ ನೆಪದಲ್ಲಿ ಇಬ್ಬರು ಅಪರಿಚಿತರು ನಗರದ ಜೋಳದ ಓಣಿಯ ಮಹಿಳೆಯಿಂದ 1.45 ಲಕ್ಷ ರೂ. ಮೌಲ್ಯದ ಆಭರಣ ಪಡೆದು ವಂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಧ್ಯಾಹ್ನ ಮನೆಯ ಹತ್ತಿರ ಬಂದಿದ್ದ ಅಪರಿಚಿತರು ಹಳೆಯ ಬಂಗಾರವನ್ನು ತೊಳೆದುಕೊಡುವ ನೆಪದಲ್ಲಿ 40 ಗ್ರಾಂ ಮಂಗಳಸೂತ್ರ, 10 ಗ್ರಾಂ ಚಿನ್ನದ ಸರ ಪಡೆದಿದ್ದಾರೆ. ಮೊದಲು ತಾಮ್ರದ ಚೊಂಬು, ಕಾಲು ಚೈನ್ ತೊಳೆದುಕೊಟ್ಟು ನಂಬಿಕೆ ಬರುವಂತೆ ಮಾಡಿದ್ದಾರೆ.


ಇದನ್ನೂ ಓದಿ: ಕಾವೇರಿ ಕಿಚ್ಚು: ಚಾಮರಾಜನಗರದಲ್ಲಿ ಪೊರಕೆ ಚಳವಳಿ ನಡೆಸಿ ಆಕ್ರೋಶ


ನಂತರ 45 ಗ್ರಾಂ ಆಭರಣವನ್ನು ಪಡೆದು ಕುಕ್ಕರ್​ನಲ್ಲಿ ಹಾಕಿ ಕುದಿಸಲು ಹೇಳಿದ್ದಾರೆ. ಬಂಗಾರ ಕಪ್ಪಾಗಿದ್ದರಿಂದ ಅದಕ್ಕೆ ಅರಿಶಿಣ ಪುಡಿ ಮತ್ತು ಬಿಳಿ ಪೌಡರ್ ಕೊಟ್ಟು ಕುದಿಸಿ ಎಂದು ಹೇಳಿ ಆಭರಣದೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಳೆಯ ಚಿನ್ನಾಭರಣ ತೊಳೆದುಕೊಡುವ ನೆಪದಲ್ಲಿ ಅಪರಿಚಿತರು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಸಂತೋಷ ಕೂಟದ ದಾಳಕ್ಕೆ ಲಿಂಗಾಯತ ನಾಯಕರು ಅಬ್ಬೇಪಾರಿಗಳಂತಾಗಿದ್ದಾರೆ: ಕಾಂಗ್ರೆಸ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.