ಜವರಾಯನ ಅಟ್ಟಹಾಸ: ರಸ್ತೆ ಅಪಘಾತದಲ್ಲಿ ಸ್ಕೂಲ್ ಬಸ್‌ನಲ್ಲಿದ್ದ ನಾಲ್ವರು ಶಾಲಾ ಮಕ್ಕಳ ದುರ್ಮರಣ
ಆಲಗೂರು ಗ್ರಾಮದ ಸಮೀಪ ನಡೆದ ಈ ದುರ್ಘಟನೆಯಲ್ಲಿ ಎಂಟಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
Road Accident: ಟ್ರ್ಯಾಕ್ಟರ್ ಮತ್ತು ಸ್ಕೂಲ್ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಕೂಲ್ ಬಸ್‌ನಲ್ಲಿದ್ದ ನಾಲ್ವರು ಶಾಲಾ ಮಕ್ಕಳ ದುರ್ಮರಣಕ್ಕೀಡಾಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯ ಆಲಗೂರು ಗ್ರಾಮದ ಬಳಿ ನಡೆದಿದೆ. ತಡರಾತ್ರಿ ಸಂಭವಿಸಿರುವ ಈ ಘಟನೆಯಲ್ಲಿ ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ವರ್ಧಮಾನ ಖಾಸಗಿ ಶಾಲೆಯಲ್ಲಿನ ಗ್ಯಾದರಿಂಗ್(ವಾರ್ಷಿಕ ಸ್ನೇಹ ಸಮ್ಮೇಳನ) ಮುಗಿಸಿ ಹೋಗುವಾಗ ಆಲಗೂರಿನಿಂದ ಕವಟಗಿಗೆ ತೆರಳುತ್ತಿದ್ದ ಖಾಸಗಿ ಶಾಲಾ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಸ್ ಪುಡಿಪುಡಿಯಾಗಿದೆ. ಈ ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರು ವಿದ್ಯಾರ್ಥಿಗಳು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಇದನ್ನೂ ಓದಿ- ಮೃತನ ಪ್ಯಾಂಟ್ ಜೇಬಿನಲ್ಲಿ ಸಿಕ್ಕ ನಂಬರ್ ಕೊಟ್ಟಿತ್ತು ಹಂತಕರ ಸುಳಿವು..!
ಮೃತ ದುರ್ದೈವಿಗಳನ್ನು ಸಾಗರ ಗುರುಲಿಂಗ ಕಡಕೋಳ(16)(ಸ್ಥಳದಲ್ಲೇ ಸಾವು), ಶ್ವೇತಾ ಪಾಟೀಲ್(11), ಗೋವಿಂದ ಸದಾಶಿವ ಜಂಬಗಿ(11), ಬಸವರಾಜ ಸದಾಶಿವ ಕೊಟಗಿ(15), ಎಂದು ಗುರುತಿಸಲಾಗಿದೆ.
ಇದನ್ನೂ ಓದಿ- ಮೊಬೈಲ್ ಪತ್ತೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಈ ಜಿಲ್ಲೆ
ಆಲಗೂರು ಗ್ರಾಮದ ಸಮೀಪ ನಡೆದ ಈ ದುರ್ಘಟನೆಯಲ್ಲಿ ಎಂಟಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.