Drink And Drive Case: ಬೆಂಗಳೂರಿನಲ್ಲಿ ಡ್ರಿಂಕ್ ಅಂಡ್ ಡ್ರೈವ್‌ಗೆ ಮತ್ತೊಂದು ಬಲಿಯಾಗಿದ್ದು, ಐಷಾರಾಮಿ ಬೆನ್ಜ್ ಕಾರು ಡಿಕ್ಕಿಯಾಗಿ 30 ವರ್ಷದ ಟೆಕ್ಕಿ ಸಂಧ್ಯಾ ದುರಂತ ಸಾವಿಗೀಡಾಗಿದ್ದಾರೆ. ಕೆಂಗೇರಿ ಬಸ್ ನಿಲ್ದಾಣದ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಿಲಿಕಾನ್ ಸಿಟಿ ಜನರನ್ನ ಬೆಚ್ಚಿ ಬೀಳಿಸಿದೆ. ಯಾವುದೇ ತಪ್ಪು ಮಾಡದ ಸಾಫ್ಟ್‌ವೇರ್ ಇಂಜಿನಿಯರ್ ಸಂಧ್ಯಾ ಅವರ ಮೇಲೆ ಕಂಠಪೂರ್ತಿ ಕುಡಿದು ಅತಿವೇಗದಲ್ಲಿ ಕಾರು ಚಲಾಯಿಸಿ ಅಟ್ಟಹಾಸ ಮೆರೆಯಲಾಗಿದೆ. ಬೆನ್ಜ್‌ ಕಾರು ಗುದ್ದಿದ ರಭಸಕ್ಕೆ ಸಂಧ್ಯಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಭಾನುವಾರ ಸಂಜೆ 6.45ಕ್ಕೆ ಆರೋಪಿ ಧನುಷ್ ಹಾಗೂ ಆತನ ಗೆಳೆಯರು ಪಾರ್ಟಿ ಮುಗಿಸಿಕೊಂಡು ರೋಡ್‌ನಲ್ಲಿ ಅತಿವೇಗದಲ್ಲಿ ಕಾರು ಡ್ರೈವಿಂಗ್ ಮಾಡುತ್ತಿದ್ದಾರೆ. ಕೆಂಗೇರಿ ಬಸ್ ನಿಲ್ದಾಣದ ಬಳಿ ಟೆಕ್ಕಿ ಸಂಧ್ಯಾ ಅವರು ರಸ್ತೆ ಕ್ರಾಸ್ ಮಾಡುತ್ತಿದ್ದರು. ಈ ವೇಳೆ ಸ್ಪೀಡಾಗಿ ಬರುತ್ತಿದ್ದ ಬೆನ್ಜ್‌ ಕಾರು ಟೆಕ್ಕಿ ಸಂಧ್ಯಾಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಮೇಲೆ ಹಾರಿದ ಸಂಧ್ಯಾ ಅವರ ದೇಹವೇ ನುಜ್ಜುಗುಜ್ಜಾಗಿದೆ.  ಸಂಧ್ಯಾ ಅವರು ತಮ್ಮ ಕೆಲಸವನ್ನ ಮುಗಿಸಿ ಮನೆಗೆ ಹೊರಟಿದ್ದ ವೇಳೆ ಕೆಂಗೇರಿ ಬಸ್ ನಿಲ್ದಾಣ ಬಳಿ ಈ ಅಪಘಾತ ನಡೆದಿದೆ. ಅಪಘಾತದ ಬಳಿಕ ಸಂಧ್ಯಾರಿಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅವರ ಸ್ನೇಹಿತರು, ಸ್ಥಳೀಯರು ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 


ಇದನ್ನೂ ಓದಿ: ನಾಳೆಯಿಂದ 3 ವಾರಗಳ ಕಾಲ ರಾಜ್ಯದ ಎಲ್ಲಾ ಶಾಲೆಗಳಿಗೆ ಅರ್ಧ ದಿನ ರಜೆ: ಸರ್ಕಾರದ ಈ ಮಹತ್ವದ ಘೋಷಣೆಗೆ ಕಾರಣವೇನು?


ಘಟನೆಯಲ್ಲಿ ಸಂಧ್ಯಾರಿಗೆ ಅಲ್ಲದೇ ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೂ ಬೆನ್ಜ್‌ ಕಾರು ಡಿಕ್ಕಿಯಾಗಿತ್ತು. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸೈಯ್ಯದ್ ಎಂಬುವರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡಿದ ಮತ್ತಲ್ಲಿ ಅತಿವೇಗವಾಗಿ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣವೆಂದು ಹೇಳಲಾಗಿದೆ.


ಆರೋಪಿಗಳ ಬಂಧನ, ಬೆನ್ಜ್ ಕಾರು ವಶಕ್ಕೆ!


ಅಪಘಾತದ ನಂತರ ಆರೋಪಿ ಧನುಷ್ ಹಾಗೂ ಸ್ನೇಹಿತರು ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದರಂತೆ. ಎಸ್ಕೇಪ್‌ ಆಗುತ್ತಿದ್ದ ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಧನುಷ್ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಬೆನ್ಜ್ ಕಾರನ್ನು ಸಹ ವಶಕ್ಕೆ ತೆಗೆದುಕೊಂಡಿದ್ದಾರೆ.


ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದು ದೃಢ!


ಐಷಾರಾಮಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಧನುಷ್ ಹಾಗೂ ಸ್ನೇಹಿತರು ಕುಡಿದ ಮತ್ತಿನಲ್ಲಿದ್ದರಂತೆ. ಆರೋಪಿ ಚಾಲಕನನ್ನು ಪೊಲೀಸರು ಮದ್ಯಪಾನ ಪರೀಕ್ಷೆಗೊಳಪಡಿಸಿದ್ದು, ಕುಡಿದು ವಾಹನ ಚಲಾಯಿಸಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.


ಕೇಸ್ ವಾಪಸ್ ಪಡೆಯಲು ಕೋಟಿ ಕೋಟಿ ಆಫರ್!


ಸಂಧ್ಯಾರ ದುರಂತ ಸಾವಿಗೆ ಸಂಬಂಧಿಸಿದಂತೆ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಕೇಸ್ ವಾಪಸ್ ಪಡೆಯುವಂತೆ ಆರೋಪಿ ಧನುಷ್ ಸಂಬಂಧಿಕರು ಕೋಟಿ ಕೋಟಿ ಆಫರ್ ನೀಡುತ್ತಿದ್ದಾರಂತೆ. ಕಾರು ಚಲಾಯಿಸುತ್ತಿದ್ದ ಆರೋಪಿ ಧನುಷ್ ಕೋಟ್ಯಾಧಿಪತಿ ಪರಮಶಿವಯ್ಯ ಎಂಬುವವರ ಒಬ್ಬನೇ ಪುತ್ರನಂತೆ. ಸಂಧ್ಯಾಗೆ ಗುದ್ದಿರುವ ಬೆಂಜ್ ಕಾರು LV ಟ್ರಾವೆಲ್ಸ್‌ಗೆ ಸೇರಿದ್ದು ಎನ್ನಲಾಗಿದೆ. ಟ್ರಾವೆಲ್ಸ್ ಮಾಲೀಕರಾಗಿರುವ ಪರಮಶಿವಯ್ಯನವರು ತಮ್ಮ ಒಬ್ಬನೇ ಮಗನಿಗೆ ಐಷಾರಾಮಿ ಬೆಂಜ್ ಕಾರನ್ನು ಕೊಡಿಸಿದ್ದರು ಅಂತಾ ತಿಳಿದುಬಂದಿದೆ.


ಇದನ್ನೂ ಓದಿ: ಪೌರಿಯಿಂದ ರಾಮನಗರಕ್ಕೆ ಬರುತ್ತಿದ್ದ ಬಸ್ ಕುಪಿ ಬಳಿ ಕಂದಕಕ್ಕೆ ಬಿದ್ದು ಅಪಘಾತ: 15 ಮೃತದೇಹಗಳು ಪತ್ತೆ


ಇದೀಗ ಆರೋಪಿ ಧನುಷ್‌ ಕಡೆಯವರು FIR ಮಾಡಬೇಡಿ, ನಾವು ಎಷ್ಟು ಬೇಕಾದರೂ ದುಡ್ಡು ಕೊಡ್ತೀವಿ ಅಂತಾ ಹೇಳಿದ್ದಾರೆ. ಆದರೆ ನಮಗೆ ಯಾವುದೇ ದುಡ್ಡು ಬೇಡ, ಸಂಧ್ಯಾ ಬೇಕು ಅಂತಾ ಆಕೆಯ ಕುಟುಂಬಸ್ಥರು ಕಿಡಿಕಾರಿದ್ದಾರೆ. ಘಟನೆ ಬಳಿಕ ನಾವು ಪೊಲೀಸ್​ ಠಾಣೆಗೆ ಹೋಗಿ FIR​ ದಾಖಲಿಸಲು ಮುಂದಾಗಿದ್ದೆವು. ಆದರೆ ಅಲ್ಲ FIR​ ದಾಖಲಿಸಲು ಹಿಂದೇಟು ಹಾಕಿದರು. ಬಳಿಕ FIR​ ದಾಖಲು ಮಾಡಿಕೊಂಡಿದ್ದಾರೆ ಅಂತಾ ಸಂಧ್ಯಾರ ಸಹೋದರ ಹೇಳಿದ್ದಾರೆ. ಆರೋಪಿ ಧನುಷ್‌ ಕಂಠಪೂರ್ತಿ ಕುಡಿದು ಶೋಕಿ ಮಾಡಲು ಕಾರು ಓಡಿಸಿ ನಮ್ಮ ಅಕ್ಕನ ಜೀವ ತೆಗೆದಿದ್ದಾನೆ. ಆತ ಮತ್ತು ಆತನ ಸ್ನೇಹಿತರಿಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲದಿದ್ರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಅಂತಗಾ ಕಣ್ಣೀರು ಹಾಕಿದ್ದಾರಂತೆ. 


ಆರೋಪಿ ರಕ್ಷಣೆ ಮಾಡುವ ಪ್ರಶ್ನೆಯಿಲ್ಲ!


ಇನ್ನು ಘಟನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಕೆಂಗೇರಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಯಾವುದೇ ಗೊಂದಲವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಪಾನಮತ್ತನಾಗಿ ಅಪಘಾತವೆಸಗಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ. ಹೀಗಾಗಿ ಆರೋಪಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ