ಹೌದು.. ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರೋ ಕಾರಿನಲ್ಲಿ ಮೂವರ ಶವ ಪತ್ತೆಯಾದ ದುರ್ಘಟನೆ ನಿನ್ನೆ ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯಲ್ಲಿ ನಡೆದಿತ್ತು..ಕೆಎ 43 ರಿಜೆಸ್ಟ್ರೀಷನ್ ನಂಬರಿನ ಮಾರುತಿ ಎಸ್ಪ್ರೆಸ್ಸೊ ಕಾರು ಕೆರೆ ಅಂಗಳದಲ್ಲಿ ನಿಗೂಡವಾಗಿ ನಿಂತಿದ್ದು,ಜನರು ಹತ್ತಿರ ತೆರಳಿದಾಗ ಮೂವರ ಶವ ಕಾರಿನೊಳಗೆ ಇರೋದು ಪತ್ತೆಯಾಗಿತ್ತು..ಬಳಿಕ ಕೋರಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕೇಸು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ್ದರು..ಕೇಸು ದಾಖಲಾದ ಒಂದೇ ದಿನದಲ್ಲಿ ಬಹುತೇಕ ಪ್ರಕರಣವನ್ನ ಭೇದಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ..


COMMERCIAL BREAK
SCROLL TO CONTINUE READING

 ಕಾರಿನ ರಿಜಿಸ್ಟ್ರೇಷನ್ ನಂಬರ್ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು..ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ..ನಿನ್ನೆ ಸಿಕ್ಕ ಶವಗಳು ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ (45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ (56), ಶಿರ್ಲಾಲ್ ಗ್ರಾಮದ ನಿವಾಸಿ ಇಮ್ತಿಯಾಜ್ (34), ಅವರದ್ದು ಎನ್ನಲಾಗಿದ್ದು ಬಂಗಾರದ ಆಸೆಗೆ ಬಿದ್ದು ಹಣ ತಂದ ಈ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ..


ಇದನ್ನೂ ಓದಿ-ಟೊಯೊಟಾ ಗ್ರೇಟರ್ ಬೆಂಗಳೂರು ಬಿಡದಿ ಹಾಫ್ ಮ್ಯಾರಥಾನ್ 2024: ರೇಸ್ ಡೇ ತಯಾರಿ


 ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ,ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ಈ ಮೂವರನ್ನ ಆರೋಪಿಗಳು ಕರೆಸಿಕೊಂಡಿದ್ದಾರೆ..ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಅನ್ನೋ ಆಸೆಗೆ ದಕ್ಷಿಣ ಕನ್ನಡ ಜಿಲ್ಲೆ  ಬೆಳ್ತಂಗಡಿಯಿಂದ ತುಮಕೂರಿಗೆ ಮೂವರು ಬಂದಿದ್ದು,ಚಿನ್ನ ಖರೀದಿಗೆ ಅಂತಾ ತಂದಿದ್ದ ಸುಮಾರು 50 ಲಕ್ಷದಷ್ಟು ಹಣವನ್ನ ದೋಚಲು ಆರೋಪಿಗಳು ಮೂವರನ್ನ ಕೊಲೆಗೈದಿದ್ದಾರೆ ಎನ್ನಲಾಗಿದೆ..ಚಿನ್ನ ಖರೀದಿಗೆ ಅಂತಾ ಬಂದ ಮೂವರಿಗೂ ನಕಲಿ ಚಿನ್ನ ತೋರಿಸಿ ಬಳಿಕ ಅವರ ಬಳಿ ಇದ್ದ ಹಣ ದೋಚಲು ಆರೋಪಿಗಳು ಪಕ್ಕಾ ಪ್ಲಾನ್ ಮಾಡಿ ಕೊಲೆಗೈದಿದ್ದಾರೆ ಎನ್ನಲಾಗಿದೆ.ಮೂವರನ್ನು ಹೊಡೆದು ಕೈ ಕಾಲು ಕಟ್ಟಿ ಹಾಕಿ,ಕಾರಿನ ಡಿಕ್ಕಿಗೆ ಇಬ್ಬರ ಮೃತದೇಹ ಹಾಗೂ ಕಾರಿನ ಮಧ್ಯಭಾಗದ ಸೀಟಿನಲ್ಲಿ ಒಬ್ಬನ ಮೃತದೇಹ ಇಟ್ಟು ಬಳಿಕ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ..


ಇದನ್ನೂ ಓದಿ-Lok sabha Election 2024: ಲೋಕಸಭಾ ಚುನಾವಣೆಯ ನಂತರ ಬದಲಾಗ್ತಾರಾ ಸಿಎಂ?


 ರಿಯಲ್ ಎಸ್ಟೇಟ್ ಕೆಲಸ ಮಾಡ್ತಿದ್ದ ಮೃತ ಇಸಾಕ್,ಒಂದು ಡೀಲ್ ಇದೆ ಬಾ ಅಂತ ಸ್ನೇಹಿತನ ಕಾರು ಪಡೆದುಕೊಂಡಿದ್ದ,ತನ್ನ ಜೊತೆ ಆಟೋ ಚಾಲಕ ಸಾಹುಲ್ ಅಮೀದ್, ಹಾಗೂ ಫುಟ್ ವೇರ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಇಮ್ಮಿಯಾಜ್ ಸಿದ್ದಿಕ್ ನನ್ನ ಜೊತೆಯಲ್ಲಿ ಕರೆತಂದಿದ್ದರು.ಕಳೆದ 11 ದಿನಗಳ ಹಿಂದೆ ತುಮಕೂರಿನಲ್ಲಿ ಒಂದು ಡೀಲ್ ಇದೆ ಬನ್ನಿ ಅಂತ ಬೆಳ್ತಂಗಡಿಯಿಂದ ಮೂವರು ಬಂದಿದ್ದರು,,ತುಮಕೂರು ಮೂಲದ ಸ್ವಾಮಿ ಎಂಬಾತನ ಪರಿಚಯದ ಮೂಲಕ ತುಮಕೂರಿಗೆ ಬಂದಿದ್ದರು..ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದ ಇಸಾಕ್,ಬಳಿಕ ಗುರುವಾರ ರಾತ್ರಿ ಇಸಾಕ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು.. ಶುಕ್ರವಾರ ಮಧ್ಯಾಹ್ನದ ವೇಳೆಗೆ ಕೊಲೆ ಪ್ರಕರಣ ಬಯಲಾಗಿತ್ತು..


 ಪೊಲೀಸರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಮೃತರ ಸಂಬಂಧಿಕರಿಗೆ ಅಸಲಿ ಸತ್ಯ ತಿಳಿದಿದೆ..ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಸ್ವಾಮಿ ಸೇರಿ ಒಟ್ಟು 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ..ಇನ್ನು ತನಿಖೆ ಮುಂದುವರೆದಿದ್ದು,ಸಂಪೂರ್ಣ ಮಾಹಿತಿ ಪೊಲೀಸರ ತನಿಖೆ ಬಳಿಕತಿಳಿದುಬರಲಿದೆ..ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿದಿದ್ದು,ಡಿಎನ್ಎ,ಎಫ್ಎಸ್ಎಲ್ ವರದಿ ಬಂದ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನ ಹಸ್ತಾಂತರ ಮಾಡಲಿದ್ದಾರೆ..ಚಿನ್ನದ ಆಸೆಗಾಗಿ ಹಣ ತಂದು ಬಂದ ಮೂವರೂ ಹೀಗೆ ಭೀಕರವಾಗಿ ಕೊಲೆಯಾಗಿರೋದು ಮಾತ್ರ ದುರ್ದೈವವೇ ಸರಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.