ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಲಕ್ಷ ಲಕ್ಷ ದೋಚಿದ ಖದೀಮರು..!
ವ್ಯಕ್ತಿಯೊಬ್ಬರು ಮನೆಯ ಇಎಂಐ ಕಟ್ಟಲು ತಂದಿದ್ದ 4.5 ಲಕ್ಷ ರೂಪಾಯಿ ಹಣವನ್ನ ನಗರ ಪೊಲೀಸ್ ಆಯುಕ್ತರ ಕಚೇರಿಯ ಬಳಿಯೇ ಕಾರಿನ ಗ್ಲಾಸ್ ಒಡೆದು ಖದೀಮರು ದೋಚಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಲಕ್ಷ್ಮೀಶ್ ಎಂಬುವವರು ಮಹದೇವಪುರದ ಕೆನರಾ ಬ್ಯಾಂಕ್‌ಗೆ ಹಣ ಕಟ್ಟಲು ಹೋಗಿದ್ದರು.
ಬೆಂಗಳೂರು: ಕಳ್ಳಕಾಕರಿಗೆ ಪೊಲೀಸರ ಭಯವಿಲ್ವಾ ಎಂಬ ಅನುಮಾನ ಶುರುವಾಗಿಬಿಟ್ಟಿದೆ. ನಗರದಲ್ಲಿ ಸರಗಳ್ಳತನ ಹಾಗೂ ಮೊಬೈಲ್ ಕಳ್ಳತನ ಮಾಡೋದು ಮಾಮೂಲಿಯಾಗಿದೆ. ಆದರೆ ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಕಳ್ಳರು ಕೈಚಳಕ ತೋರಿರುವ ಘಟನೆ ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬರು ಮನೆಯ ಇಎಂಐ ಕಟ್ಟಲು ತಂದಿದ್ದ 4.5 ಲಕ್ಷ ರೂಪಾಯಿ ಹಣವನ್ನ ನಗರ ಪೊಲೀಸ್ ಆಯುಕ್ತರ ಕಚೇರಿಯ ಬಳಿಯೇ ಕಾರಿನ ಗ್ಲಾಸ್ ಒಡೆದು ಖದೀಮರು ದೋಚಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಲಕ್ಷ್ಮೀಶ್ ಎಂಬುವವರು ಮಹದೇವಪುರದ ಕೆನರಾ ಬ್ಯಾಂಕ್‌ಗೆ ಹಣ ಕಟ್ಟಲು ಹೋಗಿದ್ದರು. ಆದರೆ ಕೌಂಟರ್ ಬಳಿ ಹಣ ಪಾವತಿಸುವಾಗ ಪ್ಯಾನ್ ಕಾರ್ಡ್ ಮರೆತು ಬಂದಿರುವುದು ಗೊತ್ತಾಗಿದೆ. ಹೀಗಾಗಿ ಹಣ ತರಲು ಮನೆಗೆ ತೆರಳಬೇಕಾಗುತ್ತೆ. ಮಾರ್ಗ ಮಧ್ಯೆ ಪರಿಚಯಸ್ಥರನ್ನ ಭೇಟಿಯಾಗಲು ಪೊಲೀಸ್ ಆಯುಕ್ತರ ಕಚೇರಿಗೆ ಬಂದಿರುತ್ತಾರೆ. ಈ ವೇಳೆ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಹಣ ಇಟ್ಟಿದ್ರು.
ಇದನ್ನು ಓದಿ: ಇದು ಮೊದಲ ಸೀಸನ್, 9ನೇಯದ್ದಲ್ಲ! ಬಿಗ್ ಬಾಸ್ ಒಟಿಟಿ ಪ್ರೀಮಿಯರ್ ದಿನಾಂಕ ಪ್ರಕಟ
ಲಕ್ಷ್ಮೀಶ್ ಅವರನ್ನು ಮಹದೇವಪುರದಿಂದ ಓಜಿ ಕುಪ್ಪಂ ಗ್ಯಾಂಗ್‌ನ ನಾಲ್ವರು ಖದೀಮರು ಕಮೀಷನರ್ ಕಚೇರಿ ಬಳಿವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಲಕ್ಷ್ಮೀಶ್ ಕಾರಿನಲ್ಲಿ ಹಣ ಇಟ್ಟಿರುವುದನ್ನು ಪಕ್ಕಾ ಮಾಡಿಕೊಂಡಿದ್ದಾರೆ. ಬಳಿಕ ಕಾರಿನ ಗಾಜು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ಇನ್ನು ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: Mutual Funds Trick: ಕೇವಲ 167 ರೂ. ಉಳಿಸಿ & 11.33 ಕೋಟಿ ರೂ. ಪಡೆಯಿರಿ
ಆದರೆ ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಕಳ್ಳರು ಯಾರ ಭಯವಿಲ್ಲದೇ ಹಣ ದೋಚಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳ್ಳತನವಾಗಿ ಮೂರು ದಿನವಾದ್ರೂ ಸಹ ಖದೀಮರನ್ನು ಪೊಲೀಸರು ಬಂಧಿಸಿಲ್ಲ. ಸದ್ಯ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಓಜಿ ಕುಪ್ಪಂ ಗ್ಯಾಂಗ್ ಸದಸ್ಯರನ್ನು ಬಂಧಿಸಲು ಬಲೆ ಬೀಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.