ಬೆಂಗಳೂರು : ರಕ್ತಚಂದನ ದಿಮ್ಮಿಗಳನ್ನ ಸಾಗಿಸ್ತಿದ್ದ ಗುಂಪೊಂದು ಪೊಲೀಸರ ಬಲೆಗೆ ಬಿದ್ದಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ಸಿದ್ಧರಾಜು, ಪ್ರಜ್ವಲ, ಲೋಕೇಶ, ದೇವರಾಜ್, ಗೋವಿಂದ ಸ್ವಾಮಿ ಬಂಧಿತ ಆರೋಪಿಗಳು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Peacock Dream : ಕನಸಿನಲ್ಲಿ ನವಿಲು ಕಂಡರೆ ನಿಜವಾಗಿಯೂ ಶ್ರೀಮಂತರಾಗ್ತಾರಾ?


ಮಂಡ್ಯದ ದೇವಲಾಪುರ ಕಾಡಿನಿಂದ ರಕ್ತಚಂದನ ಮರಗಳನ್ನ ಕಳ್ಳತನ ಮಾಡಿದ್ದರು. ಪೊಲೀಸರ ಕಣ್ತಪ್ಪಿಸಲು ರಕ್ತಚಂದನ ಮರದ ಮೇಲೆ ಟೊಮೆಟೊ ಬಾಕ್ಸ್ ಹಾಕಿ ಸಾಗಾಟ ಮಾಡುತ್ತಿದ್ದರು. ಬುಲೆರೋ ವಾಹನದಲ್ಲಿ ರಕ್ತಚಂದನ ಸಾಗಿಸ್ತಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 


ತಮಿಳುನಾಡಿಗೆ ರಕ್ತಚಂದನ ದಿಮ್ಮಿಗಳನ್ನ ಸಾಗಿಸುವ ವೇಳೆ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ 1.5 ಟನ್ ರಕ್ತಚಂದನ ದಿಮ್ಮಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಗೋವಿಂದ ಸ್ವಾಮಿ ಮೇಲೆ ಆಂಧ್ರ, ತಮಿಳುನಾಡು ಭಾಗದಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದ್ದವು. 


ಇದನ್ನೂ ಓದಿ : ಇಂದಿನಿಂದ ಸಕ್ಕರೆನಾಡಲ್ಲಿ ಸಂಭ್ರಮದ ಮಹಾಕುಂಭ ಮೇಳ ಮಹೋತ್ಸವ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.