ಬೆಂಗಳೂರು: ನಟಿ‌ ಮಾಲಾಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು‌ ಕಾಲದಲ್ಲಿ ಹೀರೋ ರೇಂಜಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಒಂದು ಕಾಲದಲ್ಲಿ ನಟಿ ಮಾಲಾಶ್ರೀಯ ಮೇಕಪ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಬೀಗ ಹಾಕಿದ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡಿ ಸದ್ಯ ಬೇಗೂರು ಪೊಲೀಸರ ಅತಿಥಿಯಾಗಿದ್ದಾನೆ‌‌.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Miss Universe 2022 : ಯುಸ್‌ನ ಚೆಲುವೆಯ ಮುಡಿಗೆ ಭುವನ ಸುಂದರಿ ಕಿರೀಟ, ಭಾರತದ ದಿವಿತಾ ರೈಗೆ ನಿರಾಸೆ


ನವಾಜ್ ಷರೀಫ್‌ ಬಂಧಿತ ಚೋರನಾಗಿದ್ದು ಈತನಿಂದ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಸುಮಾರು 25 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಪ್ರತಿ ಬಾರಿಯು ಜಾಮೀನು ಪಡೆದು ಹೊರಬಂದಾಗಲೆಲ್ಲ ಮತ್ತೆ ಹಳೆ ಚಾಳಿ ಮುಂದುವರೆಸಿದ್ದ. ವೃತ್ತಿಪರ ಖದೀಮನ ವಿರುದ್ಧ ಬೇಗೂರು ಠಾಣೆಯಲ್ಲಿ 10 ಸೇರಿದಂತೆ‌ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 27 ಕನ್ನ ಕಳವು ಪ್ರಕರಣ ದಾಖಲಾಗಿವೆ. ಕಳೆದ ಆರು ತಿಂಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ಕಳ್ಳತನ ಕೃತ್ಯದಲ್ಲಿ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದರು. ಕಳೆದ ಎರಡು ತಿಂಗಳ ಹಿಂದೆ ಜಾಮೀನು‌ ಪಡೆದು ಹೊರ ಬಂದಿದ್ದ‌ ನವಾಜ್, ಮತ್ತೆ ಕಳ್ಳತನ‌ ಕೃತ್ಯಗಳನ್ನ ಎಸಗುತ್ತಿದ್ದ. ಬೀಗ ಹಾಕಿದ್ದ ಸಣ್ಣಪುಟ್ಟ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಯ ಹೂ ಕುಂಡ, ಕಿಟಕಿಯಲ್ಲಿ  ಕೀಯನ್ನು ಇರುವುದನ್ನು ಅರಿತು ಸುಲಭವಾಗಿ ಒಳನುಗ್ಗಿ ನಗ-ನಾಣ್ಯ ದೋಚುತ್ತಿದ್ದ‌‌. ಕದ್ದ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಇಸ್ಟೀಟ್ ಅಡುವುದು ಹಾಗೂ ಮದ್ಯಪಾನ ಮಾಡಿ ಎಂಜಾಯ್ ಮಾಡುತ್ತಿದ್ದ.  56 ವರ್ಷದ ನವಾಜ್ ಕ್ರಿಮಿನಲ್‌ ಹಿನ್ನೆಲೆ ಕಂಡು ಮನೆಯವರು ದೂರ ತಳ್ಳಿದ್ದರು. ನವಾಜನ್‌ನನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 25 ವರ್ಷಗಳ ಹಿಂದೆ ನಟಿ ಮಾಲಾಶ್ರೀಗೆ ಮೆಕಪ್‌ ಮೆನ್ ಆಗಿದ್ದೆ ಎಂದಿದ್ದಾನೆ. ನಿಖರವಾಗಿ ಇಂತಹ ಚಿತ್ರಗಳಲ್ಲಿ ಮಾಲಾಶ್ರೀ ಮೆಕಪ್‌ ಮೆನ್ ಆಗಿರುವ ಬಗ್ಗೆ ಆರೋಪಿ ಮರೆತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ


ಈ ಬಗ್ಗೆ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ನಿರಂತರವಾಗಿ ಕಳ್ಳತನ‌ ಕೃತ್ಯ ಎಸಗುತ್ತಿದ್ದ ಚೋರನನ್ನ ಬಂಧಿಸಿ 350 ಗ್ರಾಂ ಚಿನ್ನಾಭರಣ ವಶಕ್ಕೆ‌ ಪಡೆದುಕೊಳ್ಳಲಾಗಿದೆ. ಬೇಗೂರು ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ‌ ಸುಮಾರು 27 ಕೇಸ್ ಗಳು ದಾಖಲಾಗಿವೆ. ಒಂಟಿ ಮನೆಯನ್ನು ಟಾರ್ಗೆಟ್ ಮಾಡಿಕೊಂಡ ಹಾಡಹಗಲೇ ಕಳ್ಳತನ‌ ಮಾಡುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದಿದ್ದಾರೆ‌.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.