ಬೆಂಗಳೂರು: ಶಾಂತಿನಗರದ ಜೈನ ಮಂದಿರದಲ್ಲಿ ಟೈಲ್ಸ್ ಕೆಲಸಕ್ಕೆ ಬಂದು ಮಂದಿರದಲ್ಲಿದ್ದ ಸುಮಾರು 10 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದ ರಾಜಸ್ತಾನ ಮೂಲದ ನಾಲ್ವರನ್ನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೆಲ ತಿಂಗಳ ಹಿಂದೆ ಟೈಲ್ಸ್ ಕೆಲಸಕ್ಕೆ ಜೋಶಿರಾಮ್ ಹಾಗೂ ಗೋವಿಂದ ಕುಮಾರ್, ರಾಜೇಂದ್ರ ಕುಮಾರ್, ಪ್ರವೀಣ್ ಶಾಂತಿನಗರದ ಜೈನ್ ಟೆಂಪಲ್  ಗೆ ಬಂದಿದ್ದರು. ಟೈಲ್ಸ್ ಕೆಲಸ‌ ಮುಗಿಸಿಕೊಂಡ ಆರೋಪಿಗಳು ಜೈನಮಂದಿರದಲ್ಲಿ ಅಳವಡಿಸಲಾಗಿದ್ದ ಬೆಳ್ಳಿ ಆಭರಣಗಳನ್ನ‌ ಕಂಡು ಹಳೆಯ ಕಾಲದ ಆಭರಣವಾಗಿದ್ದು, ಹೆಚ್ಚು ಬೆಲೆಬಾಳಲಿದೆ ಎಂದು ಭಾವಿಸಿದ್ದರು.  


ಇದನ್ನೂ ಓದಿ: ಕಾವೇರಿ ಕಿಚ್ಚು: ಟಿಶ್ಯೂ ಪೇಪರ್ ಹಿಡಿದು ಆಕ್ರೋಶ ಹೊರಹಾಕಿದ ಹೋರಾಟಗಾರರು!! 


ಎರಡು ತಿಂಗಳ ಬಳಿಕ ವ್ಯವಸ್ಥಿತ ಸಂಚು ರೂಪಿಸಿ ಇತ್ತೀಚಿಗೆ ತಮ್ಮ ಕೈಚಳಕ ತೋರಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ‌ ಪೊಲೀಸರು ಸಿಸಿಟಿವಿ ಸೇರಿದಂತೆ‌ ಇನ್ನಿತರ ಸಾಕ್ಷ್ಯಧಾರಗಳನ್ನು ಆಧರಿಸಿ ತನಿಖೆ ನಡೆಸಿದಾಗ ಟೈಲ್ಸ್ ಹಾಕಲು ಬಂದಿದ್ದ ಕಾರ್ಮಿಕರೇ ಕಳ್ಳರು ಎಂದು ಖಚಿತವಾಗಿತ್ತು. 


ಬಂಧನ ಭೀತಿಯಿಂದ ಆರೋಪಿಗಳು ಕಳ್ಳತನ ಮಾಡಿ ರಾಜಸ್ತಾನಕ್ಕೆ ಎಸ್ಕೇಪ್ ಆಗಿ ಬೆಳ್ಳಿ ಆಭರಣಗಳನ್ನ‌ ಮಣ್ಣಿನಲ್ಲಿ ಹೂತ್ತಿಟ್ಟಿದ್ದರು. ಹೀಗಾಗಿ ರಾಜಸ್ತಾನಕ್ಕೆ ತೆರಳಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿತರಿಂದ 9.70 ಲಕ್ಷ ಮೌಲ್ಯದ 14 ಕೆ.ಜಿ ತೂಕದ 9 .70 ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ: ಸಂತೋಷ ಕೂಟದ ದಾಳಕ್ಕೆ ಲಿಂಗಾಯತ ನಾಯಕರು ಅಬ್ಬೇಪಾರಿಗಳಂತಾಗಿದ್ದಾರೆ: ಕಾಂಗ್ರೆಸ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.