ಮೈಸೂರು: ಪತ್ನಿ ಶೀಲ ಶಂಕಿಸಿ 12 ವರ್ಷದಿಂದ ಮನೆ ಬಾಗಿಲಿಗೆ ಮೂರು ಬೀಗ ಜಡಿದ ಘಟನೆ ಎಚ್.ಡಿ.ಕೋಟೆ ತಾಲೋಕಿನ ಎಚ್.ಮಟಕೆರೆ ಗ್ರಾಮದಲ್ಲಿ ನಡೆದಿದೆ. ಹೆಂಡತಿ ಮೇಲಿನ ಅನುಮಾನದಿಂದ ಆಕೆಗೆ ದಿಗ್ಬಂಧನ ವಿಧಿಸಿದ್ದ ಪತಿಯ ನೀಚ ಕೃತ್ಯ ಬಯಲಾಗಿದೆ. ಪ್ರತಿದಿನ ಮನೆಯಿಂದ ಹೊರಗೂ ಬರಲಾಗದೆ ಮನೆಯೊಳಗಡೆಯೇ ಪತ್ನಿ 12 ವರ್ಷ ಅಜ್ಞಾತವಾಸ ಅನುಭವಿಸಿದ್ದಾಳೆ. ಎಚ್.ಡಿ.ಕೋಟೆ ತಾಲೋಕಿನ ಎಚ್.ಮಟಕೆರೆ ಗ್ರಾಮದ ಸಣ್ಣಾಲಯ್ಯ ಪತ್ನಿ ದಿಗ್ಬಂದನದಲ್ಲಿರಿಸಿದ್ದ ಆರೋಪಿ.


COMMERCIAL BREAK
SCROLL TO CONTINUE READING

ಎಚ್.ಡಿ.ಕೋಟೆ ತಾಲೋಕಿನ ಹೈರಿಗೆ ಗ್ರಾಮದ ಸುಮಾ ಸಣ್ಣಾಲಯ್ಯನ ಮನೆಯಲ್ಲಿ ದಿಗ್ಬಂಧನವಾಗಿದ್ದರು. 12 ವರ್ಷದ ಹಿಂದೆ ಸಣ್ಣಾಲಯ್ಯ ವಿವಾಹವಾಗಿದ್ದ. ಸಣ್ಣಾಲಯ್ಯನಿಗೆ ಸುಮಾ 3 ನೇ ಪತ್ನಿ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.


ಇದನ್ನೂ ಓದಿ: "ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ನಮ್ಮ ನಿಲುವು ಅಚಲ"


ಸಣ್ಣಾಲಯ್ಯನ ಕಾಟಕ್ಕೆ ಬೇಸತ್ತು ಇಬ್ಬರು ಪತ್ನಿಯರು ದೂರಾಗಿದ್ದರು. ವಿವಾಹವಾದಾಗಿನಿಂದ ಅನುಮಾನದ ಪಿಶಾಚಿಯಂತೆ ಈ ವರ್ತಿಸುತ್ತಿದ್ದನಂತೆ. ಪ್ರತಿದಿನ ಪತ್ನಿಯನ್ನು ಮನೆ ಒಳಗೆ ಹಾಕಿ ಬಾಗಿಲಿಗೆ ಮೂರು ಬೀಗ ಜಡಿದು ಬಂಧನದಲ್ಲಿರಿಸಿದ್ದ. 


ಮನೆಯ ಕಿಟಕಿಗಳನ್ನೂ ಭದ್ರ ಪಡಿಸಿ, ಯಾರೊಂದಿಗೂ ಮಾತನಾಡದಂತೆ ಎಚ್ಚರವಹಿಸಿದ್ದನಂತೆ. ಮನೆಯೊಳಗೆ ಶೌಚಾಲಯ ಇಲ್ಲದಿದ್ದರೂ ಬಕೇಟ್ ಒಂದನ್ನು ಒಳಗಿರಿಸಿ ಮಲ-ಮೂತ್ರ ವಿಸರ್ಜನೆಯನ್ನೂ ಅಲ್ಲೇ ಮಾಡುವಂತೆ ಹೇಳುತ್ತಿದ್ದನಂತೆ. ಈ ಹೊಲಸನ್ನು ರಾತ್ರಿ ಹೊರಗೆ ಸುರಿಸುತ್ತಿದ್ದನಂತೆ. 


ಸುಮಾ ಸಂಬಂಧಿಕರೊಬ್ಬರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸಾಂತ್ವನ ಕೇಂದ್ರದ ಜಶೀಲ ಎಎಸ್ ಐ ಸುಭಾನ್ ಇತರರ ತಂಡ ಸುಮಾ ಮನೆಗೆ ಭೇಟಿ ನೀಡಿದ್ದಾರೆ. ರಾತ್ರೋರಾತ್ರಿ ಸುಮಾ ಮತ್ತು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. 


ಮನೆಯ ಬೀಗ ಮತ್ತು ಬಾಗಿಲು ಮುರಿದು ಪತ್ನಿಯನ್ನು ರಕ್ಷಿಸಿದ್ದಾರೆ. ಆಕೆಯ ಒಪ್ಪಿಗೆಯಂತೆ ತವರು ಮನೆಯಲ್ಲಿ ಪೊಲೀಸರು ಆಶ್ರಯ ಕೊಡಿಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 


ಇದನ್ನೂ ಓದಿ: Gruha Jyothi Scheme Updates: ಗೃಹಜ್ಯೋತಿ ಬಳಕೆದಾರರಿಗೆ ಸಿಹಿ ಸುದ್ದಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.