ಬೆಂಗಳೂರು: ಭಾರತದ ಬೇಹುಗಾರಿಕಾ ಅಧಿಕಾರಿ ಮಾಸ್ಟರ್ ಮೈಂಡ್ ಅಜಿತ್ ದೋವಲ್ ನೀಡಿದ ಮಾಹಿತಿಯಿಂದ ಪಿಎಫ್ಐ  ಬ್ಯಾನ್ ಆಯ್ತ ಎಂಬ ಮಾಹಿತಿ ಲಭಿಸಿದೆ. 247 ಪಿಎಫ್ ಐ ಮುಖಂಡರ ಬಂಧನದ ಹಿಂದೆ ಅಜಿತ್ ದೋವಲ್ ಅವರ ವಿದೇಶಿ ಭೇಟಿ ಅಡಗಿದೆ ಎಂಬ ವಿಚಾರಗಳು ಗೊತ್ತಾಗಿವೆ. ಅಜಿತ್ ದೋವಲ್ ಇತ್ತೀಚೆಗೆ ರಷ್ಯಾಗೆ ಕೆಲ ರಾಜತಾಂತ್ರಿಕ ವಿಚಾರ ಸಂಬಂಧ ತೆರಳಿದ್ದರು. ಇದೇ ವೇಳೆ ಟರ್ಕಿ ಮೂಲದ ವ್ಯಕ್ತಿಯೊಬ್ಬ ರಷ್ಯಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ಭಾರತದ ಹಲವು ಪೊಲಿಟಿಷಿಯನ್ಸ್ ಹಾಗೂ ಹಿಂದೂ‌ ಮುಖಂಡರನ್ನ ಹತ್ಯೆ ಮಾಡಲು ಪ್ಲ್ಯಾನ್ ರೂಪಿಸಲಾಗಿದ್ದ ಮಾಹಿತಿ ಹೊರಬಿದ್ದಿತ್ತು. ಈ ಮಾಹಿತಿಯನ್ನ ಆಳಕ್ಕೆ ಇಳಿದು ತನಿಖೆ ನಡೆಸಿದಾಗ ಅದಾಗಲೇ ಟರ್ಕಿಯ ಫಂಡ್ ಭಾರತದಾದ್ಯಂತ ಹಂಚಿಕೆಯಾಗಿದೆ ಎಂಬ ಮಾಹಿತಿ ರಿವೀಲ್ ಆಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : ಹಾವಿನ ಹೆಡೆಗೆ ಮುತ್ತಿಡಲು ಹೋದ ಯುವಕ.! ಆಗಿದ್ದೇನು ನೋಡಿ..


ಅದರಲ್ಲೂ ಪಿಎಫ್ ಐ ಹಾಗೂ ಅದರ ಅಂಗಸಂಸ್ಥೆಗಳಿಗೆ ಹಣ ವರ್ಗಾವಣೆಯಾಗಿರೋದು ಬೆಳಕಿಗೆ ಬಂದಿದೆ.ಹೊಸದಾಗಿ ಟ್ರೈನಪ್ ಮಾಡಿದ ಯುವಕರನ್ನ ಬಳಸಿಕೊಂಡು ಸುಪಾರಿ ನೀಡಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಸಹ ಗೊತ್ತಾಗಿತ್ತು. ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾದ ದೋವಲ್ ಭಾರತ ಸರ್ಕಾರಕ್ಕೆ ಈ ಮಾಹಿತಿ ನೀಡಿದ್ದರು. ಅಷ್ಟರಲ್ಲಾಗ್ಲೇ ಪಿಎಫ್ಐ ಸಾಕಷ್ಟು ಕೇಸ್ ನಲ್ಲಿ ಭಾಗಿಯಾಗಿರುವ ಡೇಟಾ ಕೂಡ ಸರ್ಕಾರದ ಕೈ ಸೇರಿದ್ದವು. ಉಗ್ರ ಚಟುವಟಿಕೆಯ ಜೊತೆ ಕೈಜೋಡಿಸುವ ಕೆಲಸವನ್ನ ಪಿಎಫ್ಐ ಮಾಡುತ್ತಿರುವುದು ಪಕ್ಕಾ ಆಗಿತ್ತು.


ಟ್ರಸ್ಟ್ ಹೆಸರಲ್ಲಿ ಕೋಟಿ ಕೋಟಿ ಫಾರಿನ್ ಫಂಡ್ ಕೂಡ ಭಾರತಕ್ಕೆ ರವಾನೆಯಾಗಿತ್ತು.  ಈ  ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದ ಕೇಂದ್ರ ಸರ್ಕಾರ ಇದೀಗ ಪಿಎಫ್ಐ ಬ್ಯಾನ್ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಮುನ್ನ ಟ್ರಸ್ಟ್ ಹೆಸರಲ್ಲಿ ಕೋಟಿ ಕೋಟಿ ಹಣವನ್ನ ಅಕೌಂಟ್ ಗೆ ಇಳಿಸುತ್ತಿದ್ದವರ ಬಗ್ಗೆ ಗಮನ ಹರಿಸಲಾಗಿತ್ತು. ಎನ್ಐಎ, ಐಬಿ ಸೇರಿದಂತೆ ಗುಪ್ತಚರ ಇಲಾಖೆಗಳು ಇದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದವು. ಒಟ್ಟು 340 ಟ್ರಸ್ಟ್ ಗಳ ಬಗೆಗೂ ಮಾಹಿತಿಯನ್ನ ಕಲೆಹಾಕಿದ್ದ ಏಜೆನ್ಸಿಗಳ ಸಾಕ್ಷಿ ಅನ್ವಯ ಪಿಎಫ್ಐ ಸಂಘಟನೆಯ ಕೆಲ ಮುಖಂಡರನ್ನ ಬಂಧಿಸಲಾಗಿತ್ತು. 


ಇದನ್ನೂ ಓದಿ : Crime News : ಕರ್ನಾಟಕ ಅಗ್ನಿಶಾಮಕ, ತುರ್ತು ಸೇವಾ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್.!


ವೆಪನ್ ನಿಂದ ಹಿಡಿದು ಬಾಂಬ್ ವರೆಗೂ ಟ್ರೈನಿಂಗ್ ಕೊಡುವ ಕೆಲಸವನ್ನ ಕೆಲ ವ್ಯಕ್ತಿಗಳು ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ನಿಷೇಧಿತ ಸಿಮಿ ಸಂಘಟನೆಯಿಂದ ಹೊರಬಂದ ಕ್ರಿಮಿಗಳ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ನಿಗಾ ಇಟ್ಟಿತ್ತು.ಭಾರತಕ್ಕೆ ಟರ್ಕಿಯ ಹಣ ಹರಿದುಬಂದಿದ್ದೇ ರಕ್ತಪಾತಕ್ಕೆ ಕಾರಣವಾಗುತ್ತಿತ್ತು ಎಂಬ ಭಯಾನಕ ವಿಷಯ ಇದೀಗ ರಿವೀಲ್ ಆಗಿದೆ. ಸದ್ಯ ಅಜಿತ್ ದೋವಲ್ ಅವರ ಸಮಯೋಚಿತ ಮಾಹಿತಿ ದೇಶದಲ್ಲಾಗುವ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.