ಆಸ್ತಿಗಾಗಿ ಹಾಲಿಗೆ ವಿಷ ಹಾಕಿ 5 ತಿಂಗಳ ಮಗುವನ್ನು ಕೊಂದ ಮಲತಾಯಿ..!
ಐದು ತಿಂಗಳ ಹಿಂದೆ ಶ್ರೀದೇವಿಗೆ ಹೆಣ್ಣು ಮಗು ಜನಿಸಿತ್ತು. ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದರು, ಹಾಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಮಗಳಿಗೆ ಪಾಲು ಹೋಗುತ್ತೇ ಅಂತಾ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಯಾದಗಿರಿ : ಆಸ್ತಿಗಾಗಿ ಹಾಲಿಗೆ ವಿಷ ಹಾಕಿ ಮಲತಾಯಿಯೊಬ್ಬಳು ಐದು ತಿಂಗಳ ಹಸುಗೂಸನ್ನ ಕೊಂದಿರುವ ದಾರುಣ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ. ಮಲತಾಯಿ ಕ್ರೂರ ಕೃತ್ಯಕ್ಕೆ ಸಂಗೀತಾ ಚೆಟ್ಟಿಗೇರಿ ಎಂಬ ಹಸುಗೂಸು ಸಾವನ್ನಪ್ಪಿದೆ. ದೇವಮ್ಮ ಚೆಟ್ಟಿಗೇರಿ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ ಮಲತಾಯಿ ಎಂದು ತಿಳಿದು ಬಂದಿದೆ.
ಮೃತ ಮಗುವಿನ ತಾಯಿ ಶ್ರೀದೇವಿ ಹಾಲು ಕೂಡಿಸುತ್ತಿದ್ದಾಗ ಒತ್ತಾಯ ಪೂರ್ವಕವಾಗಿ ಹಾಲುಣಿಸುತ್ತೇನೆ ಅಂತಾ ದೇವಮ್ಮ ಮಗುವನ್ನ ಕರೆದೊಯ್ದಿದ್ದಳು. ಮನೆಯ ಕೊಠಡಿಗೆ ತೆರಳಿ ಬಾಗಿಲು ಮುಚ್ಚಿ ಬಾಟಲ್ ಹಾಲಿಗೆ ವಿಷ ಬೆರೆಸಿ ಕೂಸಿಗೆ ಕೂಡಿಸಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಮಗನಿಗೆ ಗನ್ ಮ್ಯಾನ್ ಆಗಿದ್ದ ವ್ಯಕ್ತಿಯಿಂದ ಫೈರಿಂಗ್
ವಿಷಬೆರೆತ ಹಾಲು ಕುಡಿದ ಮೂರು ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ. ಆಗಷ್ಟ್ 30ರಂದು ಬಬಲಾದ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ವಡಗೇರಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ : ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ ಎರಡು ಮದುವೆಯಾಗಿದ್ದ. 11 ವರ್ಷಗಳ ಹಿಂದೆ ಮೊದಲು ಶ್ರೀದೇವಿ ಕೈ ಹಿಡಿದಿದ್ದ ಸಿದ್ದಪ್ಪ ಮಕ್ಕಳಾಗದ ಹಿನ್ನೆಲೆ ಕಳೆದ 7 ವರ್ಷದ ಹಿಂದೆ ದೇವಮ್ಮನನ್ನು ಮದುವೆಯಾಗಿದ್ದ. ಇದರಿಂದಾಗಿ ಶ್ರೀದೇವಿ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆ ಸೇರಿದ್ದಳು.
ಇದನ್ನೂ ಓದಿ:ಬಿಡದಿ ನಿತ್ಯಾನಂದ ಸ್ಬಾಮಿ ವಿರುದ್ಧ ಪ್ರಕರಣದ ಕುರಿತಂತೆ ರಾಜ್ಯ ಪೊಲೀಸರಿಗೆ ಸ್ಟಷ್ಟನೆ ಕೇಳಿದ ಇಂಟರ್ ಪೊಲ್
ಹಿರಿಯರ ರಾಜಿ ಸಂಧಾನದ ನಂತರ ಕಳೆದ ಮೂರು ವರ್ಷಗಳ ಹಿಂದೆ ಗಂಡನ ಮನೆಗೆ ಬಂದಿದ್ದಳು. ನಂತರ ಐದು ತಿಂಗಳ ಹಿಂದೆ ಶ್ರೀದೇವಿಗೆ ಹೆಣ್ಣು ಮಗು ಜನಿಸಿತ್ತು. ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದರು, ಹಾಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಮಗಳಿಗೆ ಪಾಲು ಹೋಗುತ್ತೇ ಅಂತಾ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.