ಬೆಂಗಳೂರು : ದಂಪತಿ ಬೆದರಿಸಿ ಹಣ ವಸೂಲಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಾಜೇಶ್ ಹಾಗೂ ಕಾನ್ಸ್‌ಟೇಬಲ್ ನಾಗೇಶ್ ವಜಾಗೊಂಡ ಸಿಬ್ಬಂದಿ.


COMMERCIAL BREAK
SCROLL TO CONTINUE READING

ಡಿಸೆಂಬರ್ 8ರ ರಾತ್ರಿ‌ 11 ಗಂಟೆ ಸುಮಾರಿಗೆ ಮಾನ್ಯತಾ ಟೆಕ್​ಪಾರ್ಕ್​ ಬಳಿ ತನ್ನ ಪತ್ನಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಕಾರ್ತಿಕ್ ಎಂಬಾತನನ್ನ ತಡೆದಿದ್ದ ಹೊಯ್ಸಳ ಸಿಬ್ಬಂದಿ, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳನ್ನ ಪರಿಶೀಲಿಸಿ 3 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಮನೆಯ ಸಮೀಪದಲ್ಲೇ ಇದ್ದೇವೆ, ಮೇಲಾಗಿ 11 ಗಂಟೆಯ ಸುಮಾರಿಗೆ ಓಡಾಟಕ್ಕೆ ನಿರ್ಬಂಧವಿದೆಯೇ ಎಂದು ಪ್ರಶ್ನಿಸಿ, ಹಣ ಕೊಡುವುದಿಲ್ಲ ಎಂದಾಗ ಬೆದರಿಕೆ ಹಾಕಿ, 1 ಸಾವಿರ ರೂಪಾಯಿಯನ್ನು ಡಿಜಿಟಲ್ ಪೇಮೆಂಟ್ ಮೂಲಕ ಪಡೆದು ಸ್ಥಳದಿಂದ ತೆರಳಿದ್ದರು. 


ಇದನ್ನೂ ಓದಿ- ಟ್ರಾಫಿಕ್ ಫೈನ್ ಉಳಿಸಿಕೊಂಡವರಿಗೆ ಸಿಹಿ ಸುದ್ದಿ 


ಹೊಯ್ಸಳ ಸಿಬ್ಬಂದಿ ನಡೆಯ ಕುರಿತು ಟ್ವೀಟ್​​ ಮಾಡಿದ್ದ ಕಾರ್ತಿಕ್, ತಮಗಾದ ಅನುಭವ ಹಂಚಿಕೊಂಡಿದ್ದರು. ಬಳಿಕ ಇಬ್ಬರೂ ಸಿಬ್ಬಂದಿಯನ್ನ ಅಮಾನತ್ತುಗೊಳಿಸಿ ಆದೇಶಿಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಇಲಾಖಾ ತನಿಖೆಗೆ ಆದೇಶಿಸಿದ್ದರು.


ಇದನ್ನೂ ಓದಿ- ಚಿರತೆ ದಾಳಿಗೆ ಬೆಚ್ಚಿಬಿದ್ದ ಯಾದಗಿರಿ ಜನತೆ


ಇಬ್ಬರೂ ಸಿಬ್ಬಂದಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ‌ ನೀಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.