ಜಮೀನಿಗೆ ನುಗ್ಗಿದ 15 ಜಾನುವಾರುಗಳಿಗೆ ಮಚ್ಚಿನೇಟು!; ಮುಗ್ಧ ಪ್ರಾಣಿಗಳ ಮೂಕರೋಧನೆ
ಗಡಿ ಜಿಲ್ಲೆ ರೈತರ ಮೇಲೆ ದರ್ಪ ಮೆರೆಯುತ್ತಿರುವ ಟಿಬೆಟಿಯನ್ನರು, 15ಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ, ಕೊಂಬುಗಳನ್ನು ಕತ್ತರಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಚಾಮರಾಜನಗರ: ಚಾಮರಾಜನಗರ: ಜೋಳದ ಬೆಳೆಯನ್ನು ತಿಂದಿವೆ ಎಂದು 15 ಜಾನುವಾರಗಳಿಗೆ ಮಚ್ಚಿನೇಟು ನೀಡಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರ ಪಾಳ್ಯ ಸಮೀಪದ ಟಿಬೆಟಿಯನ್ ಕ್ಯಾಂಪ್‌ನ ʼಡಿ ವಿಲೇಜ್ʼನಲ್ಲಿ ಬುಧವಾರ ಸಂಜೆ ನಡೆದಿದೆ.
ದಿ ವಿಲೇಜ್‌ನಲ್ಲಿ ಟಿಬೆಟಿಯನ್ನರು ವ್ಯವಸಾಯ ಮಾಡಿಕೊಂಡು ವಾಸವಿದ್ದಾರೆ. ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಹಿರಿಯಂಬಲ ಗ್ರಾಮದ ರಘು, ಸಿದ್ದಪ್ಪ, ಬಸವರಾಜು ಎಂಬುವವರು ಎತ್ತುಗಳನ್ನು ಮೇಯಲು ಬಿಟ್ಟಿದ್ದರು. ಈ ಸಂದರ್ಭದಲ್ಲಿ ಎತ್ತುಗಳು ಖಾಸಗಿ ಜಮೀನಿಗೆ ನುಗ್ಗಿ ಜೋಳದ ಫಸಲನ್ನು ತಿಂದಿವೆ. ಇದರಿಂದ ಕುಪಿತರಾದ ನಾಲ್ವರು ಟಿಬೇಟಿಯನ್ ವ್ಯಕ್ತಿಗಳು 15ಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ ಹಾಗೂ ಕೊಂಬುಗಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಓಡಿಸಿದ್ದಾರೆ.
ಸಣ್ಣಪುಟ್ಟ ಗಾಯಗಳಾಗಿದ್ದ ಎತ್ತುಗಳು ಮನೆಗಳಿಗೆ ತೆರಳಿದರೆ ತೀವ್ರ ಗಾಯಗೊಂಡಿದ್ದ ಮೂರು ಎತ್ತುಗಳು ನಡೆಯಲು ಆಗದೆ ಜಮೀನಿನಲ್ಲೇ ಅಸ್ವಸ್ಥಗೊಂಡು ಬಿದ್ದಿವೆ. ವಿಚಾರ ತಿಳಿಯುತ್ತಿದ್ದಂತೆ ಜಾನುವಾರುಗಳ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮೂಕಪ್ರಾಣಿಗಳ ಪರಿಸ್ಥಿತಿ ಕಂಡು ಗೋಳಾಡಿದ್ದಾರೆ.
ಗಡಿ ಜಿಲ್ಲೆ ರೈತರ ಮೇಲೆ ದರ್ಪ ಮೆರೆಯುತ್ತಿರುವ ಟಿಬೆಟಿಯನ್ನರು, 15ಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ, ಕೊಂಬುಗಳನ್ನು ಕತ್ತರಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಎತ್ತುಗಳು ಬದುಕಿದ್ದು ಸತ್ತಂತೆ ಆಗಿವೆ. ಎತ್ತುಗಳ ಸ್ಥಿತಿ ಕಂಡು ಎತ್ತುಗಳ ಮಾಲೀಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Typical Farming: ಕಡಿಮೆ ಹೂಡಿಕೆ ಮತ್ತು ಹೆಚ್ಚು ಲಾಭ..! ಲಕ್ಷಗಟ್ಟಲೆ ದುಡಿಯುತ್ತಿರುವ ಆದರ್ಶ ರೈತ
ಹೊಲಗಳಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಲಕ್ಷಾಂತರ ಬೆಲೆ ಬಾಳುವ ಎತ್ತುಗಳ ಕಾಲಗಳನ್ನೇ ಕತ್ತರಿಸಿದ್ದಾರೆ ಅಂತಾ ಮಹಿಳೆಯರು ಗೋಳಾಡುತ್ತಿರುವ ದೃಶ್ಯವು ಮನ ಕಲಕುವಂತಿತ್ತು. ಇನ್ನು ಈ ಅಮಾನವೀಯ ಘಟನೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.