ತಹಶೀಲ್ದಾರ್ ಅಜಿತ್ ರೈ ಟೀಂಗೆ ಇತ್ತಂತೆ ʼರೈ ಸರ್ಕಾರ್ʼ ಎಂಬ ಹೆಸರು..!
ರೈ ಸರ್ಕಾರ್ ಎಂಬ ಹೆಸರಿಟ್ಟುಕೊಂಡು ಭೂ ಮಾರಾಟಕ್ಕೆ ಹಾಗೂ ಖರೀದಿಗೆ ಎಂಟ್ರಿ ಕೊಡುತ್ತಿತಂತೆ ಈ ತಂಡ. ಟೀಂನ ಸದಸ್ಯರು ಭೂ ಮಾಲೀಕರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದರಂತೆ.
ಬೆಂಗಳೂರು : ಲೋಕಾಯುಕ್ತ ದಾಳಿಯಲ್ಲಿ ಅರೆಸ್ಟ್ ಆಗಿರುವ ತಹಶೀಲ್ದಾರ್ ಅಜಿತ್ ರೈ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸ್ಪೋಟಕ ಮಾಹಿತಿಗಳು ದೊರೆಯುತ್ತಿವೆ. ಅಜಿತ್ ರೈ ಮತ್ತು ಆತನ ಸ್ನೇಹಿತರ ಟೀಂ ಹೆಸರೊಂದು ಇತ್ತು ಎಂಬ ಅಂಶ ಬಯಲಾಗಿದೆ.
ರೈ ಸರ್ಕಾರ್ ಎಂಬ ಹೆಸರಿಟ್ಟುಕೊಂಡು ಭೂ ಮಾರಾಟಕ್ಕೆ ಹಾಗೂ ಖರೀದಿಗೆ ಎಂಟ್ರಿ ಕೊಡುತ್ತಿತಂತೆ ಈ ತಂಡ. ಟೀಂನ ಸದಸ್ಯರು ಭೂ ಮಾಲೀಕರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದರಂತೆ. ಮತ್ತೊಂದು ಕಡೆ ಲೋಕಾ ಅಧಿಕಾರಿಗಳ ಪ್ರಶ್ನೆಗೆ ಅಜಿತ್ ರೈ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಅಜಿತ್ ರೈ ಹೆಸರಲ್ಲಿರುವ ಬ್ಯಾಂಕ್ ಅಕೌಂಟ್ ಗಳ ಬಗ್ಗೆ ಮಾಹಿತಿ ಕೋರಿ ಬ್ಯಾಂಕ್ ಗಳಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: 300 ಕೋಟಿ ರೂ. ದಾಟಿದ ಮಹಿಳಾ ‘ಶಕ್ತಿ’ ಪ್ರದರ್ಶನ!
ಅಜಿತ್ ರೈ ಹೆಸರಲ್ಲಿ ಹೆಚ್ಡಿಎಫ್ ಸಿ ಬ್ಯಾಂಕ್ ನಲ್ಲಿ ಲಾಕರ್ ಪತ್ತೆಯಾಗಿದೆ. ಮತ್ತೊಂದು ಕಡೆ ವಶಕ್ಕೆ ಪಡೆದಿರುವ ಮೂರು ಮೊಬೈಲ್ ಹಾಗೂ ಎರಡು ಲ್ಯಾಪ್ ಟಾಪ್ ಗಳನ್ನ ಮಿರರ್ ಇಮೇಜ್ ಕಾಪಿಯೊಂದಿಗೆ ಎಫ್ಎಸ್ಎಲ್ ಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಕೋರ್ಟ್ ಅನುಮತಿಯನ್ನು ಅಧಿಕಾರಿಗಳು ಪಡೆಕೊಂಡಿದ್ದಾರೆ.
ಆದರೆ ಅಜಿತ್ ರೈ ಮೊಬೈಲ್ನಲ್ಲಿ ದಾಖಲೆಗಳು, ವ್ಯವಹಾರದ ಸೀಕ್ರೆಟ್ ಇಟ್ಟುಕೊಂಡಿಲ್ಲ. ಹೀಗಾಗಿ ತಾಂತ್ರಿಕ ತನಿಖೆಗೆ ಲೋಕಾಯುಕ್ತ ಅಧಿಕಾರಿಗಳು ಇಳಿದಿದ್ದು, ಮೊಬೈಲ್ ಹಾಗೂ ಲ್ಯಾಪ್ಟಾಪ್ ನಲ್ಲಿರುವ ಮಾಹಿತಿಗಳು ದೊರೆತರೆ ಮತ್ತಷ್ಟು ಭ್ರಷ್ಟಾಚಾರದ ದಾಖಲೆಗಳು ಹೊರಬರಲಿವೆ ಎನ್ನಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.