ಬೆಂಗಳೂರು : ಅದೊಂದು ರಿವೇಂಜ್ ಟೀಂ. ಅವನನ್ನ ಎತ್ತಬೇಕು ಅಂತ ಇವನು. ಇವನನ್ನ ಎತ್ತಬೇಕು ಅಂತ ಅವನು. ಈ ರೀತಿ ರಿವೇಂಜ್‌ಗೆ ಬಿದ್ದಿದ್ದ ಕುಖ್ಯಾತ ಗ್ಯಾಂಗ್. ಹೀಗಿರುವಾಗಲೇ ಅಂದು ಜೈಲಿನಿಂದ ಹುಡುಗರ ಜೊತೆ ರಿಲೀಸ್ ಆಗಿದ್ದವನು ಜೈಲಿನ ಬಳಿಯೇ ಹತ್ಯೆ ಆಗಿದ್ದ. ಇಂದು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಕೋರ್ಟ್ ಮುಂದೆ ಸೆರೆಂಡರ್ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಪರಪ್ಪನ ಅಗ್ರಹಾರ ಜೈಲಿನ ಬಳಿ ನಡೆದಿದ್ದ ರೌಡಿ ಶೀಟರ್ ಮಹೇಶ್ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಕೋರ್ಟ್‌ ಮುಂದೆ ಶರಣಾಗಿದ್ದಾರೆ. ಕಳೆದ 15 ದಿನಗಳಿಂದ ತಲೆಮರೆಸಿಕೊಂಡಿದ್ದ ವಿಲ್ಸನ್ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನ್ 9ನೇ ಎಸಿಎಂಎಂ ಮುಂದೆ ಸರೆಂಡರ್ ಆಗಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ 17 ಮಂದಿ ಆರೋಪಿಗಳು ಅಂದರ್ ಆಗಿದ್ದು, ಈಗ ಪ್ರಮುಖ ಇಬ್ಬರು ಆರೋಪಿಗಳು ಕೂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಸಿಕ್ಕಿದ್ದು, ತನಿಖೆಗೆ ಚುರುಕು ಬರಲಿದೆ.


ಇದನ್ನೂ ಓದಿ: ನಮ್ಮ ಹೆಸರಲ್ಲಿ ನೈಸ್ ಆಸ್ತಿ ಇದ್ದರೆ ಇಡೀ ಕುಟುಂಬವೇ ರಾಜಕೀಯ ನಿವೃತ್ತಿ: ಎಚ್.ಡಿ.ಕುಮಾರಸ್ವಾಮಿ


ಕೋರ್ಟ್ ಮುಂದೆ ಶರಣಾಗಿದ್ದ ನಾಗ ಮತ್ತು ಮೋಹನ್‌ ಅನ್ನು ಮೊದಲಿಗೆ 10 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆದರೆ ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಪೊಲೀಸರು, ಕೊಲೆ ಕೇಸ್ ಸಂಬಂಧ ಆರೋಪಿಗಳ ವಿಚಾರಣೆ ಅಗತ್ಯವಿದ್ದು ತಮ್ಮ ಕಸ್ಟಡಿಗೆ ನೀಡಬೇಕೆಂದು ಕೋರ್ಟ್ ನಲ್ಲಿ ಮನವಿ ಮಾಡಿದ್ರು. ಈ ಮನವಿಯನ್ನ ಪುರಸ್ಕರಿಸಿದ ನ್ಯಾಯಾಧೀಶರು ನಾಗ ಮತ್ತು ಮೋಹನ್‌ ಅನ್ನು 7 ದಿನ ಪರಪ್ಪನ ಅಗ್ರಹಾರ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. 


ಇನ್ನು ಆರೋಪಿಗಳು ಕೋರ್ಟ್‌ಗೆ ಸೆರೆಂಡೆರ್ ಆಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ರು. ಇಬ್ಬರು ಎಸಿಪಿಗಳು ಸೇರಿದಂತೆ ಅಕ್ಕಪಕ್ಕದ ಠಾಣೆಯ ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿಗಳು ಭದ್ರತೆ ಒದಗಿಸಿದ್ರು. ಕೊನೆಗೆ ಕೋರ್ಟ್ ಆದೇಶದ ಬಳಿಕ ಇಬ್ಬರು ಆರೋಪಿಗಳನ್ನ ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಗೆ ಕರೆದೊಯ್ದರು. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಕೊಲೆ ಕೇಸ್ ಸಂಬಂಧದ ತನಿಖೆಯನ್ನ ಮತ್ತಷ್ಟು ತೀವ್ರಗೊಳಿಸಲಿದ್ದಾರೆ. 


ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಯಾವ ಕಾಲಕ್ಕೂ ಸಿಎಂ ಆಗಲ್ಲ : ಯತ್ನಾಳ್‌ ಭವಿಷ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.