ಬೆಂಗಳೂರು : ಸಾರ್ವಜನಿಕರು ಪೊಲೀಸರ ಮೇಲೆ ಒಂದಿಲ್ಲೊಂದು ಆರೋಪವನ್ನು ಮಾಡುತ್ತಲೇ ಇದ್ದಾರೆ. ಇದಕ್ಕೆ ಕಾರಣ ಕೆಲ ಪೊಲೀಸರ ಕಾರ್ಯವೈಖರಿಯೂ ಕಾರಣವಾಗಿದೆ. ಖಾಕಿ ಮೇಲೆ ಅನೇಕ ಬಾರಿ ಹಣ ವಸೂಲಿ, ಅನುಚಿತ ವರ್ತನೆಯ ಆರೋಪ ಕೇಳಿ ಬಂದಿವೆ. 


COMMERCIAL BREAK
SCROLL TO CONTINUE READING

ಸದ್ಯ ಠಾಣೆಗೆ ದೂರು ಕೊಡಲು ಹೋದ ವ್ಯಕ್ತಿಯನ್ನು ನೋಡಿ ಪೊಲೀಸರು ನಕ್ಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಂಜುನಾಥ್ ಎಂಬುವವರು ಈ ಬಗ್ಗೆ ಟ್ವೀಟ್ ಮಾಡಿದ್ದು, ನಮ್ಮ ಸೈಕಲ್ ಕಳ್ಳತನವಾಗಿತ್ತು. 


ಇದನ್ನೂ ಓದಿ : ಚುನಾವಣೆಗಾಗಿ ಎರಡು ತಿಂಗಳಲ್ಲಿ ಸುಮಾರು 7 ಸಾವಿರ ರೌಡಿಗಳಿಗೆ ಮುಕ್ತಿ!


ಈ ಹಿನ್ನೆಲೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದೆ. ಆದರೆ ಠಾಣೆಯಲ್ಲಿ ಯಾವೊಬ್ಬ ಪೊಲೀಸರು ಇರಲಿಲ್ಲ‌. ಇದರ ಹೊರತಾಗಿ ದೂರು ತೆಗೆದುಕೊಳ್ಳಲು ರೈಟರ್ ಸಹ ಇರಲಿಲ್ಲ ಎಂದು ದೂರಿದ್ದಾರೆ. ನಾನು 45 ನಿಮಿಷ ಪೊಲೀಸ್ ಠಾಣೆಯಲ್ಲಿ ಕಾದ ಕುಳಿತ್ತಿದ್ದೆ.‌ನಂತರ ಪೊಲೀಸರು ಬಂದಾಗ ನಮ್ಮ  ಸೈಕಲ್ ಕಳ್ಳತನವಾಗಿದೆ ದೂರು ತೆಗೆದುಕೊಳ್ಳಿ ಎಂದೆ. ಆದರೆ ಪೊಲೀಸರು ಇದು ಸಣ್ಣ ಕೇಸ್ ಎಂಬತೆ ನನ್ನನ್ನು ನೋಡಿ ನಕ್ಕರು ಎಂದು ಮಂಜುನಾಥ್ ಪೊಲೀಸರ ವಿರುದ್ಧ ಆರೋಪಿಸಿ ಟ್ವೀಟ್ ಮಾಡಿದ್ದಾರೆ. 


[[{"fid":"285715","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಟ್ವೀಟ್ ಗೆ ಸಾಕಷ್ಟು ಮಂದಿ ರಿಟ್ವೀಟ್ ಮಾಡಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಪೊಲೀಸರ ನಿರ್ಲಕ್ಷ್ಯದ ಆರೋಪದ ಬಗ್ಗೆ  ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ.


ಇದನ್ನೂ ಓದಿ : ಪರಿಸರ ಸ್ನೇಹಿ ವೇದಿಕೆ ಪರಿಕಲ್ಪನೆ; ವಿಲೇವಾರಿ ಮಾಡಬಹುದಾದ ರೂ.14 ಲಕ್ಷ ಮೊತ್ತದ ಪ್ಲಾಸ್ಟಿಕ್ ವಸ್ತುಗಳ ಬಳಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.