ಮೃತನ ಪ್ಯಾಂಟ್ ಜೇಬಿನಲ್ಲಿ ಸಿಕ್ಕ ನಂಬರ್ ಕೊಟ್ಟಿತ್ತು ಹಂತಕರ ಸುಳಿವು..!
Crime News: ರಕ್ತ ಸಿಕ್ತವಾಗಿ ಹೆಣವಾಗಿ ಬಿದ್ದಿದ್ದವನ ಹೆಸರು ಅರ್ಬಾಜ್ ಪಾಷ.. ಇಲ್ಲಿಗೆ ನಾಲ್ಕು ದಿನಗಳ ಹಿಂದೆ ಈತ ನೋಡಿದವರಿಗೆ ಗುರುತು ಸಿಗದೆ ಹಾಗೆ ರೈಲ್ವೇ ಟ್ರ್ಯಾಕ್ ಬಳಿ ಸತ್ತುಬಿದ್ದಿದ್ದ.. ರಾಮನಗರದ ರೈಲ್ವೇ ನಿಲ್ದಾಣದ ಬಳಿ ಅಪರಿಚಿತ ಶವ ಇರುವ ಬಗ್ಗೆ ರೈಲ್ವೇ ಪೊಲೀಸರಿಗೆ ಮಾಹಿತಿ ಬಂದಿತ್ತು.
Crime News: ಅವರೆಲ್ಲ ಒಂದೇ ತಾಯಿ ಮಕ್ಕಳು ಆಗದಿದ್ರು ಅಣ್ಣ- ತಮ್ಮರ ಹಾಗೆ ಇದ್ರು.. ಕೆಲಸವಾಗಲಿ, ಊಟವಾಗಲಿ, ಸುಖ- ದುಃಖವಾಗಲಿ ಒಟ್ಟಿಗೆ ಹಂಚಿಕೊಳ್ತಾ ಇದ್ರು.. ಇವರ ಮದ್ಯೆ ಆತ ಮಾಡಿದ ಅದೊಂದು ತಪ್ಪು ಮಾತ್ರ ಕ್ಷಮಿಸಲಾಗದಂತದ್ದು.. ಆ ತಪ್ಪಿಗೆ ತಕ್ಕ ಶಾಸ್ತಿ ಮಾಡಲೇಬೇಕು ಅಂತ ಹೊರಟ ಹಂತಕರು ಗೆಳೆಯನಿಗೆ ಚಟ್ಟ ಕಟ್ಟಿದ ಸ್ಟೋರಿಯಿದು..
ರಕ್ತ ಸಿಕ್ತವಾಗಿ ಹೆಣವಾಗಿ ಬಿದ್ದಿದ್ದವನ ಹೆಸರು ಅರ್ಬಾಜ್ ಪಾಷ.. ಇಲ್ಲಿಗೆ ನಾಲ್ಕು ದಿನಗಳ ಹಿಂದೆ ಈತ ನೋಡಿದವರಿಗೆ ಗುರುತು ಸಿಗದೆ ಹಾಗೆ ರೈಲ್ವೇ ಟ್ರ್ಯಾಕ್ ಬಳಿ ಸತ್ತುಬಿದ್ದಿದ್ದ.. ರಾಮನಗರದ ರೈಲ್ವೇ ನಿಲ್ದಾಣದ ಬಳಿ ಅಪರಿಚಿತ ಶವ ಇರುವ ಬಗ್ಗೆ ರೈಲ್ವೇ ಪೊಲೀಸರಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದಾಗಿದ್ರು. ಈ ವೇಳೆ ಪೊಲೀಸರಿಗೆ ಲೀಡ್ ಕೊಟ್ಟಿದ್ದೆ ಆ ಮೊಬೈಲ್ ನಂಬರ್.
ಇದನ್ನೂ ಓದಿ- ಮೊಬೈಲ್ ಪತ್ತೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಈ ಜಿಲ್ಲೆ
ಇನ್ನು ಘಟನೆಯ ಬಳಿಕ ಅಪರಿಚಿತ ಶವ ಪರಿಶೀಲನೆ ಆತನ ಜೇಬಿನಲ್ಲಿ ಮೊಬೈಲ್ ನಂಬರ್ ಪತ್ತೆಯಾಗಿತ್ತು. ಅದನ್ನು ಆಧರಿಸಿ ಸಿಡಿಆರ್ ಪರಿಶೀಲನೆ ವೇಳೆ ಮೂರು ಜನರ ಕ್ಲೂ ಸಿಕ್ಕಿತ್ತು. ತಕ್ಷಣ ಸೈಯದ್ ಇಲಿಯಾಸ್, ಜಹೀರ್ ಅಲಿಯಾಸ್ ಕಾಲು ಮತ್ತು ಉಮ್ರಾನ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಜಹೀರ್ ತಂಗಿಯನ್ನ ಪ್ರೀತಿಸುವಂತೆ ಪೀಡಿಸುವ ಜೊತೆಗೆ ಅವಳ ಹಿಂದೆ ಹೋಗಿ ಅರ್ಬಾಜ್ ಪಾಷ ಕಿರುಕುಳ ನೀಡುತ್ತಿದ್ದ. ಈ ಹಿನ್ನಲ್ಲೆ ಜಹೀರ್ ತಾಯಿ ಮಗಳನ್ನ ಶಾಲೆ ಬಿಡಿಸಿದ್ರು. ಇಷ್ಟಾದ್ರು ಸುಮ್ಮನಾಗದ ಅರ್ಬಾಜ್ ಪಾಷ ಮನೆಯ ಬಳಿ ಹೋಗಿ ಗಲಾಟೆ ಮಾಡಿ, ಜಹೀರ್ ತಾಯಿಯ ನಡೆತೆಯ ಬಗ್ಗೆ ಅಪಪ್ರಚಾರ ಮಾಡಿದ್ದ. ಇದರಿಂದ ಕೋಪಗೊಂಡ ಜಹೀರ್ ತನ್ನ ಗೆಳೆಯರ ಜೊತೆ ಸೇರಿ 20ರಂದು ಪಾರ್ಟಿ ನೆಪದಲ್ಲಿ ಕರೆಯಿಸಿ ಹಾಕಿ ಸ್ಟಿಕ್ ನಿಂದ ಹಲ್ಲೆ ಮಾಡಿದ್ರು. ಪೊಲೀಸರ ದಿಕ್ಕು ತಪ್ಪಿಸಲು ಸಿಮೆಂಟ್ ಕಾಂಕ್ರೀಟ್ ಕಲ್ಲನ್ನ ಪಾಷ ತಲೆಯ ಮೇಲೆ ಹಾಕಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಇದನ್ನೂ ಓದಿ- ATMಗೆ ಬರುವ ವೃದ್ದರೇ ಎಚ್ಚರ..! ಹಣ ಕಳೆದುಕೊಳ್ಳುವ ಮುನ್ನ ಈ ಸುದ್ದಿ ನೋಡಿ..
ಇನ್ನು ಕೊಲೆಯಾದ ಅರ್ಬಾಜ್ ಪಾಷ ಹಾಗು ಹಂತಕರು ರಾಮನಗರ ಸಿಲ್ಕ್ ಫಾರ್ಮ್ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಆರೇಳು ವರ್ಷಗಳಿಂದ ಗೆಳೆಯರಾಗಿದ್ರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.