ಹೀಗೆ ಮನೆ ಮುಂದೆ ಚೆಲ್ಲಾಪಿಲ್ಲಿ ಆಗಿರುವ ರಕ್ತ, ಮತ್ತೊಂದೆಡೆ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ, ಎಲ್ಲವನ್ನು ಆತಂಕದಿಂದ ನೋಡುತ್ತಿರುವ ಸ್ಥಳೀಯರು, ಹೌದು ಇದೆಲ್ಲಾ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದ ವರವಲಯದಲ್ಲಿ. ಮಂಗಳವಾರ ಸಂಜೆ ಜೋಡಿ ಕೊಲೆ ನಡೆದು ಗ್ರಾಮವೇ ಬೆಚ್ಚಿಬಿದ್ದದೆ. ಕೊಲೆಯಾದ ನವದಂಪತಿಗಳಾದ ಯಾಸಿನ ಬಾಗೊಡೆ (21) ಹೀನಾಕೌಸರ್ ಬಾಗೊಡೆ (19) ಎಂಬುವರು ಹಂತಕನ ಕೈಗೆ ಸಿಲುಕಿ ಭೀಕರವಾಗಿಯೇ ಹತ್ಯೆ ಆಗಿದ್ದಾರೆ. ಆರೋಪಿ ತೌಫಿಕ್ ಕ್ಯಾಡಿ ಮಾರ್ಕಾಸ್ತ್ರಗಳಿಂದ ನವದಂಪತಿಗಳ ಮನೆಗೆ ನುಗ್ಗಿ ಏಕಾಯಕಿ ದಾಳಿ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಘಟನೆ ಬಗ್ಗೆ ವಿವರಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೊಲೆ ಮಾಡಿದ ಆರೋಪಿ ತೌಫಿಕ್ ಕ್ಯಾಡಿ ಜೊತೆ ಹೀನಾಕೌಸರ್ ನಾಲ್ಕು ವರಷದ ಹಿಂದೆ ವಿವಾಹವಾಗಿದ್ದಳು, ಆದರೆ ಇದು ಬಾಲ್ಯ ವಿವಾಹದಿಂದ ಹೀನಾಕೌಸರಗೆ ತೌಫಿಕ್ ಮೇಲೆ ಅಷ್ಟೊಂದು ಮನಸು ಇಲ್ಲದೆ ಸಂಸಾರ ಮಾಡುತಿದ್ದಳು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೀನಾ ಹಠ ಹಿಡಿದು ಅಥಣಿ ಪಟ್ಟಣದಲ್ಲಿ ನೆಲೆಸಿ ಶಿಕ್ಷಣ ಮುಂದುವರಿಸಿದಳು, ಆರೋಪಿ ತೌಫಿಕ್ ಸ್ನೇಹಿತ ಯಾಸೀನ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ, ಸ್ನೇಹಿತನ ಹೆಂಡತಿ ಪರಿಚಯ ಮಾಡಿಕೊಂಡು ಯಾಸಿನ್ ಹೀನಾಕೌಸರ ಸ್ನೇಹ ಪ್ರೀತಿಯಾಗಿ ತಿರುಗಿ ಸಲುಗೆಯಿಂದ ಸುತ್ತಿದ್ದರು ಅಂತೆ, ಆರೋಪಿ ತೌಫಿಕ್ ವಿಷಯ ತಿಳಿದು ರಾಜೀ ಸಂಧಾನದ ಮಾಡಿಸಿದ್ದಾನೆ, ಆದರೆ ಇವರ ವಯಸ್ಸು ಕೇಳದೆ ಇಬ್ಬರ ಸಲುಗೆ ಮುಂದುವರೆದು ಕೆಲವು ತಿಂಗಳು ಯಾಸಿನ್ ಹೀನಾಕೌಸರ ನಾಪತ್ತೆಯಾಗಿ ಪ್ರಶಾಂತ ವಾತಾವರಣದಲ್ಲಿ ನೆಲೆಸಿದರು. ಇದನ್ನೆಲ್ಲ ನೋಡಿದ ಆರೋಪಿ ತೌಫಿಕ್ ಹಾಗೂ ಕುಟುಂಬಸ್ಥರು ಸ್ಥಳಿಯ ಪೊಲೀಸ್ ಹಾಗೂ ನ್ಯಾಯಾಲಯ ಸಮ್ಮುಖದಲ್ಲಿ ಹೀನಾಕೌಸರಗೆ ಮದುವೆ ವಿಚ್ಚೇದನ ನೀಡಲಾಗಿತ್ತು, ಹೀನಾಕೌಸರ ಪ್ರೀತಮನಾದ ಯಾಸೀನ್ ಜೊತೆ ಕಳೆದು ಎರಡು ತಿಂಗಳ ಹಿಂದೆ ಅಷ್ಟೇ ಮದುವೆ ಮಾಡಲಾಗಿತ್ತು, ಇಬ್ಬರು ಅನ್ಯೋನ್ಯವಾಗಿ ಸುತ್ತುತ್ತಾ ನವ ದಾಂಪತ್ಯ ಕಳೆಯುತ್ತಿದ್ದರು, ಇದನ್ನೆಲ್ಲ ಮಾಜಿ ಪತಿ ಹಾಗೂ ಆರೋಪಿ ತೌಫಿಕ್ ಕ್ಯಾಡಿ ಸಹಿಸದೆ ಏಕಾಏಕಿ ಇಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎನ್ನುತ್ತಾರೆ ಸ್ಥಳಿಯರು.


ಇದನ್ನೂ ಓದಿ-"ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ನಮ್ಮ ನಿಲುವು ಅಚಲ"


ಜಿಲ್ಲೆಯಲ್ಲಿ ಡಬಲ್ ಮರ್ಡರ್ ನಡೆಯುತ್ತಿದಂತೆ ಸ್ಥಳಕ್ಕೆ ಐಗಳಿ ಪೊಲೀಸರ ಜೊತೆ ಬೆಳಗಾವಿ ಪ್ರಭಾರಿ ಎಸ್ಪಿ ಬಿ ಎಸ ನೇಮಗೌಡ ಜೊತೆಗೆ ಅಥಣಿ ಡಿವೈಎಸ್ಪಿ  ಶ್ರೀಪಾದ್ ಜಲದೇ ಬೇಟಿ ನೀಡಿ ಪರಿಶೀಲನೆ ನಡೆಸಿದರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಲಂಕುಶವಾಗಿ ಮಾಹಿತಿಯನ್ನು ಕಲೆ ಹಾಕಿದರು, ಈ ಕೊಲೆ ಪ್ರಕರಣದಲ್ಲಿ ಜಗಳವನ್ನು ಬಿಡಿಸಿಕೊಳ್ಳುದಕ್ಕೆ ಮಧ್ಯ ಪ್ರವೇಶಿಸಿದ ಅಮಿನಾಬಾಯಿ ಬಾಗೂಡ,  ಹಾಗೂ ಮುಸ್ತಫಾ ಮುಲ್ಲಾ ಎಂಬುವರ ಮೇಲೆ ಆರೋಪಿ ತೌಪಿಕ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ಅವರನ್ನು ಕೂಡ ಮಹಾರಾಷ್ಟ್ರದ ಮಿರಾಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತೇವೆ ಎಂದು ಬೆಳಗಾವಿ ಪ್ರಭಾವಿ ಎಸ್ಪಿ ಬಿ ಎಸ ನೇಮಗೌಡ ಮಾದ್ಯಮಗಳಿಗೆ ಮಾಹಿತಿ ನೀಡಿದರು


ಒಟ್ಟಾರೆಯಾಗಿ ಸ್ನೇಹಿತರಿಬ್ಬರು ಒಂದು ಹುಡುಗಿಗೋಸ್ಕರ ಒಬ್ಬರು ಕೊಲೆಯಾದರೆ  ಇನ್ನೊಬ್ಬ ಜೈಲು ಪಾಲಾಗಿ ಸ್ನೇಹ ಎಂಬ ಪವಿತ್ರ ಪದಕ್ಕೆ ಎಳ್ಳುನೀರು ಬಿಟ್ಟಂತಾಗಿದೆ, ಸದ್ಯ ಮೂವರು ಅತಿ ಚಿಕ್ಕ ವಯಸ್ಸಿನಲ್ಲಿ ದುರಂತ ಅಂತ್ಯವನ್ನು ಕಂಡಿದ್ದು ಕುಟುಂಬಸ್ಥರಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮರುಕು ಹುಟ್ಟಿಸಿದೆ.


ಇದನ್ನೂ ಓದಿ-ಶಿವಾಜಿ ನಗರವಾಯ್ತು, ಈಗ ಜೆಜೆಆರ್ ನಗರದಲ್ಲಿ ಹಸಿರು ಧ್ವಜ ಹಾರಾಟದ ಫೋಟೋ ವೈರಲ್


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.