Delhi Shraddha Murder Case: ಸುಂದರವಾಗಿ ಅರಳ ಬೇಕಿದ್ದ ಪ್ರೇಮದ ಮೊಗ್ಗು ಇದೀಗ ದೇಶವನ್ನೇ ಬೆಚ್ಚಿ ಬೀಳಿಸುವ ಅಮಾನುಷ ಘಟನೆಯಾಗಿ ಸುದ್ದಿಯಲ್ಲಿದೆ. ದೆಹಲಿಯಲ್ಲಿ ನಡೆದ ಶ್ರದ್ಧಾ ಎಂಬ ಯುವತಿಯ ಈ ಕೊಲೆ ಪ್ರಕರಣ ಸದ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮುಂಬೈನಲ್ಲಿ ಆರಂಭವಾಗಿ ದೆಹಲಿಯಲ್ಲಿ ಕ್ರೂರ ಅಂತ್ಯ ಕಂಡಿದೆ ಈ ಪ್ರೇಮ ಕಹಾನಿ. ಅಷ್ಟಕ್ಕೂ ಯುವಕನ ತಲೆಯಲ್ಲಿ ಇಂತಹ ಭಯಾನಕ ಐಡಿಯಾ ಎಲ್ಲಿಂದ ಬಂತು ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಇಂತಹ ಕ್ರೂರ ಐಡಿಯಾ ಏನಾದ್ರೂ ಸಿಕ್ತಾ ಎಂಬ ಅನುಮಾನ ಎಲ್ಲರನ್ನೂ ಕಾಡಲಾರಂಭಿಸಿದೆ. 


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ನಡೆದ ಹೃದಯ ವಿದ್ರಾವಕ ರಕ್ತಸಿಕ್ತ ಪ್ರೇಮಕಥೆಯನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಈ ಪ್ರಕರಣದಲ್ಲಿ ಹಲವು ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಕೆದಕಿದಷ್ಟು ಆಳವಾಗಿ ಸಾಗುತ್ತಿದೆ ಈ ಪ್ರಕರಣ. ಯಾರೂ ಊಹಿಸಲೂ ಸಾಧ್ಯವಾಗದಷ್ಟು ಪ್ರೀತಿಸುತ್ತಿದ್ದ ಶ್ರದ್ಧಾಳನ್ನು ಪ್ರೇಮಿ ಅಫ್ತಾಬ್ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ನಂತರ ಸಾಕ್ಷ್ಯ ನಾಶಪಡಿಸಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾನೆ. ತನ್ನ ಗೆಳತಿಯ ಕೊಲೆಯ ನಂತರ, ಸಾಕ್ಷ್ಯ ನಾಶಪಡಿಸಲು ಇಡೀ ಫ್ಲಾಟ್ ಅನ್ನು ರಾಸಾಯನಿಕಗಳಿಂದ ತೊಳೆಯುತ್ತಾನೆ. ಈ ಕಾರಣದಿಂದಾಗಿ ಅಪರಾಧ ನಡೆದ ಸ್ಥಳದಲ್ಲಿ ಒಂದೇ ಒಂದು ರಕ್ತದ ಕಲೆ ಸಹ ಕಂಡುಬಂದಿಲ್ಲ.


ಇದನ್ನೂ ಓದಿ : ಪ್ರೇಯಸಿಯನ್ನು ಜೀವಂತ 35 ತುಂಡು ಮಾಡಿ ಎಸೆದ ಪ್ರೇಮಿ : ಹುಡಿಗಿಯರೇ ಹುಷಾರ್‌..!


ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಇಂತಹ ಕ್ರೂರ ಐಡಿಯಾ :


ಪೊಲೀಸರ ವಿಚಾರಣೆಯಲ್ಲಿ, ಅಫ್ತಾಬ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಯಾರೂ ಊಹಿಸದೆ ರೀತಿಯಲ್ಲಿ ನಡೆದ ಈ ಭೀಕರ ಕೊಲೆಯ ಎಲ್ಲಾ ರಹಸ್ಯಗಳನ್ನು ಬಹಿರಂಗಪಡಿಸಿದ್ದಾನೆ. Dexter ಎಂಬ ವೆಬ್ ಸೀರೀಸ್ ನೋಡಿದ ನಂತರ ಈ ರೀತಿ ಕೆಟ್ಟ ರೀತಿಯಲ್ಲಿ ಕೊಲ್ಲುವ ಆಲೋಚನೆ ತನ್ನ ಮನಸ್ಸಿಗೆ ಬಂದಿತು ಎಂದು ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಹೇಳಲಾಗ್ತಿದೆ. Dexter ಎಂಬುದು ಕ್ರೈಂ ಡ್ರಾಮಾ ಸರಣಿಯಾಗಿದ್ದು, ಇದರಲ್ಲಿ 'ಡೆಕ್ಸ್ಟರ್' ಪಾತ್ರವನ್ನು ಮೈಕೆಲ್ ಸಿ. ಹಾಲ್ ನಿರ್ವಹಿಸಿದ್ದಾರೆ.


ಇದರ ಕಥೆಯು Dexter ಎಂಬ ಹುಡುಗನ ಸುತ್ತ ಸುತ್ತುತ್ತದೆ, ಅವನು 3 ನೇ ವಯಸ್ಸಿನಲ್ಲಿ ಅನಾಥನಾಗುತ್ತಾನೆ. ಬಾಲ್ಯದಲ್ಲಿ, ತನ್ನ ತಾಯಿಯನ್ನು ಗರಗಸದಿಂದ ಕ್ರೂರವಾಗಿ ಕೊಲ್ಲುವುದನ್ನು ನೋಡುತ್ತಾನೆ, ಅದು ಅವನ ಹೃದಯ ಮತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಅವರನ್ನು ಮಿಯಾನಿ ಪೊಲೀಸ್ ಅಧಿಕಾರಿ ಹ್ಯಾರಿ ಮೋರ್ಗನ್ ದತ್ತು ಪಡೆಯುತ್ತಾರೆ. ಹ್ಯಾರಿ 'ಡೆಕ್ಸ್ಟರ್'ನ ಮನಸ್ಸಿಗೆ ಆದ ಆಘಾತವನ್ನು ಗುರುತಿಸುತ್ತಾರೆ. ನಂತರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನ ಲೋಪದೋಷಗಳ ಲಾಭವನ್ನು ಪಡೆಯುವ ಅಪರಾಧಿಗಳನ್ನು ಕೊಲ್ಲಲು ಸಹಾಯ ಮಾಡುತ್ತಾನೆ. ಅಪರಾಧಿಗಳನ್ನು ಕೊಲ್ಲುವ ಮೊದಲು 'ಡೆಕ್ಸ್ಟರ್' ತೀವ್ರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾನೆ. ಅವನು ತನ್ನ ಕೈಗೆ ಕೈಗವಸುಗಳನ್ನು ಧರಿಸಿ ಕೊಲ್ಲುತ್ತಾನೆ. ಬಳಿಕ ಪ್ಲಾಸ್ಟಿಕ್‌ನಿಂದ ಕೋಣೆಯನ್ನು ಸಂಪೂರ್ಣವಾಗಿ ಮುಚ್ಚುತ್ತಾನೆ. ಶವಗಳನ್ನು ಛಿದ್ರಗೊಳಿಸಿದ ನಂತರ, ಅವರು ಅಟ್ಲಾಂಟಿಕ್ ಸಾಗರದ ಗಲ್ಫ್ ಸ್ಟ್ರೀಮ್ಗೆ ಎಸೆಯುತ್ತಾನೆ.


Dexter ವೆಬ್ ಸೀರೀಸ್ ನಿಂದ ಶ್ರದ್ಧಾಳನ್ನು ಕೊಲ್ಲುವ ಐಡಿಯಾವನ್ನು ಅಫ್ತಾಬ್ ತೆಗೆದುಕೊಂಡಿದ್ದಾನೆ ಎಂದು ಪೊಲೀಸರ ಎದುರು ಹೇಳಿದ್ದಾನಂತೆ. ಈ ವಿಚಾರ ತಿಳಿದು ಪೊಲೀಸರೇ ಅಚ್ಚರಿಗೊಂಡಿದ್ದಾರೆ. ಆಕೆಯ ದೇಹವನ್ನು ವಿಲೇವಾರಿ ಮಾಡುವ ಆಲೋಚನೆ ಸಹ ಇದೇ ವೆಬ್ ಸರಣಿಯಿಂದ ಬಂದಿದೆಯಂತೆ. 


ಅಫ್ತಾಬ್ - ಶ್ರದ್ಧಾ ಲವ್ ಸ್ಟೋರಿ ಶುರುವಾಗಿದ್ದು ಹೀಗೆ :


2019 ರಲ್ಲಿ, ಮುಂಬೈ ಬಳಿಯ ವಸೈ ನಿವಾಸಿ ಶ್ರದ್ಧಾ ವಾಕರ್ ಮಲಾಡ್‌ನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾಲ್ ಸೆಂಟರ್ ನಲ್ಲಿ ಶ್ರದ್ಧಾ ಅವರಿಗೆ ಅಫ್ತಾಬ್ ಅಮೀನ್ ಪೂನಾವಾಲಾ ಪರಿಚಯವಾಯಿತು. ಮೊದಲು ಗೆಳೆತನವಿತ್ತು ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಧರ್ಮವೂ ಬೇರೆಯಾದ್ದರಿಂದ ಇಬ್ಬರ ಸಂಬಂಧಿಕರು ಈ ಸಂಬಂಧವನ್ನು ಒಪ್ಪಲಿಲ್ಲ. ಇಬ್ಬರೂ ಮನೆ ಬಿಟ್ಟು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸ ಆರಂಭಿಸಿದ್ದಾರೆ.


ಇದನ್ನೂ ಓದಿ : ಶ್ರದ್ಧಾ ರುಂಡವನ್ನು ಅಫ್ತಾಬ್ ದಿನವೂ ನೋಡುತ್ತಿದ್ದ : ಹೇಗಿತ್ತು ಆ ಕರಾಳರಾತ್ರಿ...!


ಮೊದಲು ಇಬ್ಬರೂ ನಯಾ ಗಾಂವ್‌ನಲ್ಲಿ ಮತ್ತು ನಂತರ ವಸಾಯಿಯಲ್ಲಿ ವಾಸಿಸುತ್ತಿದ್ದರು, ಆದರೆ ಶ್ರದ್ಧಾ ಅವರ ತಾಯಿ ನಿಧನರಾದಾಗ, ಅವರು 2020 ರಲ್ಲಿ ಮನೆಗೆ ಮರಳಿದರು. ಅಫ್ತಾಬ್ ತನ್ನನ್ನು ಹೊಡೆಯುತ್ತಾನೆ ಎಂದು ತಂದೆ ಬಳಿ ಶ್ರದ್ದಾ ಹೇಳಿದ್ದರಂತೆ. ಆಗ ತಂದೆ ಮಗಳನ್ನು ಮನೆಯಲ್ಲೇ ಇರುವಂತೆ ಹೇಳಿದ್ದರಂತೆ. ಆದರೆ ಅಫ್ತಾಬ್ ನಂತರ ಶ್ರದ್ಧಾಗೆ ಕ್ಷಮೆಯಾಚಿಸಿದರಂತೆ. ಆ ಬಳಿಕ ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರಂತೆ.


ಪೊಲೀಸ್ ಮೂಲಗಳ ಪ್ರಕಾರ, ಇದಾದ ನಂತರ ಶ್ರದ್ಧಾ ಮತ್ತು ಅಫ್ತಾಬ್ ಮೇ 2022 ರಲ್ಲಿ ದೆಹಲಿಗೆ ಶಿಫ್ಟ್‌ ಆಗಿದ್ದಾರೆ. ನಂತರ ತಂದೆ ಕೂಡ ಮಗಳೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರಂತೆ. ಆದರೆ ಇತರರಿಂದ ಆಕೆಯ ಬಗ್ಗೆ ವಿಚಾರಿಸುತ್ತಿದ್ದರು. ಸೆಪ್ಟೆಂಬರ್‌ನಲ್ಲಿ, ಶ್ರದ್ಧಾ ಇದ್ದಕ್ಕಿದ್ದಂತೆ ಯಾರ ಫೋನ್‌ ಕಾಲ್‌ಗೂ ಸಿಗದಿದ್ದಾಗ, ತಂದೆ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದರು.


ಸಿಕ್ಕಿರುವ ಮಾಹಿತಿಯ ಪ್ರಕಾರ, ಶ್ರದ್ಧಾ ಮತ್ತು ಅಫ್ತಾಬ್ ಮೇ 8 ರಂದು ದೆಹಲಿ ತಲುಪಿದ್ದರು ಮತ್ತು ಪಹರ್‌ಗಂಜ್‌ನ ಹೋಟೆಲ್‌ನಲ್ಲಿ ಒಂದು ದಿನ ತಂಗಿದ್ದರು. ನಂತರ ಸೈದುಲಜಾಬ ಪ್ರದೇಶದ ಹಾಸ್ಟೆಲ್‌ನಲ್ಲಿ ತಂಗಿದ್ದರು. ನಂತರ ಮೆಹ್ರೌಲಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಮೇ 15 ರಂದು ಅಲ್ಲಿಗೆ ಶಿಫ್ಟ್‌ ಆದರು. ಅಫ್ತಾಬ್ ಅವರೇ ಮೊದಲು ಮೆಹ್ರೌಲಿಯ ಮನೆಗೆ ತೆರಳಿ ಮರುದಿನ ಶ್ರದ್ಧಾ ಅವರನ್ನು ಕರೆತಂದರು. ಇದರ ಮೂರು ದಿನಗಳ ನಂತರ ಶ್ರದ್ಧಾ ಕೊಲೆ ನಡೆದಿದೆ. ಕ್ರೂರ ಕೊಲೆಗಾರ ಅಫ್ತಾಬ್ ಅಮೀನ್ ಪೂನಾವಾಲಾಗೆ 28 ​​ವರ್ಷ, ಶ್ರದ್ಧಾಗೆ 25 ವರ್ಷ. ಅಫ್ತಾಬ್ ತಂದೆಯ ಹೆಸರು ಅಮೀನ್ ಪೂನಾವಾಲಾ. ಅವರು ಪಶ್ಚಿಮ ಮುಂಬೈನ ವಸಾಯಿಯ ನ್ಯೂ ದಿವಾನ್ ಮ್ಯಾನ್‌ನ ಯುನಿಕ್ ಪಾರ್ಕ್‌ನ ನಿವಾಸಿಯಾಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.