ಚಾಮರಾಜನಗರ : ಅಡುಗೆ ಮನೆಯ ಕಿಟಕಿ ಸರಳು ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನ ಕದ್ದಿದ್ದ ಪ್ರೇಮಿಗಳು ಸೇರಿ ಮೂವರನ್ನು ಚಾಮರಾಜನಗರ ಜಿಲ್ಲೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಭರತ್ ಹಾಗೂ ಕಾವ್ಯ, ಲೋಹಿತ್ ಕುಮಾರ್ ಬಂಧಿತ ಆರೋಪಿಗಳು. ಭರತ್ ಹಾಗೂ ಕಾವ್ಯ ಪ್ರೇಮಿಗಳಾಹಿದ್ದು ಹಣದ‌ ಮೋಹಕ್ಕೆ ಬಿದ್ದು ಭರತ್ " target="_blank">ಚಿನ್ನ ಕದ್ದು ಕಾವ್ಯಳಿಗೆ ಕೊಟ್ಟಿದ್ದ. ಈ ಲವರ್ಸ್ ಗೆ ಲೋಹಿತ್ ಎಂಬಾತ ಸಹಾಯ ಮಾಡಿದ್ದರಿಂದ ಆತನೂ ಜೈಲುಪಾಲಾಗಿದ್ದಾನೆ.


ಇದನ್ನೂ ಓದಿ : Bengaluru Crime : ಆರು ತಿಂಗಳ ಹಿಂದೆ ನಾಪತ್ತೆಯಾದ ನೇಪಾಳಿ ಮಹಿಳೆ ಅಸ್ಥಿಪಂಜರವಾಗಿ ಪತ್ತೆ 


ಏನಿದು ಕಳವು ಪ್ರಕರಣ: 


ಕೊಳ್ಳೇಗಾಲದ ಶ್ರೀ ಬಸವೇಶ್ವರ ನಗರದ ನಿವಾಸಿ ಹಾಗೂ ದತ್ತ ಮೆಡಿಕಲ್ ಮಾಲೀಕ ವಿನಯ್ ಅವರ ಮನೆಯಲ್ಲಿ ಕಿಟಕಿ ಸರಳನ್ನು ಜ.18 ರಂದು ಕತ್ತರಿಸಿ ಒಳ ನುಗ್ಗಿ 513 ಗ್ರಾಂ ಚಿನ್ನಾಭರಣ ಹಾಗೂ 49 ಸಾವಿರ ನಗದನ್ನು ಕಳವು ಮಾಡಲಾಗಿತ್ತು.


ದತ್ತ ಮೆಡಿಕಲ್ ಮಾಲೀಕ ವಿನಯ್ ಅವರು ಭಾವನ ಮನೆ ಶಿವಮೊಗ್ಗಕ್ಕೆ ಹೋಗಿದ್ದರು. ಇವರ ಪತ್ನಿ ರಶ್ಮಿ ಮನೆಗೆ ಬೀಗ ಹಾಕಿಕೊಂಡು ಬಂದು ಅಂಗಡಿಗೆ ಬಂದಿದ್ದ ವೇಳೆ ವಿನಯ್ ಅವರ ಹಿರಿಯ ಸಹೋದರ  ನಾಗರಾಜು ಬಾಬು ಅವರ ಮತ್ತೊಂದು ಮೆಡಿಕಲ್ ಅಂಗಡಿಯಲ್ಲಿ 10 ವರ್ಷದಿಂದ ನಂಬಿಕಸ್ಥ  ನೌಕರನಾಗಿ ಕೆಲಸ ಮಾಡುತ್ತಿದ್ದ ಭರತ್ ಎಂಬಾತ ಉಂಡ ಮನೆಗೆ ದ್ರೋಹ ಮಾಡಿದ್ದಾನೆ.  ಭರತ್ ಅಂದು ಮನೆಯಲ್ಲಿ ಕಳ್ಳತನ ಮಾಡಿ ಮೈಸೂರಿನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಪ್ರೇಯಸಿಗೆ ಕೊಟ್ಟು ಮಾರಾಟ ಮಾಡಿಸಲು ಪ್ರಯತ್ನ ಪಡುತ್ತಿದ್ದರು. ಇವರ ಜೊತೆ ಭರತ್ ಸ್ನೇಹಿತ ಲೋಹಿತ್ ಕುಮಾರ್ ಸಹ ಕೈ ಜೋಡಿಸಿದ್ದ ಕಾರಣ  ಈ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 


ಆರೋಪಿಗಳಿಂದ 513 ಗ್ರಾಂ ಚಿನ್ನಾಭರಣ, 20 ಸಾವಿರ ನಗದು, ಒಂದು ಬೈಕ್, ಒಂದು ಮೊಬೈಲ್ ಸೇರಿದಂತೆ ಇನ್ನೀತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.


ಇದನ್ನೂ ಓದಿ : ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಉಳಿಸಿಕೊಂಡವರಿಗೆ ಗುಡ್‌ ನ್ಯೂಸ್. !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.