ಮನೆಯಲ್ಲಿ ಕಂಡುಬಂದ 1 ಲಕ್ಷ ಜಿರಳೆಗಳು, ಮಹಿಳೆ ಅರೆಸ್ಟ್, ಇಲ್ಲಿದೆ ಒಂದು ಡಿಫರೆಂಟ್ ಕ್ರೈಮ್ ಕಥೆ!
Strange Crime News: ಮಹಿಳೆಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಪ್ರಾಣಿಗಳ ಮೇಲಿನ ಪ್ರೀತಿಗಾಗಿ, ಅವರು ನಿಧಾನವಾಗಿ ತಮ್ಮ ಮನೆಯಲ್ಲಿ ಪ್ರಾಣಿಗಳನ್ನು ಸಾಕಲು ಆರಂಭಿಸಿದಳು. ಬಳಿಕ ಆಕೆಗೆ ತನ್ನ ಮನೆಯಲ್ಲಿ ಎಷ್ಟು ಪ್ರಾಣಿಗಳಿವೆ ಎಂಬ ಲೆಕ್ಕವೇ ಮರೆತುಹೋಯ್ತು.
Crime News: ವಿಚಿತ್ರವಾದ ಅಪರಾಧಕ್ಕಾಗಿ ಮಹಿಳೆಯೋರ್ವಳನ್ನು ಇತ್ತೀಚೆಗಷ್ಟೇ ಬಂಧಿಸಲಾಗಿದೆ. ಪ್ರಾಣಿಗಳನ್ನು ಹಿಂಸಿಸುತ್ತಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಆದರೆ, ಮಹಿಳೆಯ ಬಂಧನದ ನಂತರ, ಆಕೆಯ ಸ್ನೇಹಿತರು ಆಕೆ ಪ್ರಾಣಿ ಪ್ರೇಮಿ ಎಂದು ಸಮರ್ಥಿಸಿಕೊಂಡಿದ್ದಾರೆ, ಅಷ್ಟೇ ಅಲ್ಲ ಅವಳು ಅವುಗಳನ್ನು ಸಾಕಿದ್ದಾಳೆ, ಅವಳು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಆಗಲೂ ಪೊಲೀಸರು ಒಪ್ಪದ ಕಾರಣ ನಾಟಕೀಯವಾಗಿ ವಿಷಯ ಬಯಲಿಗೆ ಬಂದಿದೆ. ಮಹಿಳೆ ತನ್ನ ಮನೆಯಲ್ಲಿ ಒಂದು ಲಕ್ಷ ಜಿರಳೆ ಮತ್ತು ಮುನ್ನೂರಕ್ಕೂ ಹೆಚ್ಚು ಪ್ರಾಣಿಗಳನ್ನು ಸಾಕಿದ್ದಳು.
ಮಾಧ್ಯಮ ವರದಿಗಳ ಪ್ರಕಾರ, ಈ ವಿಷಯವು ಸ್ವಲ್ಪ ಹಳೆಯದಾಗಿದೆ ಮತ್ತು ಈ ಮಹಿಳೆ ಅಮೆರಿಕದ ನಗರದ ನಿವಾಸಿಯಾಗಿದ್ದಾಳೆ. ಮಹಿಳೆಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಪ್ರಾಣಿಗಳ ಮೇಲಿನ ಪ್ರೀತಿಗಾಗಿ ಆಕೆಯನ್ನು ಸ್ನೇಹಿತರು 'ಸ್ನೋ ವೈಟ್' ಎಂದು ಕರೆಯುತ್ತಿದ್ದರು. ಅವಳು ನಂತರ ತನ್ನ ಮನೆಯಲ್ಲಿ ಪ್ರಾಣಿಗಳನ್ನು ಸಾಕಲು ಆರಂಭಿಸಿದಳು. ಆದರೆ ನಂತರ ಆಕೆಗೆ ತನ್ನ ಮನೆಯಲ್ಲಿ ಎಷ್ಟು ಪ್ರಾಣಿಗಳಾದವು ಎಂಬುದರ ಅಂದಾಜು ಮರೆತು ಹೋಗಿದೆ. ಅಷ್ಟೊತ್ತಿಗಾಗಲೇ ಆಕೆಯ ಮನೆಯಲ್ಲಿ ಸುಮಾರು ಒಂದು ಲಕ್ಷ ಜಿರಳೆಗಳಿದ್ದವು.
ಇದನ್ನೂ ಓದಿ-ಇಲ್ಲಿ ಹೆಣ ಬಲವಂತವಾಗಿ ಹಣ ಕೇಳುತ್ತೇ, ಕೊಡದೆ ಹೋದ್ರೆ...!
ಆದರೆ, ಮಹಿಳೆ ಇದೆಲ್ಲವನ್ನು ಒಂದೇ ದಿನದಲ್ಲಿ ಮಾಡಿಲ್ಲ. ಇದಕ್ಕಾಗಿ ಆಕೆ ಹಲವಾರು ತಿಂಗಳುಗಳ ಕಾಲ ಶ್ರಮಿಸಿದ್ದಾಳೆ. ಮಹಿಳೆ ತನ್ನನ್ನು ತಾನು ಸಾಮಾಜಿಕ ಕಾರ್ಯಕರ್ತೆ ಎಂದು ಕರೆದುಕೊಳ್ಳುತ್ತಿದ್ದಳು ಮತ್ತು ಇನ್ನೂ ಕೆಲವು ಜನರು ಸಹ ಆಕೆಯ ಮನೆಯಲ್ಲಿ ಅವಲಂಬಿತರಾಗಿ ವಾಸಿಸುತ್ತಿದ್ದಾರೆ. ಆದರೆ ಕ್ರಮೇಣ, ಮಹಿಳೆಯ ಮನೆಯಲ್ಲಿ ತುಂಬಾ ಅವ್ಯವಸ್ಥೆ ಹರಡಿತು, ಅವಳ ಮನೆಯಿಂದ ದುರ್ವಾಸನೆ ಬರಲಾರಂಭಿಸಿತು. ಅಷ್ಟರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಯಾರೋ ಪೊಲೀಸರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಪೊಲೀಸ್ ತಂಡ ತನಿಖೆ ಆರಂಭಿಸಿದಾಗ ಎಲ್ಲರೂ ದಿಗ್ಭ್ರಮೆಗೊಂಡರು. ಮಹಿಳೆಯ ಮನೆಯಲ್ಲಿ 118 ಮೊಲಗಳು, 150 ಪಕ್ಷಿಗಳು, ಏಳು ಆಮೆಗಳು, ಮೂರು ಹಾವುಗಳು ಮತ್ತು 15 ಬೆಕ್ಕುಗಳೊಂದಿಗೆ ಒಂದು ಲಕ್ಷಕ್ಕೂ ಹೆಚ್ಚು ಜಿರಳೆಗಳು ಪತ್ತೆಯಾಗಿವೆ.
ಇದನ್ನೂ ಓದಿ-ವಿಜ್ಞಾನಿಗಳಿಗೂ ಭೇಧಿಸಲು ಸಾಧ್ಯವಾಗಿಲ್ಲ ಈ ಶಿವಾಲಯದ ರಹಸ್ಯ!
ಮಹಿಳೆಯ ಮನೆಯಲ್ಲಿ ಗಾಳಿ ತುಂಬಾ ಹಾನಿಕಾರಕವಾಗಿದ್ದು, ಯಾರೂ ಒಳಗೆ ಹೆಚ್ಚು ಕಾಲ ಇರುವಂತಿರಲಿಲ್ಲ ಎಂದು ಆರೋಪಿಸಲಾಗಿದೆ. ಮಹಿಳೆಯನ್ನು ನಂತರ ಬಂಧಿಸಲಾಯಿತು. ಪ್ರಾಣಿಗಳಿಗೆ ಸಾಕಷ್ಟು ಚಿತ್ರಹಿಂಸೆ ನೀಡಿದ ಆರೋಪ ಆಕೆಯ ಮೇಲಿದೆ. ಆದರೆ, ಮಹಿಳೆಯ ಬಂಧನದ ನಂತರ, ಆಕೆಯ ಸ್ನೇಹಿತರು ಆಕೆ ಪ್ರಾಣಿ ಪ್ರೇಮಿ ಎಂದು ಸಮರ್ಥಿಸಿಕೊಂಡಿದ್ದಾರೆ, ಆದ್ದರಿಂದ ಅವಳು ಅವುಗಳನ್ನು ಸಾಕಿತ್ತಾಳೆ ಮತ್ತು ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ. ಆದರೆ, ಈ ಬಗ್ಗೆ ಪೊಲೀಸರು ಮಾತ್ರ ತನಿಖೆ ಆರಂಭಿಸಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.