ಬೆಂಗಳೂರು: ಪತ್ನಿ‌ ಶೀಲ ಶಂಕಿಸಿ ಪಾಪಿ ಪತಿಯೊಬ್ಬ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಗರದ ಕದಿರೇನಹಳ್ಳಿಯಲ್ಲಿ ನಡೆದಿದೆ. ಶ್ರೀನಿವಾಸ್ ಎಂಬಾತ ಪತ್ನಿ ಪುಷ್ಪಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.   ಕಳೆದ 16ನೇ ತಾರೀಖು ನಡೆದಿರುವ   ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶ್ರೀನಿವಾಸ್ ಮತ್ತು ಪುಷ್ಪಮ್ಮ 18 ವರ್ಷದ ಹಿಂದೆ ಮದುವೆಯಾಗಿದ್ದರು.


COMMERCIAL BREAK
SCROLL TO CONTINUE READING

ಶ್ರೀನಿವಾಸ್ ಪ್ಲಂಬರ್ ಕೆಲಸ ಮಾಡಿಕೊಂಡಿದ್ದ. ಪತ್ನಿಯ ಶೀಲ ಶಂಕಿಸಿ ಶ್ರೀನಿವಾಸ್ ಪದೇ ಪದೇ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಹಿರಿಯರು ಅನೇಕ ಬಾರಿ ರಾಜಿ ಪಂಚಾಯಿತಿ ಮಾಡಿ ಸಂದಾನ ಮಾಡಿದ್ದರು. 


ಇದನ್ನೂ ಓದಿ- R.R.ನಗರದ ಫ್ಲಾಟ್ ಮೇಲೆ ದಾಳಿ ಮಾಡಿದ್ದ ಸಿಸಿಬಿ


ಯಾರ ಮಾತಿಗೂ ಕಿವಿಗೊಡದ ಪಾಪಿ ಶ್ರೀನಿವಾಸ ಮತ್ತೆ ಪತ್ನಿ ಮೇಲೆ ಅನುಮಾನಗೊಂಡು ಜಗಳ ತೆಗೆದಿದ್ದ. ಇದೇ 16ರಂದು ಕುಡಿದ ಮತ್ತಲ್ಲಿ ಮನೆಗೆ ಬಂದ ಶ್ರೀನಿವಾಸ್ ಜಗಳ ತೆಗೆದು ಹೆಂಡತಿ ಪುಷ್ಪಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ ಗಾಬರಿಯಿಂದ ನೀರು ಸುರಿದಿದ್ದಾನೆ.


ಇದನ್ನೂ ಓದಿ- ಸತ್ತೇ ಹೋಗಿದ್ದಾನೆ ಎಂದು ಬಿಂಬಿಸಿ ತಲೆಮರೆಸಿಕೊಂಡಿದ್ದ ರೌಡಿ ಅರೆಸ್ಟ್..!


ಸದ್ಯ ಪುಷ್ಪಮ್ಮಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಮುಂದುವರಿದಿದೆ. ಇತ್ತ ಬನಶಂಕರರಿ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.