ಬೆಂಗಳೂರು: ಜನರು ರೆಸ್ಟೋರೆಂಟ್, ಕೆಫ್ ಪಬ್‌ಗಳಿಗೆ ಊಟ ಮಾಡೋಕೊ, ಪಾರ್ಟಿ ಮಾಡೋಕೊ ಹೋಗ್ತಾರೆ. ಆಗ ಶೌಚಾಲಯಗಳನ್ನ ಬಳಸೋದು ಸರ್ವೇ ಸಾಮಾನ್ಯ. ಇಂತಹ ಶೌಚಾಲಯದಲ್ಲಿ ಯಾರಿಗೂ ಗೊತ್ತಾಗಂತೆ ಮೊಬೈಲ್ ಇಟ್ಟು ಹುಡುಗಿಯರ ಖಾಸಗಿ ಕ್ಷಣ ಚಿತ್ರಿಕರಣ ಮಾಡ್ತಾರೆ.‌.  


COMMERCIAL BREAK
SCROLL TO CONTINUE READING

ಹೌದು.. ಮಹಿಳೆಯರ ಶೌಚಾಲಯದ ಕಸದಲ್ಲಿ ಮೊಬೈಲ್ ಪತ್ತೆಯಾಗಿದ್ದು ಈ ಮೊಬೈಲ್ ನಲ್ಲಿ 2 ಗಂಟೆಗಳ ವೀಡಿಯೊ ರೆಕಾರ್ಡಿಂಗ್ ಸಿಕ್ಕಿದೆ. ದೊಡ್ಡ ಹೋಟೆಲ್‌ಗಳು ಮತ್ತು ಕೆಫೆಗಳಲ್ಲಿ ವಿಶ್ರಾಂತಿ ಕೊಠಡಿಯನ್ನು ಬಳಸುವ ಮೊದಲು ನೂರು ಬಾರಿ ಯೋಚಿಸಿ. ಏಕೆಂದರೆ ನಿಮ್ಮ ವೀಡಿಯೊ ನಿಮಗೆ ತಿಳಿಯದೆ ರೆಕಾರ್ಡ್ ಆಗಬಹುದು. ಸದ್ಯ ಇಂಥದ್ದೊಂದು ಘಟನೆ ರಾಜಧಾನಿಯ ಪ್ರಸಿದ್ಧ ಕಾಫಿ ಶಾಪ್‌ನಲ್ಲಿ ನಡೆದಿದೆ. 


ಇದನ್ನೂ ಓದಿ:ತುಂಗಭದ್ರಾ ನದಿಗೆ ಹರಿದು ಬರುತ್ತಿದೆ ಅಪಾರ ಪ್ರಮಾಣದ ನೀರು


ಕೆಲ ಕಿಡಿಗೇಡಿಗಳ ಕೃತ್ಯದಿಂದ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಹೋಟೆಲ್, ಕಾಫಿ ಶಾಪ್, ಶಾಪಿಂಗ್ ಮಾಲ್, ಟ್ರಯಲ್ ರೂಮ್‌ನಿಂದ ವಾಶ್‌ರೂಮ್‌ವರೆಗೆ ಹಿಡನ್ ಕ್ಯಾಮೆರಾ ಬಳಸಿ ಮಹಿಳೆಯರ ವಿಡಿಯೋ ತೆಗೆಯುವ ಗ್ಯಾಂಗ್‌ಗಳಿವೆ. 


ನಗರದ ಬಿಇಎಲ್ ರಸ್ತೆಯಲ್ಲಿರುವ ಪ್ರಸಿದ್ಧ ಥರ್ಡ್ ವೇವ್ ಕಾಫಿ ಕೆಫೆಯ ಲೇಡೀಸ್ ವಾಶ್‌ರೂಮ್‌ನ ಡಸ್ಟ್‌ಬಿನ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಸುಮಾರು 2 ಗಂಟೆಗಳ ಕಾಲ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ದಾಖಲಾಗಿದೆ. ಥರ್ಡ್ ವೇವ್ ಕಾಫಿ ಕೆಫೆಯ ಉದ್ಯೋಗಿಗಳು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. 


ಇದನ್ನೂ ಓದಿ: ಕೊಚ್ಚಿ ಹೋದ ತುಂಗಭದ್ರಾ ಜಲಾಶಯದ ಗೇಟ್,ತ್ವರಿತ ಕ್ರಮಕ್ಕೆ ಸೂಚನೆ


‘ಗ್ಯಾಂಗ್ಸ್ ಆಫ್ ಸಿನಿಪುರ’ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಫೆ ಸಿಬ್ಬಂದಿ ತಮ್ಮ ಅನುಭವ ಹಂಚಿಕೊಂಡಿದ್ದು, ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಬಚ್ಚಿಟ್ಟು ಸುಮಾರು ಎರಡು ಗಂಟೆಗಳ ಕಾಲ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಥರ್ಡ್ ವೇವ್ ಕಾಫಿ ಕೆಫೆಗೆ ಹೋಗಿದ್ದೆ. ಟಾಯ್ಲೆಟ್ ಸೀಟ್ ಎದುರಿನ ಕಸದ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ಪತ್ತೆಯಾಗಿದೆ. 


ಫೋನ್ ಫ್ಲೈಟ್ ಮೋಡ್‌ನಲ್ಲಿದ್ದುದರಿಂದ ಯಾರೂ ಅದನ್ನು ಗಮನಿಸಿರಲಿಲ್ಲ. ಕಸದ ಬುಟ್ಟಿಗೆ ಸಣ್ಣ ರಂಧ್ರ ಮಾಡಿ, ಫೋನ್ ಇಟ್ಟು ಕ್ಯಾಮೆರಾ ಆನ್ ಮಾಡಲಾಗಿದೆ. ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಫೋನ್ ಇರುವುದು ಕೂಡ ಬೆಳಕಿಗೆ ಬಂದಿದೆ. ತಕ್ಷಣ ಈ ವಿಚಾರವನ್ನ ಮಹಿಳೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರಿಂದ ಮೊಬೈಲ್ ಇಟ್ಟಿದ್ದ ಸಿಬ್ಬಂದಿ ಗುರುಸಿತಿ ವಶಕ್ಕೆ ಪಡೆದಿದ್ದಾರೆ. 


ಇದನ್ನೂ ಓದಿ: ತುಂಗಭದ್ರಾ ಡ್ಯಾಂನ ಕ್ರಸ್ಟ್‌ ಗೇಟ್​ ಚೈನ್ ಲಿಂಕ್ ಕಟ್... ನದಿ ಪಾತ್ರದ ಜನರಿಗೆ ಎಚ್ಚರಿಕೆ!


ಶಿವಮೊಗ್ಗ ಮೂಲದ ಮನೋಜ್, 23 ವರ್ಷ, ಬಂಧಿತ ಆರೋಪಿಯಾಗಿದ್ದು, ಮನೋಜ್ ಕಾಫಿ ಶಾಪ್ ನಲ್ಲಿ ಕಾಫಿ ಮೇಕರ್ ಆಗಿದ್ದು, ಸದಾಶಿವನಗರ ವಿಚಾರಣೆ ನಡೆಸಿದ್ದಾರೆ. ಇನ್ನೂ ಘಟನೆ ಬಗ್ಗೆ ಕ್ಷಮೆ ಕೇಳಿ, ಸಿಬ್ಬಂದಿಯನ್ನ ಥರ್ಡ್ ವೇವ್ ಕೆಫೆ ವಜಾ ಮಾಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.