ಮಗನ ಮುಂದೆಯೇ ತಾಯಿಯ ಖಾಸಗಿ ಅಂಗಗಳಿಗೆ ಖಾರದಪುಡಿ ಎರಚಿ ಹಿಂಸಿಸಿದ ಪಾಪಿಗಳು
crime in Bengaluru: ಪೊಲೀಸರು ಎಂದು ನಂಬಲಿ ಅಂತಾ ಆರೋಪಿ ಸೌಮ್ಯಳನ್ನ ಪಿಎಸ್ಐ ಎಂದು ತೋರಿಸಿ 20 ವರ್ಷದ ಯುವಕನ್ನ ಕಿಡ್ನಾಪ್ ಮಾಡಿದ್ದಾರೆ.
ಬೆಂಗಳೂರು: ನಿನ್ನೆ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಸದ್ಯ ಪೊಲೀಸರ ತನಿಖೆ ವೇಳೆ ಕ್ರೂರಿಗಳ ಕರಾಳ ಮುಖ ರೀವಿಲ್ ಆಗಿದೆ. ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕಣದ ಕ್ರೂರತೆ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಪ್ರಕರಣದ ಆರೋಪಿಗಳಾದ ರೌಡಿ ಶೀಟರ್ ಜೊಸೆಫ್, ಪಾಗಲ್ ಸೀನ ತಮಗೆ ಪರಿಚಯವಿದ್ದ ಚೈನ್ ಸ್ನಾಚ್ ಮಾಡ್ತಿದ್ದ 20 ವರ್ಷದ ಯುವಕನ ಪೊಲೀಸರ ರೀತಿ ಲಾಕ್ ಮಾಡಿದ್ದಾರೆ.
ಪೊಲೀಸರು ಎಂದು ನಂಬಲಿ ಅಂತಾ ಆರೋಪಿ ಸೌಮ್ಯಳನ್ನ ಪಿಎಸ್ಐ ಎಂದು ತೋರಿಸಿ 20 ವರ್ಷದ ಯುವಕನ್ನ ಕಿಡ್ನಾಪ್ ಮಾಡಿದ್ದಾರೆ. ನಾಯಂಡಹಳ್ಳಿ ಜಟಕ ಸ್ಟ್ಯಾಂಡ್ ಬಳಿ ಇರುವ ಮನೆಯಲ್ಲಿ ಕೂಡಿ ಹಾಕಿ ಕದ್ದಿರುವ ಹಣ ಚಿನ್ನಾಭರಣ ಕೊಡು ಎಂದು ಹಿಂಸೆ ಮಾಡಿದ್ದಾರೆ.
ಪೊಲೀಸರು ಕೆಲವರಿಗೆ ನೀಡುವ ಥರ್ಡ್ ಡಿಗ್ರಿ ಟ್ರಿಟ್ಮೆಂಟ್ ಗಿಂತ ಕ್ರೂರವಾಗಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಟಾರ್ಚರ್ ತಾಳಲಾರದೆ ಮನೆಯಲ್ಲಿ ಚಿನ್ನ ಇಟ್ಟಿರೋದಾಗಿ ಯುವಕ ಸುಳ್ಳು ಹೇಳಿದ್ದಾನೆ. ನಂತರ ಆರೋಪಿಗಳು ಆತನ ಮನೆಗೆ ಹೋಗಿ ನೋಡಿ ಚಿನ್ನ ಇಲ್ಲಾ ಎಂದು ಮತ್ತೆ ಟಾರ್ಚರ್ ಮಾಡಿದ್ದಾರೆ. ಈ ವೇಳೆ ಆ ಯುವಕ ನಮ್ಮ ಅಮ್ಮ ಎತ್ತಿ ಇಟ್ಟಿರ್ಬೇಕು ಅಂತ ಮತ್ತೊಂದು ಸುಳ್ಳು ಹೇಳಿದ್ದಾನೆ.
ಇದನ್ನೂ ಓದಿ: ಅಡುಗೆ ಭಟ್ಟನಿಂದ ಹಿಡಿದು ಕಾರು ಡ್ರೈವರ್ ವರೆಗೆ ಅಂಬಾನಿ ಮನೆ ಕೆಲಸದವರು ಪಡೆಯುವ ವೇತನ ಮತ್ತು ಸೌಕರ್ಯ ಹೀಗಿದೆ !
ಇದರಿಂದ ರೊಚ್ಚಿಗೆದ್ದ ರೌಡಿ ಟೀಮ್ ಸೀದಾ ಆ ಯುವಕನ ಮೆನೆಗೆ ಹೋಗಿ ಆತನ ತಾಯಿಯನ್ನ ಅಪಹರಿಸಿದ್ದಾರೆ. ಈ ವೇಳೆ ನಕಲಿ ಪಿಎಸ್ಐ ಸೌಮ್ಯ ಅಂಡ್ ಟೀಮ್ ಆ ಯುವಕ ತಾಯಿಗೆ ಚಿನ್ನ ಕೊಡುವಂತೆ ಟಾರ್ಚರ್ ಶುರು ಮಾಡಿದ್ದಾರೆ.
ಆದರೆ ಮಹಿಳೆ ಯಾವ ಚಿನ್ನ ಗೊತ್ತಿಲ್ಲ, ನಮ್ಮನ್ನ ಬಿಟ್ಟುಬಿಡಿ ಎಂದು ಕೇಳಿಕೊಂಡರು ಸಹ ಜೋಸೆಫ್, ಪಾಗಲ್ ಸೀನಾ ಅಂಡ್ ಟೀಮ್ ಆ ತಾಯಿಯ ಬಾಯಿ ಕಟ್ಟಿ ಮಗನ ಮುಂದೆಯೆ ತಾಯಿ ಗುದದ್ವಾರ ಹಾಗೂ ಖಾಸಗಿ ಅಂಗಕ್ಕೆ ಖಾರದಪುಡಿ ಎರಚಿ ಚಿತ್ರಹಿಂಸೆ ನೀಡಿದ್ದಾರೆ.
ಇನ್ನೂ ಇದಕ್ಕೂ ಮೊದಲು ಆ ತಾಯಿ ಚಂದ್ರಾಲೇಔಟ್ ನಲ್ಲಿ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಳು. ಈ ವಿಚಾರ ಗೊತ್ತಾಗಿ ಸೌಮ್ಯಳೆ ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಸರ್ ಒಬ್ಬ ಚೈನ್ ಸ್ನಾಚರ್ ಇದ್ದಾನೆ ಎಂದು ಮಾಹಿತಿ ನೀಡಿದ್ದಾಳೆ. ಈ ವೇಳೆ ಚಂದ್ರಾಲೇಔಟ್ ಪೊಲೀಸರಿಗೆ ಈ ಮಾಹಿತಿ ಗೊತ್ತಾಗಿ ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರನ್ನು ವಜಾಗೊಳಿಸಬೇಕು: ಎಚ್.ಸಿ.ಮಹದೇವಪ್ಪ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.